ಕಲಬುರಗಿ: ಸರಿಯಾಗಿ ಕೆಲಸ ಮಾಡಿ ಸಂಪಾದನೆ ಮಾಡುವ ಯೋಗ್ಯತೆ ಇಲ್ಲದ ಧೂರ್ತ ಪುತ್ರನೊಬ್ಬ ತನಗೆ ಮದುವೆ ಮಾಡಿಸುತ್ತಿಲ್ಲ (Marriage issue) ಎಂದು ತಾಯಿಯನ್ನೇ ಕೊಂದು (Son Kills Mother) ಹಾಕಿದ್ದಾನೆ (Murder Case) ಕಲಬುರಗಿ ಜಿಲ್ಲೆಯ (Kalaburagi News) ಚಿಂಚೋಳಿ ತಾಲ್ಲೂಕಿನ ಪೂಚಾವರಂನಲ್ಲಿ ಈ ಭೀಕರ ಘಟನೆ ನಡೆದಿದೆ.
ಅನಿಲ್ ಎಂಬಾತನೇ ತನ್ನ ತಾಯಿ ಶೋಭಾ (45) ಎಂಬವರನ್ನು ಕೊಲೆ ಮಾಡಿದ ಧೂರ್ತ ಮಗ. ಕುಂಚಾವರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಲ್ಲದೆ, ಕೊಲೆ ಮಾಡಿದ ಅನಿಲ್‌ನನ್ನು ವಶಕ್ಕೆ ಪಡೆದಿದ್ದಾರೆ.
ಅನಿಲ್ ಸುಮಾರು 25 ವರ್ಷದ ಯುವಕನಾಗಿದ್ದು ಕುಡಿತದ ದಾಸನಾಗಿದ್ದ. ಸರಿಯಾಗಿ ಕೆಲಸ ಮಾಡದೆ ತಾಯಿಯ ಕೈಯಿಂದಲೇ ಹಣವನ್ನು ಕಿತ್ತುಕೊಂಡು ಹೋಗಿ ಸರಾಯಿ ಸುರಿಯುತ್ತಿದ್ದ ಈ ಧೂರ್ತ ಅದರ ನಡುವೆ ತಾಯಿ ತನಗೆ ಮದುವೆ ಮಾಡಿಸುತ್ತಿಲ್ಲ ಎಂದು ಹಂಗಿಸುತ್ತಿದ್ದ.
ಭಾನುವಾರ ರಾತ್ರಿ ಇದೇ ವಿಚಾರದಲ್ಲಿ ತಾಯಿ ಮತ್ತು ಮಗನ ನಡುವೆ ಜಗಳವಾಗಿದೆ. ಈ ಹಂತದಲ್ಲಿ ಸಿಟ್ಟಿನ ಭರ ದಲ್ಲಿ ಮಗ ಕುಡಿದ ನಶೆಯಲ್ಲಿ ತಾಯಿಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಆತನ ನಶೆ ಇಳಿದಿದೆ. ಕೊನೆಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Fraud Case : ಸ್ನೇಹಿತರೇ ಸುಲಿಗೆಕೋರರು; ಖಾಸಗಿ ಫೋಟೊ ಇದೆಯೆಂದು ಟೆಕ್ಕಿಯಿಂದ ಲಕ್ಷ ಲಕ್ಷ ಲೂಟಿ!
ದುಡ್ಡು ಕೊಡೋ ಎಂದುಗೆಳೆಯನನ್ನು ಪೀಡಿಸಿ ಕೊನೆಗೆ ಕೊಂದೇ ಹಾಕಿದ ಧೂರ್ತ ಮಿತ್ರ
ಬೆಂಗಳೂರು: ಹಣ ಕೊಡುವಂತೆ ದುಂಬಾಲು ಬಿದ್ದು, ಕಾಟ ಕೊಡುತ್ತಿದ್ದ ಸ್ನೇಹಿತನ ಪ್ರಾಣವನ್ನೇ ತೆಗೆದಿದ್ದಾನೆ. ಕಳೆದ ಫೆಬ್ರವರಿ 2ರಂದು ಕ್ಯಾತಸಂದ್ರ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನ ಬರ್ಬರ ಕೊಲೆಯಾಗಿತ್ತು. ಹತ್ಯೆಯಾದವನ ಗುರುತು ಪತ್ತೆಯಾಗಿರಲಿಲ್ಲ. ತನಿಖೆಗೊಂಡ ಪೊಲೀಸರಿಗೆ ನಂತರ ದಿನದಲ್ಲಿ ಹತ್ಯೆಯಾದವನು ವಿಜಯನಗರದ ಕೂಡ್ಲಗಿ ಮೂಲದ ಕುಮಾರಸ್ವಾಮಿ ಎಂಬುದು (Murder case) ಪತ್ತೆಯಾಗಿತ್ತು.
