Site icon Vistara News

Murder Case: ಹಣಕ್ಕಾಗಿ ತಾಯಿಯನ್ನೇ ಪೀಡಿಸುತ್ತಿದ್ದ ಧೂರ್ತ; ಕೊನೆಗೆ ಅಮ್ಮನ ಕೊಂದು ತಾನೂ ಸತ್ತ

Murder Case Son kills Mother

ಧಾರವಾಡ: ಪಾಪಿ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ (Man kills mother and ends life) ಧಾರವಾಡ ಹೊಸ ಯಲ್ಲಾಪೂರ (Dharwad News) ನಗರದಲ್ಲಿ ನಡೆದ ಘಟನೆ ಇದಾಗಿದೆ. ಹಣಕ್ಕಾಗಿ ಸದಾ ತಾಯಿಯನ್ನು ಪೀಡಿಸುತ್ತಿದ್ದ ಈತ ಇದೀಗ ಆಕೆಯನ್ನೇ ಕೊಂದು ಹಾಕಿದ್ದಾನೆ (Murder Case). ಬಳಿಕ ತಾನೂ ನೇಣು ಬಿಗಿದುಕೊಂಡು ಸತ್ತಿದ್ದಾನೆ (Suicide Case).

ಶಾರದಾ ಭಜಂತ್ರಿ (60) ಕೊಲೆಯಾದ ದುರ್ದೈವಿ. ರಾಜೇಂದ್ರ ಭಜಂತ್ರಿ (40) ಕೊಲೆ ಮಾಡಿದ ಧೂರ್ತ ಮಗ. ರಾಜೇಂದ್ರ ಭಜಂತ್ರಿ ತನ್ನ ತಾಯಿಯನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ ಮತ್ತು ಬಳಿಕ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.

ಧೂರ್ತ ಮಗ ರಾಜೇಶ್‌ ಹಣಕ್ಕಾಗಿ ಸದಾ ತನ್ನ ತಾಯಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಸರ್ಕಾರಿ ಉದ್ಯೋಗದಲ್ಲಿದ್ದು ನಿವೃತ್ತರಾಗಿದ್ದ ತಾಯಿಗೆ ಬರುತ್ತಿದ್ದ ಪಿಂಚಣಿಯ ಮೇಲೆ ಆತ ಕಣ್ಣಿಟ್ಟು ಕಾಟ ಕೊಡುತ್ತಿದ್ದ. ಅದರ ಜತೆಗೆ ಜಾಗವನ್ನು ತನ್ನ ಹೆಸರಿಗೆ ಬರೆದುಕೊಡು ಎಂದು ಕೂಡಾ ಬೆನ್ನು ಬಿದ್ದಿದ್ದ ಎನ್ನಲಾಗಿದೆ.

ಆ ಜಾಗ ನನಗೆ ಕೊಡು, ಅಲ್ಲಿ ನಾನೇ ಮನೆ ಕಟ್ಟಿಕೊಳ್ಳುತ್ತೇನೆ ಎಂದು ಆತ ಹೇಳಿದ್ದ. ಆದರೆ ಈ ಜಾಗವನ್ನು ಅವನಿಗೆ ಕೊಟ್ಟರೆ ಅದನ್ನೂ ಮಾರಿ ಹಾಳು ಮಾಡುತ್ತಾನೆ ಎಂಬ ಕಾರಣಕ್ಕಾಗಿ ಅಮ್ಮ ನಿರಾಕರಿಸಿದ್ದರು. ಜಾಗ ಕೊಡಲು ನಿರಾಕರಿಸಿದ್ದಕ್ಕೆ ಅವರಿಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ ಮಗನೇ ತಾಯಿಯನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ದುಷ್ಟ ಮಗ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಇದು ಪೊಲೀಸ್‌ ಕೇಸ್‌ನಲ್ಲಿ ಕೋರ್ಟ್‌ ವಿಚಾರಣೆ ವೇಳೆ ತಪ್ಪಿಸಿಕೊಳ್ಳುವ ಪ್ರಯತ್ನ ಎಂದು ಕೂಡಾ ಹೇಳಲಾಗುತ್ತಿದೆ.

