ಚಾಮರಾಜನಗರ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (CP Yogeshwar) ಭಾವ ಮಹದೇವಯ್ಯ (Mahadevaiah) ನಾಪತ್ತೆ ಪ್ರಕರಣ ಕೊನೆಗೂ ದುಃಖದಲ್ಲಿ ಅಂತ್ಯವಾಗಿದೆ. ಅವರನ್ನು ಕೊಲೆ ಮಾಡಿರುವ ಸಂಗತಿ ಬಯಲಾಗಿದೆ. ಮಹದೇವಯ್ಯ ಪತ್ತೆಗೆ ಚನ್ನಪಟ್ಟಣ (Channapatna News) ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿತ್ತು. ಆದರೆ, ಈಗ ಅವರು ಕೊಲೆಯಾಗಿರುವುದು (Murder Case) ತನಿಖೆಯಿಂದ ಗೊತ್ತಾಗಿದೆ.
ಮಹದೇವಯ್ಯ ಪುತ್ರ ಪ್ರಶಾಂತ್ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ನಾಲ್ಕು ತಂಡಗಳಿಂದ ಸಮಗ್ರವಾಗಿ ತನಿಖೆ ನಡೆಯುತ್ತಲಿದೆ. ಈ ವೇಳೆ ನ.2ರಂದೇ ಮಹದೇವಯ್ಯ ಕೊಲೆಯಾಗಿರುವುದು ಪೊಲೀಸರಿಗೆ ಗೊತ್ತಾಗಿದೆ.
ರಸ್ತೆ ಬದಿ ಮೃತದೇಹ ಪತ್ತೆ
ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಭಾವ ಮಹದೇವಯ್ಯ (58) ಅವರ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳು ಕೊಲೆಮಾಡಿ ರಸ್ತೆ ಬದಿ ಮೃತದೇಹ ಎಸೆದು ಹೋಗಿದ್ದಾರೆ. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಮಹದೇವಯ್ಯ ಅವರು ಜಿಲ್ಲೆಯ ರಾಮಪುರ ಅರಣ್ಯದ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ: Belagavi Winter Session: ಕಾವೇರಿದ ಚರ್ಚೆ ನಡುವೆ ಬಿಸಿ ಬಿಸಿ ಕಾಫಿ ಮಾಡಿಕೊಂಡು ಕುಡಿದ ಕೃಷ್ಣ ಬೈರೇಗೌಡ
ಅಪಹರಣಕಾರರ ಚಲನವಲನ ಪತ್ತೆ
ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ತನಿಖೆ ವೇಳೆ ಕೆಲವು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದಾಗ ಕೊಲೆ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಗಳು ಪ್ರಬಲ ಸಾಕ್ಷ್ಯಗಳನ್ನು ಒದಗಿಸಿವೆ. ರಾಮಪುರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಅಪಹರಣಕಾರರ ಚಲನವಲನ ಗೊತ್ತಾಗಿದೆ. ಕಾರು ನಿಲ್ಲಿಸಿ ನಡೆದುಕೊಂಡು ಹೋಗಿರುವ ಮೂವರು ಈ ಅಪಹರಣ ಮಾಡಿದ್ದಾರೆಂದು ಗೊತ್ತಾಗಿದೆ.
15 ನಿಮಿಷ ಕಾಡಿನ ದಾರಿಯಲ್ಲಿ ಸುತ್ತಾಟ
ನ. 2ರಂದು ಬೆಳಗ್ಗೆ 4.05ಕ್ಕೆ ರಾಮಪುರಕ್ಕೆ ದುಷ್ಕರ್ಮಿಗಳು ಆಗಮಿಸಿದ್ದಾರೆ. 4.20ಕ್ಕೆ ರಾಮಪುರದಿಂದ ಹೊರ ನಡೆದಿದ್ದಾರೆ. ಸುಮಾರು 15 ನಿಮಿಷ ಕಾಡಿನ ದಾರಿಯಲ್ಲಿ ಕಿಡ್ನಾಪರ್‌ಗಳು ಓಡಾಡಿದ್ದಾರೆ.
