Site icon Vistara News

Murder Case : ಸರಿಯಾಗಿ ನೋಡಿಕೊಳ್ತಿಲ್ಲ ಎಂದು ಪತ್ನಿಯನ್ನೇ ಕೊಂದ ಮಧುಮೇಹ ರೋಗಿ!

Murder Case Ballary

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಬಲಕುಂದಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ (Man Hacks his wife to death). ಆತ ಕೊಲೆ ಮಾಡಿರುವುದು (Murder case) ಅತ್ಯಂತ ಕ್ಷುಲ್ಲಕ ಕಾರಣಕ್ಕೆ. ಹೆಂಡತಿ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವುದು ಅವನು ಕೊಟ್ಟಿರುವ ಕಾರಣ.

ಸಿರುಗುಪ್ಪದ ಬಲಕುಂದಿ ಗ್ರಾಮದ ನಿವಾಸಿಯಾಗಿರುವ ರಸೂಲ್ ಸಾಬ್ ಎಂಬಾತನೇ ಕೊಲೆ ಮಾಡಿರುವ ಆರೋಪಿ. ಆತ ತನ್ನ ಪತ್ನಿ ಮೈಬುನಾ ಬಿ. (35)ಯನ್ನು ಕೊಲೆ ಮಾಡಿದ್ದಾನೆ. ಸೋಮವಾರ ಆತ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಆತ ಪೊಲೀಸರಿಗೆ ಶರಣಾಗಿದ್ದಾನೆ.

ರಸೂಲ್‌ ಸಾಬ್‌ ಮಧುಮೇಹ ರೋಗಿ. ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದಾನೆ. ಪತ್ನಿ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಸಿಟ್ಟಿನಲ್ಲಿ ಆತ ಕೊಲೆ ಮಾಡಿದ್ದಾನೆ. ಮೈಮುನಾ ಮಲಗಿದ್ದ ವೇಳೆ ಹೋಗಿ ಕೊಡಲಿಯಿಂದ ಕೊಚ್ಚಿದ್ದಾನೆ.

ನನಗೆ ಮಧುಮೇಹ ಇದೆ, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ನಾನು ಬೇಗ ಸಾಯ್ತೇನೆ,
ನನಗಿಂತ ಮೊದಲು ಪತ್ನಿ ಸಾಯಬೇಕು ಅಂತಾ ಕೊಲೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ, ಆತ ಹೆಂಡತಿ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದೇ ಹೇಳಲಾಗಿದೆ. ಘಟನಾ ಸ್ಥಳಕ್ಕೆ ತೆಕ್ಕಲಕೋಟೆ ಪೊಲೀಸರು ಭೇಟಿ ನೀಡಿದ್ದಾರೆ. ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನೇಣು ಬಿಗಿದು ಗ್ರಾ.ಪಂ ಪ್ರಭಾರಿ ಪಿಡಿಓ ಆತ್ಮಹತ್ಯೆ

ಶಿರಸಿ: ಉ.ಕ ಜಿಲ್ಲೆ ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಪ್ರಭಾರ ಪಿಡಿಒ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮಲಿಂಗ ಶಿವಲಿಂಗಪ್ಪ ಕಳಸಗೇರಿ(39) ಎಂಬಾತ ನೇಣಿಗೆ ಶರಣಾದ ವ್ಯಕ್ತಿ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೊನ್ನತ್ತಿ ಪ್ರಭಾರಿ ಪಿಡಿಓ ಆಗಿದ್ದ ರಾಮಲಿಂಗ ಶಿವಲಿಂಗಪ್ಪ ಅವರು ಭಾನುವಾರ ರಜೆ ಕಾರಣ ತನ್ನ ಮನೆಗೆ ಬಂದಿದ್ದರು. ಅಲ್ಲೇ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಇವರು ಸಾಲ ಭಾದೆಯಿಂದ ಮನನೊಂದು ಆತ್ಮಹತ್ಯೆ ಶರಣಾದ ಶಂಕೆ ಇದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version