Site icon Vistara News

Murder Case : ಅನೈತಿಕ ಸಂಬಂಧದ ಶಂಕೆ; ವೇಲ್‌ನಿಂದ ಪತ್ನಿಯ ಕತ್ತು ಬಿಗಿದು ಕೊಂದು ನಾಲೆಗೆ ಎಸೆದ ಕಿರಾತಕ

Murder case in Mandya

ಮಂಡ್ಯ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ವೇಲ್‌ನಿಂದ ಕತ್ತು ಬಿಗಿದು ಕೊಂದು (Murder Case) ಬಳಿಕ ಮೃತದೇಹವನ್ನು ನಾಲೆಗೆ ಎಸೆದ ಭಯಾನಕ ಘಟನೆ ಮಂಡ್ಯ ಜಿಲ್ಲೆಯ (Mandya news) ಶ್ರೀರಂಗಪಟ್ಟಣ (Srirangapattana) ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ. ಶ್ರೀನಾಥ್‌ (32) ಎಂಬಾತನೇ ತನ್ನ ಪತ್ನಿ ಪೂಜಾ (28) ಅವರನ್ನು ಕೊಲೆ ಮಾಡಿದ ಆರೋಪಿ. ಪತ್ನಿ ಮೇಲಿನ ಸಂಶಯದಿಂದ (suspicious husband) ಆತ ಈ ರೀತಿ ಕೊಲೆ ಮಾಡಿದ್ದಾನೆ (Husband kills wife) ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶ್ರೀನಾಥ್‌ ಮತ್ತು ಪೂಜಾ ನಡುವೆ 9 ವರ್ಷದ ಹಿಂದೆ ಮದುವೆ ನಡೆದಿತ್ತು. ಅವನು ಲಾರಿ ಚಾಲಕನಾಗಿ ಊರೂರು ತಿರುಗಾಡುತ್ತಿದ್ದ. ಈ ನಡುವೆ ತಾನು ಮನೆ ಬಿಟ್ಟು ಹೋಗಿದ್ದ ವೇಳೆ ಪತ್ನಿಗೆ ಅಕ್ರಮ ಸಂಬಂಧವೊಂದು ಹುಟ್ಟಿಕೊಂಡಿದೆ ಎಂಬ ಸಂಶಯ ಶ್ರೀನಾಥ್‌ ತಲೆಯಲ್ಲಿ ಹುಟ್ಟಿಕೊಂಡಿದೆ. ಈ ಕಾರಣಕ್ಕಾಗಿ ಮನೆಗೆ ಮರಳಿ ಬಂದಾಗಲೆಲ್ಲ ಗಂಡ ಹೆಂಡತಿ ಮಧ್ಯೆ ಆಗಾಗ ಜಗಳ ಆಗುತ್ತಿತ್ತು ಎಂದು ತಿಳಿದುಬಂದಿದೆ.

ಇತ್ತೀಚೆಗೆ ಆತ ಮನೆಗೆ ಬಂದಿದ್ದಾಗ ಗಂಡ-ಹೆಂಡತಿ ಮಧ್ಯೆ ಸಿಕ್ಕಾಪಟ್ಟೆ ಜಗಳ ಆಗಿದೆ ಎಂದು ಹೇಳಲಾಗಿದೆ. ಹೀಗೆ ಜಗಳವಾದಾಗ ಆತ ವೇಲ್‌ನಿಂದಲೇ ಪೂಜಾ ಕತ್ತನ್ನು ಬಿಗಿದಿದ್ದಾನೆ. ಇದರಿಂದ ಆಕೆ ಉಸಿರು ಕಳೆದುಕೊಳ್ಳುತ್ತಿದ್ದಂತೆಯೇ ಮಹದೇವ ಪುರ ಬಳಿಯ ನಾಲೆಯಲ್ಲಿ ಎಸೆದು ಪರಾರಿಯಾಗಿದ್ದಾನೆ.

