ಬೆಂಗಳೂರು: ಕೆ.ಆರ್. ಪುರಂ ಠಾಣಾ ವ್ಯಾಪ್ತಿಯ ನಿಸರ್ಗ ಲೇಔಟ್‌ನಲ್ಲಿ ನಡೆದ ವೃದ್ಧೆ ಸುಶೀಲಮ್ಮ ಭೀಕರ ಹತ್ಯೆ ಪ್ರಕರಣವು ಜನರನ್ನು ಬೆಚ್ಚಿಬೀಳಿಸಿದೆ. ಬಂಧಿತ ಆರೋಪಿ ದಿನೇಶ್ ವಿಚಾರಣೆ ವೇಳೆ ಅಜ್ಜಿ ದೇಹವನ್ನು ತುಂಡು ಮಾಡಿದ್ದಾಗಿ (Murder Case) ಒಪ್ಪಿಕೊಂಡಿದ್ದಾನೆ.
ಫೆ.24ರ ಮಧ್ಯಾಹ್ನ ಆರೋಪಿ ದಿನೇಶ್ ಮನೆಗೆ ಸುಶೀಲಮ್ಮ ಹೋಗಿದ್ದರು ಎನ್ನಲಾಗಿದೆ. ಅಜ್ಜಿ ಸುಶೀಲಮ್ಮ ನಮ್ಮ ಮನೆಗೆ ಬಂದಾಗ ಬಾತ್ ರೂಂ ಬಳಿ ಕಾಲು ಜಾರಿ ಬಿದ್ದರು. ಈ ವೇಳೆ ಜೋರಾಗಿ ಕೂಗಿದರೂ ಅಜ್ಜಿ ಎದೇಳಿಲ್ಲ ನಂತರ ನಮ್ಮ ಮನೆಯಲ್ಲೇ ಮೃತಪಟ್ಟರು. ಆ ದಿನ ಮನೆಯಲ್ಲಿ ಹೆಂಡತಿ ಮಕ್ಕಳು ಕಾರ್ಯಕ್ರಮ ಒಂದಕ್ಕೆ ಹೋಗಿದ್ದರು. ಅಜ್ಜಿ ಮೃತಪಟ್ಟಾಗ ಏನು ಮಾಡಬೇಕು ಎಂಬುದು ಗೊತ್ತಾಗಿಲ್ಲ ಎಂದಿದ್ದಾನೆ.
ತನ್ನದೇ ಮನೆಯಲ್ಲಿ ದಿನೇಶ್ ಅಜ್ಜಿಯ ಮೃತದೇಹದೊಂದಿಗೆ ಒಂದು ದಿನ ಕಳೆದಿದ್ದಾನೆ. 24ರ ರಾತ್ರಿ ಅಜ್ಜಿಯ ಮೃತದೇಹವನ್ನು ತುಂಡು ತುಂಡಾಗಿ ಕಟ್ ಮಾಡಿದ್ದಾನೆ. ನಂತರ ಕೆ.ಆರ್.ಪುರಂ ಬಸ್ ಸ್ಟ್ಯಾಂಡ್ ಬಳಿ ಡ್ರಮ್ ಹಾಗೂ ಡಸ್ಟ್ ಬೀನ್ ಕವರ್ ಖರೀದಿ ಮಾಡಿದ್ದಾನೆ. ಫೆ.25 ರ ಮುಂಜಾನೆ 3:30ಕ್ಕೆ ವೃದ್ಧೆಯ ದೇಹವನ್ನು ತುಂಡು ತುಂಡಾಗಿ ಕಟ್ ಮಾಡಿ ಡ್ರಮ್‌ಗೆ ತುಂಬಿ ಬಿಸಾಡಲು ಪ್ಲಾನ್ ಮಾಡಿದ್ದ. ಅದರಂತೆ ಆವಲಹಳ್ಳಿ ಕೆರೆಗೆ ಮೃತದೇಹದ ಕೆಲ ಭಾಗಗಳನ್ನು ಬಿಸಾಡಿ ಬಂದಿದ್ದ.
ಮೃತದೇಹ ಬಿಸಾಡುವ ಮುನ್ನ ಮನೆಯ ಮುಂಭಾಗದ ಬೀದಿ ದೀಪವನ್ನು ಆಫ್ ಮಾಡಿದ್ದ. ಆ ನಂತರ ಮೃತದೇಹವಿದ್ದು ಡ್ರಮ್ ತಗೆದುಕೊಂಡು ಹೋಗಿ ಪಾಳು ಮನೆ ಬಳಿ ಬಿಸಾಡಿ ಬಂದಿದ್ದ. ಪೊಲೀಸರು ಸಿಸಿ ಟಿವಿ ಪರಿಶೀಲನೆ ವೇಳೆ ಆರೋಪಿ ಚಹರೆ ಪತ್ತೆಯಾಗಿತ್ತು. ಪೊಲೀಸರು ಆರೋಪಿ ದಿನೇಶ್‌ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ವೃದ್ಧೆ ಆಕಸ್ಮಿಕವಾಗಿ ಕಾಲು ಜಾರಿ ಮೃತಪಟ್ಟರಾ? ಒಂದು ವೇಳೆ ಆಕಸ್ಮಿಕವಾಗಿ ಮೃತಪಟ್ಟರೂ, ಈ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸದೇ ದಿನೇಶ್ ಯಾಕಾಗಿ ವೃದ್ಧೆ ದೇಹವನ್ನು ತುಂಡು ತುಂಡಾಗಿ ಮಾಡಿದ ಎಂಬ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಾಡುತ್ತಿದ್ದಾರೆ.
