Site icon Vistara News

Murder Case : ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಮೇಸ್ತ್ರಿಯನ್ನು ದೊಣ್ಣೆಯಿಂದ ಹೊಡೆದು ಕೊಂದ ಗಂಡ

Anekal Murder Case

ಆನೇಕಲ್: ಕಟ್ಟಡ ಕಾರ್ಮಿಕನೊಬ್ಬ (Building Labourer) ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ (lllicit relationship) ಹೊಂದಿದ್ದಾನೆ ಎಂಬ ಸಿಟ್ಟಿನಲ್ಲಿ ಕಟ್ಟಡದ ಮೇಸ್ತ್ರಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ (Murder Case). ಬನ್ನೇರುಘಟ್ಟ ಪೋಲೀಸ್ ಠಾಣಾ ವ್ಯಾಪ್ತಿಯ ಬೇಗಿಹಳ್ಳಿಯ ವಸುಂಧರ ಲೇಔಟ್ ನಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೇಗಿಹಳ್ಳಿಯಲ್ಲಿ ಕೊಲೆಯಾದವನನ್ನು ತಮಿಳುನಾಡು ಮೂಲದ ದಿಲೀಪ್(27) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದವನು ರಾಯಚೂರು ಮೂಲದ ಹೊನ್ನಪ್ಪ.

ತಮಿಳುನಾಡು ಮೂಲದ ಗಾರೆ ಮೇಸ್ತ್ರಿ ದಿಲೀಪ್‌ ವಸುಂಧರ ಲೇಔಟ್‌ನಲ್ಲಿ ನಾಲ್ಕೈದು ಕಟ್ಟಡಗಳಿಗೆ ಗಾರೆ ಮಾಡಲು ಒಪ್ಪಂದದಲ್ಲಿ ತೆಗೆದುಕೊಂಡಿದ್ದ. ದಿಲೀಪ್ ಬಳಿ ಗಾರೆ ಕೆಲಸ ಮಾಡುತ್ತಿದ್ದ ವರು ರಾಯಚೂರು ಮೂಲದ ಹೊನ್ನಪ್ಪ ಹಾಗೂ ಅವನ ಪತ್ನಿ ರೇಣಮ್ಮ.

ಕಾರ್ಮಿಕರಾದ ಹೊನ್ನಪ್ಪ ಮತ್ತು ರೇಣಮ್ಮ ಅವರ ಜತೆಗೆ ಉತ್ತಮ ಸಂಬಂಧವನ್ನು ಹೊಂದಿದ್ದ ದಿಲೀಪ್‌ಗೆ ಈ ನಡುವೆ ರೇಣಮ್ಮನ ಮೇಲೆ ಕಣ್ಣು ಬಿದ್ದಿತ್ತು. ಹೊನ್ನಪ್ಪನನ್ನು ಕಟ್ಟಡದ ಬೇರೆ ಭಾಗಕ್ಕೆ ಕಳುಹಿಸಿ, ಇಲ್ಲವೇ ಬೇರೆ ಕಡೆಗೆ ಕಳುಹಿಸಿ ದಿಲೀಪ್‌ ರೇಣಮ್ಮನ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂದು ಹೇಳಲಾಗುತ್ತಿದೆ.

ಈ ನಡುವೆ ಗುರುವಾರ ಬೆಳಗ್ಗೆ ಕೂಡಾ ಹೊನ್ನಪ್ಪ ಹೊರಗಡೆ ಹೋಗಿದ್ದ. ಒಂದು ಹಂತದಲ್ಲಿ ಆತ ನಿರ್ಮಾಣ ಹಂತದ ಕಟ್ಟಡದ ಬಳಿ ಬಂದಾಗ ಅಲ್ಲಿನ ಒಂದು ಕೊಠಡಿಯಲ್ಲಿ ತನ್ನ ಪತ್ನಿ ಮತ್ತು ದಿಲೀಪ್‌ ಜತೆಯಾಗಿ ಇರುವುದನ್ನು ಗಮನಿಸಿದ. ಸಿಟ್ಟಿಗೆದ್ದ ಆತ ಅಲ್ಲೇ ಇದ್ದ ದೊಣ್ಣೆಯಿಂದ ದಿಲೀಪ್‌ನ ತಲೆಗೆ ಹೊಡೆದಿದ್ದ.

