ಶಿರಸಿ: ಬೈಕ್ ಓವರ್ ಟೇಕ್ (Over take) ಮಾಡುವ ವಿಷಯಕ್ಕೆ ಶುರುವಾದ ಜಗಳವು ತಾರಕಕ್ಕೇರಿ ಯುವಕನ ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಹಳಿಯಾಳ ಮೂಲದ ಪ್ರಜ್ವಲ ಪ್ರಕಾಶ ಕಕ್ಕೇರಿಕರ (24) ಮೃತ ದುರ್ದೈವಿ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಸಾಣಾ ಮರಾಠಿ, ಅನಿಕೆತ್ ಮಿರಾಶಿ, ರಿತೇಶ್ ಪಾಟೀಲ್, ಪಾಂಡುರಂಗ ಕಳಸುರಕರ್ ಹಾಗೂ ಪ್ರಶಾಂತ್ ಕಲಸುರಕರ್, ರೂಪೇಶ್ ಕೊಲೆ ಮಾಡಿರುವ ಆರೋಪಿಗಳೆಂದು ಗುರುತಿಸಲಾಗಿದೆ.
ಬೈಕ್ ಓವರ್ ಟೆಕ್ ಮಾಡುವ ವಿಷಯದಲ್ಲಿ ಪ್ರಜ್ವಲ ಜತೆಗೆ ಇತರೆ ಯುವಕರೊಟ್ಟಿಗೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಹೊಡಿಬಡಿ ಮಟ್ಟಕ್ಕೆ ತಲುಪಿದೆ. ಪ್ರಜ್ವಲಗೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.
ಸದ್ಯ ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನು ಓದಿ: Chaithra Hebbar : ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಿಗೂಢ ನಾಪತ್ತೆ; ಯಾರು ಈ ಶಾರುಖ್ ಶೇಖ್?
ಮಿಸ್ಸಿಂಗ್ ಆದ ವಿದ್ಯಾರ್ಥಿ ನೀಲಗಿರಿ ತೋಪಿನಲ್ಲಿ ಶವವಾಗಿ ಪತ್ತೆ
ಆನೇಕಲ್: ಕಾಣೆಯಾಗಿದ್ದ ಬಿ.ಟೆಕ್ ವಿದ್ಯಾರ್ಥಿ ಶವವಾಗಿ (Dead body found) ಪತ್ತೆಯಾಗಿದ್ದಾನೆ. ಗುಮ್ಮಳಾಪುರದ ಅಲಯನ್ಸ್ ಯೂನಿವರ್ಸಿಟಿಯ ವಿದ್ಯಾರ್ಥಿ ಹರ್ಷಿತ್ ಕೊಟ್ನಾಲಾ (22) ಮೃತ ದುರ್ದೈವಿ. ಯಾರೋ ಹಂತಕರು ಹರ್ಷಿತ್‌ನನ್ನು ಕೊಲೆಗೈದು (Murder Case) ನಂತರ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಆನೇಕಲ್ ಸಮೀಪದ ತೆಲಗರಹಳ್ಳಿಯ ನೀಲಗಿರಿ ತೋಪಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ (Student Missing) ಸಿಕ್ಕಿದೆ.
ಇದೇ ಫೆ. 21ರಂದು ತಮಿಳುನಾಡಿನ ಗುಮ್ಮಳಾಪುರದ ಅಲಯನ್ಸ್ ಯೂನಿವರ್ಸಿಟಿ ಹಾಸ್ಟೆಲ್‌ನಿಂದ ಹೊರ ಹೋದ ಹರ್ಷಿತ್ ನಂತರ ನಾಪತ್ತೆಯಾಗಿದ್ದ. ಎಷ್ಟೇ ಹುಡುಕಾಟ ನಡೆಸಿದರೂ ಕಾಣದಿದ್ದಾಗ ತಮಿಳುನಾಡಿನ ತಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ನೀಡಿದ್ದರು.
ಇದನ್ನೂ ಓದಿ: ಮಗು ಸತ್ತಿದೆ ಎಂದು ಸುಳ್ಳು ಹೇಳಿ ಮಾರಾಟ; ಕಟುಕರ ತಾಣವಾದ ಕೊಪ್ಪಳ ಜಿಲ್ಲಾಸ್ಪತ್ರೆ!
ಈ ಮಧ್ಯೆ ತೆಲಗರಹಳ್ಳಿಯ ನೀಲಗಿರಿ ತೋಪಿನ ಬಳಿ ಸ್ಥಳೀಯರಿಗೆ ಶವವೊಂದು ಕಂಡಿತ್ತು. ಕೂಡಲೇ ಆನೇಕಲ್ ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಸ್ಥಳದಲ್ಲಿ ದೊರೆತ ದಾಖಲೆಗಳ ಆಧಾರದ ಮೇಲೆ ಹರ್ಷಿತ್ ಎಂದು ಗುರುತಿಸಿದ್ದಾರೆ.
ಸ್ನೇಹಿತರೇ ಹಂತಕರಾ?
ಫೆ. 21ರಂದು ಹರ್ಷಿತ್ ಕಾಲೇಜ್ ಬಸ್‌ನಲ್ಲಿ ತೆರಳದೆ ಹಾಸ್ಟೆಲ್‌ನಿಂದ ತಡವಾಗಿ ಹೊರಟ್ಟಿದ್ದ. ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಲೇಜಿಗೆ ಹೋಗದೆ ಸ್ನೇಹಿತರ ಜತೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ತೆಲಗರಹಳ್ಳಿಯ ನಿರ್ಜನ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮದ್ಯದ ಬಾಟೆಲ್, ತಿಂಡಿ-ತಿನಿಸು ಬಿದ್ದಿದೆ.
ಈ ನಡುವೆ ಹರ್ಷಿತ್ ಹಾಗೂ ಸ್ನೇಹಿತರ ನಡುವೆ ಏನು ನಡೆದಿದ್ದಯೋ ತಿಳಿದಿಲ್ಲ. ದುಷ್ಟರು ಹರ್ಷಿತ್‌ನನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಯಾಕಾಗಿ ಹತ್ಯೆ ನಡೆದಿದೆ? ಯಾರು ಹಂತಕರು ಎಂಬುದರ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