Site icon Vistara News

Murder Case: ಹೆಂಡತಿಯ ಕೊಂದ ಗಂಡನ ಸುಳಿವಿಗೆ 3 ಕೋಟಿ ರೂ. ಬಹುಮಾನ!

murder-case

ಮೇರಿಲ್ಯಾಂಡ್‌: ಕೊಲೆ ಪ್ರಕರಣದ (murder case) ಆರೋಪಿಯಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಭದ್ರೇಶ್‌ಕುಮಾರ್ ಚೇತನ್‌ಭಾಯ್ ಪಟೇಲ್ ಅಲಿಯಾಸ್ ಭದ್ರೇಶ್‌ಕುಮಾರ್ ಸಿ. ಪಟೇಲ್‌ನ (Bhadreshkumar Chetanbhai Patel alias Bhadreshkumar C. Patel) ಸುಳಿವು ನೀಡಿದವರಿಗೆ 2,50,000 ಡಾಲರ್ (3 ಕೋಟಿ ರೂ.) ಬಹುಮಾನವನ್ನು ಯುನೈಟೆಡ್ ಸ್ಟೇಟ್ಸ್ ನ (United States) ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನ (Federal Bureau of Investigation) ಅಧಿಕಾರಿಗಳು ಘೋಷಿಸಿದ್ದಾರೆ.

ಗುಜರಾತ್‌ನ (gujarat) ಕಂತ್ರೋಡಿ ತಾಲೂಕಿನ ವಿರಾಮ್‌ಗಮ್‌ನ 34 ವರ್ಷದ ಭಾರತೀಯ ಮೂಲದ ಭದ್ರೇಶ್‌ಕುಮಾರ್ ಸಿ. ಪಟೇಲ್‌ 2015ರ ಏಪ್ರಿಲ್ 12ರಂದು ತನ್ನ ಹೆಂಡತಿಯನ್ನು ಕೊಂದು ಪರಾರಿಯಾಗಿದ್ದಾನೆ.

ಯುನೈಟೆಡ್ ಸ್ಟೇಟ್ಸ್‌ನ ಮೇರಿಲ್ಯಾಂಡ್‌ನ ಹ್ಯಾನೋವರ್‌ನಲ್ಲಿರುವ ಭದ್ರೇಶ್‌ಕುಮಾರ್ ಸಿ. ಪಟೇಲ್‌ ಮತ್ತು ಆತನ ಪತ್ನಿ ಪಾಲಕ್ ಪಟೇಲ್ ಡೋನಟ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಟ್ರಯಲ್‌, ಇನ್ನಷ್ಟು ಭೀಕರ ಸ್ಫೋಟಗಳಿಗೆ ಸಿದ್ಧತೆ ಮಾಡಿದ್ದರು ಉಗ್ರರು!

2015ರ ಏಪ್ರಿಲ್ 13ರಂದು ಮೇರಿಲ್ಯಾಂಡ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಹೊರಡಿಸಲಾದ ಬಂಧನ ವಾರಂಟ್ ಪ್ರಕಾರ ಪಟೇಲ್ ವಿರುದ್ಧ ಉದ್ದೇಶಪೂರ್ವಕವಾಗಿ ಹಲ್ಲೆ, ಕೊಲೆ ಮಾಡಿರುವ ಆರೋಪವಿದೆ.

ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್, ಡಿಸ್ಟ್ರಿಕ್ಟ್ ಆಫ್ ಮೇರಿಲ್ಯಾಂಡ್, ಬಾಲ್ಟಿಮೋರ್, ಮೇರಿಲ್ಯಾಂಡ್ 2015 ರಂದು FBI ನ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ ಭದ್ರೇಶ್‌ಕುಮಾರ್ ಸಿ. ಪಟೇಲ್‌ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ.
ನವವಿವಾಹಿತರಾದ ಭದ್ರೇಶಕುಮಾರ್ ಮತ್ತು ಪಾಲಕ್ ಪಟೇಲ್ ಕೊನೆಯ ಬಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿದೆ.


ಕೊಲೆ ಮಾಡಿ ಪರಾರಿಯಾಗಿದ್ದು ಹೇಗೆ?

ಮದುವೆಯಾದ ಬಳಿಕ ಭದ್ರೇಶ್‌ಕುಮಾರ್ ಸಿ. ಪಟೇಲ್‌ ಪತ್ನಿಯೊಂದಿಗೆ ಯುನೈಟೆಡ್ ಸ್ಟೇಟ್ಸ್‌ನ ಮೇರಿಲ್ಯಾಂಡ್‌ನ ಹ್ಯಾನೋವರ್‌ನಲ್ಲಿ ನೆಲೆಸಿದ್ದರು. ಅಲ್ಲಿ ಅವರಿಬ್ಬರೂ ಡೋನಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಪಾಲಕ್ ಅವರು ಕುಟುಂಬ ಸದಸ್ಯರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಅವರು ಭಾರತಕ್ಕೆ ಮರಳಿ ಬರಲು ಬಯಸುವುದಾಗಿ ಹೇಳಿದ್ದಳು. ಬಳಿಕ ಪಾಲಕ್ ಮತ್ತು ಭದ್ರೇಶ್‌ಕುಮಾರ್ ಹಿಂದಿನ ಕೋಣೆಗೆ ತೆರಳಿದ್ದು, ಅಲ್ಲಿ ಅವಳನ್ನು ಆತ ಚಾಕುವಿನಿಂದ ಇರಿದು ಕೊಂದಿದ್ದ. ಬಳಿಕ ಆತ ಕೆಲವೇ ನಿಮಿಷದಲ್ಲಿ ಹೊರಗೆ ಹೋಗಿದ್ದ.
ಪತ್ನಿಯನ್ನು ಕೊಂದ ಅನಂತರ ಪಟೇಲ್ ಹತ್ತಿರದ ಅಪಾರ್ಟ್‌ಮೆಂಟ್‌ಗೆ ಹೋಗಿ ಬಟ್ಟೆ ಬದಲಿಸಿ, ಪಾಸ್‌ಪೋರ್ಟ್ ಮತ್ತು ಸ್ವಲ್ಪ ಹಣವನ್ನು ತೆಗೆದುಕೊಂಡು ನೆವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೊಟೇಲ್ ಗೆ ಟ್ಯಾಕ್ಸಿಯಲ್ಲಿ ತೆರಳಿದ್ದಾನೆ. ಅಲ್ಲಿ ಆತ ಸುಮಾರು 3 ಗಂಟೆಗೆ ಹೊಟೇಲ್ ಗೆ ತೆರಳಿ ಮರುದಿನ ಅಲ್ಲಿಂದ 10 ಗಂಟೆ ಸುಮಾರಿಗೆ ಹೊಟೇಲ್ ನಿಂದ ಚೆಕ್ ಔಟ್ ಮಾಡಿದ್ದಾನೆ. ಅಲ್ಲಿಂದ ನೆವಾರ್ಕ್ ಪೆನ್ ನಿಲ್ದಾಣಕ್ಕೆ ಹೋಗಿದ್ದು, ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ.

Exit mobile version