ಆದರೆ ಆರೋಪಿ ಸುಳಿವು ಮಾತ್ರ ಸಿಕ್ಕಿಲಿಲ್ಲ. ಹೀಗಾಗಿ ಆರೋಪಿ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ತನಿಖೆ ನಡೆಸಿದಾಗ ಬಳ್ಳಾರಿಯ ಸುನೀಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಕುಮಾರಸ್ವಾಮಿ ಪದೇಪದೆ ಹಣಕ್ಕಾಗಿ ಪೀಡಿಸುತ್ತಿದ್ದ ಹೀಗಾಗಿ ಹತ್ಯೆ ಮಾಡಿದ್ದಾಗಿ ಸುನೀಲ್ ಬಾಯ್ಬಿಟ್ಟಿದ್ದಾನೆ.
ಕುಮಾರಸ್ವಾಮಿ ಹಾಗೂ ಸುನೀಲ್ ಇಬ್ಬರು ಪರಿಚಿತರಾಗಿದ್ದರು. ಆಗಾಗ ಈ ಕುಮಾರಸ್ವಾಮಿ ಹಣಕ್ಕಾಗಿ ಸುನೀಲ್‌ನನ್ನು ಪೀಡಿಸುತ್ತಿದ್ದ. ಹಲವು ಬಾರಿ ಹಣ ಕೊಟ್ಟು ಸುನೀಲ್ ಕೂಡ ಹೈರಾಣಾಗಿದ್ದ. ಹತ್ಯೆ ನಡೆದ ದಿನವು ಕ್ಯಾತಸಂದ್ರ ರೈಲ್ವೆ ನಿಲ್ದಾಣದಲ್ಲಿದ್ದಾಗ ಮತ್ತೆ ಹಣ ಕೊಡು ಎಂದು ಹಿಂದೆ ಬಿದ್ದಿದ್ದ. ಇದರಿಂದ ಸಿಟ್ಟಿಗೆದ್ದ ಸುನಿಲ್, ಕೈಯಲ್ಲಿದ್ದ ಕಡಗದಿಂದ ಕುಮಾರಸ್ವಾಮಿ ಮುಖಕ್ಕೆ ಗುದ್ದಿದ್ದ. ಗುದ್ದಿದ ರಭಸಕ್ಕೆ ಫ್ಲಾಟ್ ಫಾರ್ಮ್ ಮೇಲೆ ಬಿದ್ದ ಕುಮಾರಸ್ವಾಮಿ ಮುಖಕ್ಕೆ ಚಪ್ಪಲಿ ಕಾಲಿನಿಂದ ಹಲವು ಬಾರಿ ತುಳಿದು ಸುನೀಲ್ ಹಲ್ಲೆ ಮಾಡಿದ್ದ.
ಗಂಭೀರ ಗಾಯಗೊಂಡ ಕುಮಾರಸ್ವಾಮಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದ. ಇನ್ನು ಕೊಲೆ ಮಾಡಿ ಆರೋಪಿ ಸುನೀಲ್ ಅಲ್ಲಿಂದ್ದ ಕಾಲ್ಕಿತ್ತಿದ್ದ. ಇದೀಗ ತನಿಖೆ ನಡೆಸಿರುವ ಗ್ರಾಮಾಂತರ ರೈಲ್ವೇ ಪೊಲೀಸರು ಸುನೀಲ್‌ನನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.