ಪೂಜಾ ಕಾಣುತ್ತಿಲ್ಲ ಎಂದು ಆಕೆಯ ಮನೆಯವರು ದೂರು ನೀಡಿದ್ದು, ಪೊಲೀಸರು ಕೂಡಾ ವಿಚಾರಣೆ ನಡೆಸಿದ್ದರು. ಆದರೆ, ಶ್ರೀನಾಥ್‌ ಕೂಡಾ ಪರಾರಿಯಾಗಿದ್ದರಿಂದ ಆತನೇ ಕೊಂದು ಎಲ್ಲೋ ಎಸೆದು ಪರಾರಿಯಾಗಿರುವ ಸಂಶಯ ಹುಟ್ಟಿಕೊಂಡಿತ್ತು. ಇದೀಗ ಮಹದೇವಪುರ ಬಳಿಯ ನಾಲೆಯಲ್ಲಿ ಆಕೆಯ ಊದಿಕೊಂಡ ಶವ ಪತ್ತೆಯಾಗಿದೆ. ಇದರೊಂದಿಗೆ ಇದೊಂದು ಕೊಲೆ ಎನ್ನುವುದು ಪ್ರೂವ್‌ ಆಗಿದೆ.

ಪೊಲೀಸರು ಇದೀಗ ಆರೋಪಿ ಶ್ರೀನಾಥ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆತನ ಬಂಧನದ ಬಳಿಕ ಕೊಲೆಗೆ ಸಂಬಂಧಿಸಿದ ಇತರ ವಿಚಾರಗಳು ಬಯಲಿಗೆ ಬರುವ ನಿರೀಕ್ಷೆ ಇದೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Social Media Post : ವಿದ್ಯಾರ್ಥಿನಿಯರ ಅಶ್ಲೀಲ‌ ಫೋಟೊ ಅಪ್ಲೋಡ್ ಮಾಡಿದ ಯುವಕ ಅರೆಸ್ಟ್; ಅವನ ಟಾರ್ಗೆಟೇ ವಿಚಿತ್ರ!

SSLC ವಿದ್ಯಾರ್ಥಿನಿ ಹೃದಯಾಘಾತದಿಂದ ನಿಧನ; ವಾಯು ವಿಹಾರದ ವೇಳೆ ಕುಸಿದ ಬಾಲಕಿ

ಚಾಮರಾಜನಗರ: ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ(Spandana Vijay Raghavendra) ಅವರು ಹೃದಯಾಘಾತದಿಂದ (Heart attack) ಮೃತಪಟ್ಟ ಹಿನ್ನೆಲೆಯಲ್ಲಿ ಸಣ್ಣ ವಯಸ್ಸಿನವರಲ್ಲೇ ಉಂಟಾಗುವ ಹೃದಯಾಘಾತದ ಕುರಿತ ಆತಂಕ ಮತ್ತೆ ಮುನ್ನೆಲೆಗೆ ಬಂದಿದೆ. ಇದರ ನಡುವೆ ಕೇವಲ 16 ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಪ್ರಾಣ (SSLC student dies of heart attack) ಕಳೆದುಕೊಂಡಿದ್ದಾಳೆ.

ಗುಂಡ್ಲುಪೇಟೆ ಪಟ್ಟಣದ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಫೆಲಿಶಾ (16) ಮೃತ ದುರ್ದೈವಿ ಬಾಲಕಿ. ಬೆಂಗಳೂರು ನಿವಾಸಿಗಿರುವ ಫೆಲಿಶಾ ಗುಂಡ್ಲುಪೇಟೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಬುಧವಾರ ಬೆಳಗ್ಗೆ ವಾಯು ವಿಹಾರ ಮಾಡುವ ವೇಳೆ ಒಮ್ಮಿಂದೊಮ್ಮೆಗೇ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾಳೆ. ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದ ಆಕೆಯನ್ನು ಕೂಡಲೇ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದರೆ, ಚಿಕಿತ್ಸೆ ಫಲಿಸದೆ ಸಾವು ಸಂಭವಿಸಿದೆ. ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

Exit mobile version