ಇದನ್ನೂ ಓದಿ: Bike Wheeling : ಮಕ್ಕಳ ವ್ಹೀಲಿಂಗ್ ಶೋಕಿಗೆ ಪೋಷಕರಿಗೆ ದಂಡ
ಬಿಜೆಪಿಯ ಕಾರ್ಯಕರ್ತೆ ಸುಶೀಲಮ್ಮ
ಬಿಜೆಪಿಯ ಕಾರ್ಯಕರ್ತೆರಾಗಿದ್ದ ಸುಶೀಲಮ್ಮ ಮೂಲತಃ ಚಿಕ್ಕಬಳ್ಳಾಪುರದವರಾಗಿದ್ದು, ಬೆಂಗಳೂರಲ್ಲಿ ನೆಲೆಸಿದ್ದರು. ಸುಶೀಲಮ್ಮಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗನಿದ್ದ. ಸುಶೀಲಮ್ಮ ಮಕ್ಕಳಿಂದ ಪ್ರತ್ಯೇಕವಾಗಿದ್ದರು. ಆಸ್ತಿ ಮಾರಾಟದಿಂದ ಬಂದಿದ್ದ ಹಣದಲ್ಲಿ ನಿಸರ್ಗ ಲೇಔಟ್‌ನಲ್ಲಿ ಮನೆಯನ್ನು ಲೀಸ್‌ಗೆ ಪಡೆದು ವಾಸವಿದ್ದರು. ಸುಶೀಲಮ್ಮ ಇದ್ದ ಕಟ್ಟಡದಲ್ಲೇ ಕಿರಿಯ ಪುತ್ರಿ ವಾಸವಿದ್ದರು. ಆದರೆ ತಾಯಿ ನಾಪತ್ತೆಯಾಗಿದ್ದರೂ ಮಕ್ಕಳು ಗಂಭೀರವಾಗಿ ಪರಿಗಣಿಸಿಲ್ವಾ ಎಂಬ ಪ್ರಶ್ನೆ ಕಾಡುತ್ತೆ.
ಆದರೆ ಕೆಲವೊಮ್ಮೆ ಮನೆಯಿಂದ ಹೊರ ಹೋದರೆ ಸುಶೀಲಮ್ಮ ಎರಡ್ಮೂರು ದಿನ ಮನೆಗೆ ಬರುತ್ತಿರಲಿಲ್ಲ. ಹಾಗಾಗಿ ಮಕ್ಕಳು ಕೂಡ ಅಷ್ಟೊಂದು ತಲೆ ಕೆಡಿಸಿಕೊಂಡು ಹುಡುಕಿರಲಿಲ್ಲ. ಫೆ.25ರ ಸಂಜೆ ಡ್ರಮ್‌ನಲ್ಲಿ ಮೃತದೇಹ ಪತ್ತೆಯಾದಾಗಲೇ ತಾಯಿ ಹತ್ಯೆಯಾಗಿದೆ ಎಂಬುದು ತಿಳಿದು ಬಂದಿದೆ. ಬಿಜೆಪಿ ಕಾರ್ಯಕರ್ತೆಯಾಗಿದ್ದ ಸುಶೀಲಮ್ಮಗೆ ಕಳೆದ ಬಾರಿಯ ಚುನಾವಣಾ ಪ್ರಚಾರದಲ್ಲಿ ದಿನೇಶ್ ಪರಿಚಯವಾಗಿದ್ದ ಎನ್ನಲಾಗಿದೆ.
ಸದ್ಯ, ವೃದ್ಧೆ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದು ತಾನೇ ಎಂದು ಹೇಳಿಕೆ ನೀಡಿರುವ ದಿನೇಶ್, ಕೊಲೆಗೆ ಕಾರಣವೇನು ಎಂಬುದನ್ನು ಹೇಳುತ್ತಿಲ್ಲ. ಹತ್ಯೆಯ ಹಿಂದಿನ ಮೋಟಿವ್ ಬಗ್ಗೆ ತುಟಿ ಬಿಚ್ಚಿಲ್ಲ. ಮಾಂಸ ಕತ್ತರಿಸುವ ಕತ್ತಿಯಿಂದ ತುಂಡು ತುಂಡು ಮಾಡಿದ್ದಾನೆ. ಹಾಗಾದರೆ ಕೊಲೆಗೆ ಬಳಸಿದ ಕತ್ತಿ ಎಲ್ಲಿಂದ ತಂದಿದ್ದ? ಮೊದಲೇ ಪ್ಲಾನ್ ಮಾಡಿದ್ದನಾ? ಹಂತಕ ದಿನೇಶ್ ಒಬ್ಬನೆ ಕೊಲೆ ಮಾಡಿದ್ದನಾ? ಬೇರೆ ಯಾರಾದರೂ ಕೈ ಜೋಡಿಸಿದ್ದರಾ ಎಂಬ ಆಯಾಮದಲ್ಲಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