ಒಂಟಿ ಮನೆಯಲ್ಲಿ ಫೈರಿಂಗ್‌ ಸೌಂಡ್‌; ನಿಗೂಢವಾಗಿ ಕೊಲೆ ಮಾಡಿದವರು ಯಾರು?

ಉಡುಪಿ: ಉಡುಪಿ ಜಿಲ್ಲೆಯ (Udupi News) ಬ್ರಹ್ಮಾವರ ತಾಲೂಕಿನ ಹನೇಹಳ್ಳಿಯಲ್ಲಿ ಶನಿವಾರ ರಾತ್ರಿ ಶೂಟೌಟ್ (Shoot out at Hanehalli) ಪ್ರಕರಣವೊಂದು ನಡೆದಿದೆ. ಒಂಟಿ ಮನೆಯಲ್ಲಿ ಒಬ್ಬ ವ್ಯಕ್ತಿಯನ್ನು ನಿಗೂಢವಾಗಿ ಕೊಲೆ (Murder Case) ಮಾಡಲಾಗಿದೆ.

ಮಣಿಪಾಲದಲ್ಲಿ ಕೆಲಸ ಮಾಡುತ್ತಿರುವ ಕೃಷ್ಣ ಎಂಬವರು ಕೊಲೆಯಾದವರು. ಅವರು ಹನೆಹಳ್ಳಿಯ ಒಂಟಿ ಮನೆಯಲ್ಲಿ ಏಕಾಂಗಿಯಾಗಿ ವಾಸ ಮಾಡುತ್ತಿದ್ದರು. ಶನಿವಾರ ರಾತ್ರಿ 9.30ರ ಸುಮಾರಿಗೆ ಈ ಮನೆಯಿಂದ ಗುಂಡಿನ ಸದ್ದು (Firing sound) ಕೇಳಿಬಂದಿತ್ತು. ಅದು ಪ್ರಾಣಿಗಳನ್ನು ಓಡಿಸಲು ಪಟಾಕಿ ಬಿಟ್ಟಿರಬಹುದು ಎಂದು ಆಸುಪಾಸಿನವರು ಸುಮ್ಮನಿದ್ದರು. ಆದರೆ, ಬೆಳಗ್ಗೆ ಹೋಗಿ ನೋಡಿದಾಗ ಕೃಷ್ಣ ಅವರು ರಕ್ತದ ಮಡುವಿನಲ್ಲಿ ಶವವಾಗಿ ಮಲಗಿದ್ದರು.

ಹಾಗಿದ್ದರೆ ರಾತ್ರಿ ಆ ಮನೆಗೆ ಬಂದು ಶೂಟ್‌ ಮಾಡಿ ಕೃಷ್ಣ ಅವರನ್ನು ಸಾಯಿಸಿದ್ದು ಯಾರು ಎನ್ನುವುದು ನಿಗೂಢವಾಗಿದೆ. ಕೃಷ್ಣ ಅವರು ತಾವೇ ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡಂತೆ ಕಾಣುತ್ತಿಲ್ಲ. ಬದಲಾಗಿ ಯಾರೋ ಬಂದು ಅವರಿಗೆ ಗುಂಡಿಕ್ಕಿದಂತೆ ಕಾಣುತ್ತಿದೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಭೇಟಿ ಭೇಟಿ ನೀಡಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಹನೆಹಳ್ಳಿಯಲ್ಲಿ ನಡೆದ ಘಟನೆ ಘಟನೆ ಇದಾಗಿದ್ದು, ಕೃಷ್ಣ ಅವರ ಹಿನ್ನೆಲೆ, ಅವರನ್ನು ಯಾರು ಕೊಲೆ ಮಾಡಿರಬಹುದು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಶೂಟ್ ಔಟ್ ನಡೆಸಿದವರಿಗಾಗಿ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ.

ಇದನ್ನೂ ಓದಿ : Bengaluru News : ಛೇ.. ಇವಳೆಂಥಾ ತಾಯಿ? ಬುದ್ಧಿ ಕಲಿಸಲು 3 ವರ್ಷದ ಮಗುವನ್ನು ಕೂಡಿಹಾಕಿದ್ದಳಂತೆ!

Exit mobile version