ಹನೂರು- ನಾಲ್ ರೋಡ್- ಈರೋಡ್ ರಸ್ತೆ ಮಾರ್ಗವಾಗಿ ಸಂಚರಿಸಿದ್ದಾರೆ. ವಾಪಸ್ ಹೋಗುವಾಗ ರಾಮಪುರದಲ್ಲಿ ಕಾರು ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ ಎಂದು ಗೊತ್ತಾಗಿದೆ. ಬೇರೆಡೆ ಹೊಡೆದು ಮಾಡಿ ಮಲೆ ಮಹದೇಶ್ವರ ಬೆಟ್ಟಕ್ಕೆ ತಂದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಚಲನವಲನದ ಆಧಾರದ ಮೇಲೆ ಪೊಲೀಸರು, ಅರಣ್ಯ ಇಲಾಖೆಯಿಂದ ಕೂಂಬಿಂಗ್ ಶುರುವಾಗಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಹದೇವಯ್ಯ
ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಸಹೋದರಿ ಪುಷ್ಪಾ ಅವರ ಪತಿ ಮಹದೇವಯ್ಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಶುಕ್ರವಾರ ರಾತ್ರಿ ತೋಟದ ಮನೆಯಲ್ಲಿ (Channapatna News) ಇದ್ದವರು ನಾಪತ್ತೆಯಾಗಿದ್ದರು. ಅವರು ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದಲ್ಲಿ ವಾಸವಾಗಿದ್ದರು. ಮಹದೇಶ್ವರ ಬೆಟ್ಟದಲ್ಲಿ ಟವರ್ ಲೊಕೇಶನ್ ಟ್ರೇಸ್ ಆಗಿತ್ತು, ಮನೆಯಲ್ಲಿ ಬೀರು ಓಪನ್ ಆಗಿ, ಬೆಡ್ ರೂಮ್‌ನಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿತ್ತು.
ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬೆಳಗ್ಗೆಯಿಂದ ಮಹದೇವಯ್ಯ ಫೋನ್ ಸ್ವಿಚ್ ಆಫ್ ಆಗಿದ್ದು, ಕಾರು ಕೂಡಾ ನಾಪತ್ತೆಯಾಗಿದೆ. ಹೀಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.
ಇದನ್ನೂ ಓದಿ: Belagavi Winter Session: ಭ್ರೂಣ ಹತ್ಯೆ ಕೇಸ್; ಕೋರ್ಟ್‌ನಲ್ಲಿ ಕೇಸ್ ದಾಖಲಿಸಲು ಸದನದಲ್ಲಿ ಒತ್ತಾಯ
ಕಂದಾಯ ಇಲಾಖೆ ಸಂಬಂಧಿಸಿದ ಡಾಕ್ಯುಮೆಂಟ್‌ಗಳನ್ನು ಅವರು ಮಾಡುತ್ತಿದ್ದರು. ಎಲ್ಲ ಫೈಲ್‌ಗಳನ್ನು ಇಲ್ಲಿಯೇ ಇದ್ದು ರೆಡಿ ಮಾಡುತ್ತಿದ್ದರು. ಹಣಕಾಸು, ಚಿನ್ನಾಭರಣ ಯಾವುದೂ ಕಳುವಾಗಿಲ್ಲ. ಇಲ್ಲಿನ ವಾತಾವರಣ ನೋಡಿದರೆ ಬಲವಂತವಾಗಿ ಕರೆದುಕೊಂಡು ಹೋದ ಹಾಗೆ ಇದೆ ಎಂದು ಮಾಜಿ ಸಚಿವ ಯೋಗೇಶ್ವರ್ ಸಹೋದರ ರಾಜೇಶ್ ಶಂಕಿಸಿದ್ದರು.