ಹೊನ್ನಪ್ಪನ ಹೊಡೆತಕ್ಕೆ ಗಂಭೀರವಾಗಿ ಗಾಯಗೊಂಡ ದಿಲೀಪ್‌ ಸ್ಥಳದಲ್ಲೇ ಕುಸಿದುಬಿದ್ದಿದ್ದ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಬನ್ನೇರುಘಟ್ಟ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಆರೋಪಿ ಹೊನ್ನಪ್ಪನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Illicit relationship: ಪತ್ನಿಯನ್ನು ಕೊಲೆ ಮಾಡಿ ಅತ್ತೆಗೆ ಫೋನ್‌ ಮಾಡಿ ಹೇಳಿದ ಅಳಿಯ!

ಕ್ರಿಕೆಟ್‌ ಆಡಲು ಕರೆಯಲಿಲ್ಲ ಎಂದು ಲಾಂಗ್‌, ಮಚ್ಚು ಜಳಪಿಸಿದ ಯುವಕ

ಆನೇಕಲ್‌: ಕ್ರಿಕೆಟ್ ಆಟಕ್ಕೆ ಕರೆಯಲಿಲ್ಲ ಎಂದು ಸಿಟ್ಟುಗೊಂಡ ಯುವಕನೊಬ್ಬ ಲಾಂಗ್ ಹಿಡಿದು ಫೀಲ್ಡ್ ಗಿಳಿದ ಘಟನೆ ಜಿಗಣಿ ಸಮೀಪದ ದ್ಯಾವಸಂದ್ರದಲ್ಲಿ ಘಟನೆ ನಡೆದಿದೆ. ದ್ಯಾವಸಂದ್ರ ವಾಸಿ ಅಭಿಷೇಕ್ ಎಂಬಾತನೇ ಲಾಂಗು ಮಚ್ಚು ಜಳಪಿಸಿದ ಯುವಕ.

ಸ್ವಾತಂತ್ರ್ಯ ದಿನಾಚರಣೆಯಂದು ಗ್ರಾಮದ ಯುವಕರು ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಿದ್ದರು. ಈ ವೇಳೆ ಬೈಕ್‌ನಲ್ಲಿ ನೇರವಾಗಿ ಪಿಚ್‌ ಬಳಿ ಎಂಟ್ರಿ ಕೊಟ್ಟ ಅಭಿಷೇಕ್‌ ಕೈಯಲ್ಲಿದ್ದ ಲಾಂಗ್‌ನ್ನು ಜಳಪಿಸಿದ.

ನನಗೆ ಕರೆಯದೆ ಯಾರೂ ಕೂಡ ಕ್ರಿಕೆಟ್ ಆಡಬಾರದು ಎಂದು ಅವಾಜ್ ಹಾಕಿದ ಆತ ಆಟವಾಡುತ್ತಿದ್ದ ಗ್ರಾಮದ ಯುವಕರಿಗೆ ಲಾಂಗ್ ತೋರಿಸಿ ಧಮ್ಕಿ ಹಾಕಿದ್ದಾನೆ. ಅದರ ಜತೆಗೆ ಗ್ರಾಮದ ಯುವಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಬಗ್ಗೆ ಜಿಗಣಿ ಪೊಲೀಸರಿಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮತ್ತು ನ್ಯಾಯನಕ್ಕಾಗಿ ಒತ್ತಾಯಿಸಿದ್ದಾರೆ.

Exit mobile version