Site icon Vistara News

Murder Attempt: ಬುಲೆಟ್ ಹಾರಿಸಿ, ಬಾಂಬ್ ಎಸೆದು ಟಿಎಂಸಿ ಕಾರ್ಯಕರ್ತರಿಂದ ಕೊಲೆ ಯತ್ನ: ಬಿಜೆಪಿ ನಾಯಕ ಆರೋಪ

Murder Attempt

ಪಶ್ಚಿಮ ಬಂಗಾಳದ (West Bengal) ಉತ್ತರ 24 ಪರಗಣ ಜಿಲ್ಲೆಯ ಭಟ್ಪರಾದಲ್ಲಿ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರು ತಮ್ಮ ಕಾರಿನ ಮೇಲೆ ದಾಳಿ (Murder Attempt) ನಡೆಸಿರುವುದಾಗಿ ಬಿಜೆಪಿ ನಾಯಕ (BJP Leader) ಅರ್ಜುನ್ ಸಿಂಗ್ ಆರೋಪಿಸಿದ್ದಾರೆ. ಬುಧವಾರ ಬೆಳಗ್ಗೆ ಮನೆಯಿಂದ ಹೊರಟ ಕೇವಲ ಮೂರು ನಿಮಿಷಗಳ ಬಳಿಕ ಬಾಂಬ್ ದಾಳಿಯಾಗಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮನೆಯಿಂದ ಬೆಳಗ್ಗೆ 8.15ಕ್ಕೆ ಹೊರಟಿದ್ದು, ಕೇವಲ ಮೂರು ನಿಮಿಷಗಳ ದೂರದಲ್ಲಿ ಜೆಟ್ಟಿಂಗ್ ಯಂತ್ರದಿಂದ ರಸ್ತೆಯನ್ನು ನಿರ್ಬಂಧಿಸಲಾಗಿತ್ತು. ಆಗ ಸುಮಾರು 50 -60 ಜನರು ನನ್ನ ವಾಹನವನ್ನು ಗುರಿಯಾಗಿಸಿಕೊಂಡು ಬಾಂಬ್ ಎಸೆದರು. ಅನಂತರ 6- 7 ಸುತ್ತು ಗುಂಡು ಹಾರಿಸಿದರು ಎಂದು ತಿಳಿಸಿದ್ದಾರೆ.

ಕಾರಿನ ಮೇಲೆ ಏಳು ಬುಲೆಟ್‌ಗಳು ಹಾರಿದ್ದು, ಬಂಗಾಳದ ಹಿರಿಯ ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲಿ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ.

‘ನಬಣ್ಣ ಅಭಿಜನ್’ ಪ್ರತಿಭಟನಾ ರಾಲಿಯಲ್ಲಿ ಪೊಲೀಸರ ಬಲಪ್ರಯೋಗವನ್ನು ವಿರೋಧಿಸಿ ಬಿಜೆಪಿ 12 ಗಂಟೆಗಳ ಬಂಗಾಳ ಬಂದ್‌ಗೆ ಕರೆ ನೀಡಿದ ಬಳಿಕ ಈ ದಾಳಿ ನಡೆದಿದೆ.

Murder Attempt


ಬಿಜೆಪಿ ನಾಯಕನ ಹತ್ಯೆಯ ಪ್ರಯತ್ನ

ನಮ್ಮ ಪಕ್ಷದ ನಾಯಕ ಪ್ರಿಯಾಂಗು ಪಾಂಡೆ ಅವರ ಹತ್ಯೆ ಪ್ರಯತ್ನ ನಡೆದಿದೆ. ಅವರ ಕಾರಿನ ಮೇಲೆ ಫೈರಿಂಗ್ ಮಾಡಲಾಗಿದೆ. ಚಾಲಕನ ಮೇಲೂ ಗುಂಡು ಹಾರಿಸಲಾಗಿದೆ. ಪ್ರಿಯಾಂಗು ಪಾಂಡೆಯನ್ನು ಕೊಲ್ಲಲು ಯೋಜನೆ ರೂಪಿಸಲಾಗಿದೆ. ಟಿಎಂಸಿಗೆ ಯಾವುದೇ ಸಮಸ್ಯೆ ಇಲ್ಲ. ಆದ್ದರಿಂದ ಅವರು ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅರ್ಜುನ್ ಸಿಂಗ್ ತಿಳಿಸಿದ್ದಾರೆ.

ಈ ದಾಳಿಯ ಹಿಂದೆ ತೃಣಮೂಲ ನಾಯಕರಾದ ತರುಣ್ ಸೌ ಮತ್ತು ಶಾಸಕ ಸೋಮನಾಥ್ ಶ್ಯಾಮ್ ಅವರ ಕೈವಾಡವಿದೆ ಎಂದು ಅರ್ಜುನ್ ಸಿಂಗ್ ಆರೋಪಿಸಿದ್ದು, ದುಷ್ಕರ್ಮಿಗಳನ್ನು ಕಾಕಿನಾರಾದಿಂದ ಕರೆತರಲಾಗಿದೆ ಎಂದು ದೂರಿದ್ದಾರೆ.

ಆಗಸ್ಟ್ 9ರಂದು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯದಲ್ಲಿ ತೃಣಮೂಲ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.

ರಾಜ್ಯದಲ್ಲಿ ಹಿಂಸಾಚಾರವನ್ನು ತಡೆಯಲು ಪಶ್ಚಿಮ ಬಂಗಾಳ ಪೊಲೀಸರು ಭಾರೀ ಭದ್ರತೆಯನ್ನು ಕೈಗೊಂಡಿರುವುದಾಗಿ ಉತ್ತರ ದಿನಾಜ್‌ಪುರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಸ್‌ಪಿ) ಡೆಂಡೂಪ್ ಶೆರ್ಪಾ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬ್ಬಂದಿಯನ್ನು ಎಲ್ಲೆಡೆ ನಿಯೋಜಿಸಲಾಗಿದೆ. ಕೋಲ್ಕತ್ತಾದ ಸರ್ಕಾರಿ ಬಸ್‌ ಚಾಲಕರು ಮತ್ತು ಕಂಡಕ್ಟರ್‌ಗಳು ಹೆಲ್ಮೆಟ್ ಧರಿಸುವಂತೆ ರಾಜ್ಯ ಆಡಳಿತ ಸೂಚನೆ ನೀಡಿದೆ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಉತ್ತರ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆಯ (ಎನ್‌ಬಿಎಸ್‌ಟಿಸಿ) ಬಸ್‌ಗಳ ಅನೇಕ ಚಾಲಕರು ರಾಜ್ಯಾದ್ಯಂತ ಹೆಲ್ಮೆಟ್ ಧರಿಸಿದ್ದರು.

ಇದನ್ನೂ ಓದಿ: Crimes Against Women: ಮಹಿಳೆಯರ ವಿರುದ್ಧದ ಅಪರಾಧ ಆರೋಪ: ಪ.ಬಂಗಾಳದ ಶಾಸಕ, ಸಂಸದರೇ ಹೆಚ್ಚು!

ಕೋಲ್ಕತ್ತಾದ ಬೀದಿಗಳಲ್ಲಿ ಮಂಗಳವಾರ ಘರ್ಷಣೆಗಳು ನಡೆದಿದ್ದು, ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‌, ನೀರಿನ ಫಿರಂಗಿಗಳನ್ನು ಬಳಸಿದರು ಹೌರಾ ಸೇತುವೆಯ ಮೇಲೆ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಲಾಯಿತು.

ಈ ಅವ್ಯವಸ್ಥೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾರಣ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆರೋಪಿಸಿದೆ.

Exit mobile version