Site icon Vistara News

Murder Case: ರಾಜಧಾನಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

bangalore murder case

ಬೆಂಗಳೂರು: ಬೆಂಗಳೂರಿನಲ್ಲಿ‌ ಇನ್ನೊಂದು ಬರ್ಬರ ಹತ್ಯೆ (Murder Case) ನಡೆದಿದೆ. ಅಜಿತ್‌ ಎಂಬ ವ್ಯಕ್ತಿ ಕೊಲೆಯಾದವನು. ಹಣಕಾಸಿನ ವಿಚಾರದಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಪುಲಿಕೇಶಿನಗರ ಕಾಕ್ಸ್ ಟೌನ್ ಬಳಿ ಅಜಿತ್‌ (35) ಬರ್ಬರ ಹತ್ಯೆಯಾಗಿದೆ. ಬಡ್ಡಿ ವ್ಯವಹಾರದ ಕಾರಣದಿಂದ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಕೊಲೆಯಾದ ವ್ಯಕ್ತಿ ಬಾಣಸವಾಡಿಯಲ್ಲಿ ವಾಸವಾಗಿದ್ದು, ಕೆಲವರ ಬಳಿ ಬಡ್ಡಿಗಾಗಿ ಹಣ ಪಡೆದಿದ್ದ. ಹಣ ಕೊಡದೆ ಸತಾಯಿಸುತ್ತಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಿರುವ ಶಂಕೆ ಇದೆ. ಘಟನಾ ಸ್ಥಳಕ್ಕೆ ಪುಲಿಕೇಶಿನಗರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಪುಲಿಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಗುಂಟೆ ಸರ್ಕಲ್ ಬಳಿ ಘಟನೆ ನಡೆದಿದ್ದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ದೊಡ್ಡಗುಬ್ಬಿ ಬಳಿಯ ಐಟಿಸಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅಜಿತ್, ಕೆಲಸ ಮುಗಿಸಿ ವಾಪಸ್ ಮನೆಗೆ ಬರುವಾಗ ಮನೆ ಮುಂಭಾಗದಲ್ಲೇ ಕೊಲೆ ಮಾಡಲಾಗಿದೆ. ಡ್ಯೂಟಿ ಮುಗಿಸಿ ಬಟ್ಟೆ ಬದಲಿಸಲು ಆಗಮಿಸಿದ್ದ ವೇಳೆ ಅಟ್ಯಾಕ್ ಮಾಡಿದ ನಾಲ್ಕೈದು ಮಂದಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಮಗನ ಕುಡಿತದ ಚಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅಪ್ಪ, ಅಮ್ಮ

ಮಗನ ಕುಡಿತದಿಂದ ಉಂಟಾಗಿರುವ ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಹಿರಿಯ ವಯಸ್ಸಿನ ಪೋಷಕರು ಆತ್ಮಹತ್ಯೆ (Suicide News ) ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಘಟನೆ ನಡೆದಿದೆ. ಚಂದ್ರಶೇಖರ್ (54) ಹಾಗೂ ಶಾರದಮ್ಮ ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಮಗ ಪ್ರಶಾಂತನಿಗೆ ವರ್ಷಗಳ ಹಿಂದೆ ಮದುವೆ ಮಾಡಿದ್ದರು. ಆದರೆ ಮಗ ಕುಡಿತದಿಂದ ಮನೆ ಬರೋದು ಕಡಿಮೆ ಮಾಡಿದ್ದ, ಇದರಿಂದ ನೊಂದು ಕಳೆದ ಮೂರು ತಿಂಗಳ ಹಿಂದೆ ಪ್ರಶಾಂತನ ಹೆಂಡತಿ ಮನೆ ಬಿಟ್ಟು ತವರು ಮನೆ ಸೇರಿದ್ದರು. ಇದರಿಂದ‌ ಮಗನ‌ ಬಾಳು ಹೀಗಾಯಿತು ಎಂದು ನೊಂದು ಕೊಂಡಿದ್ದರು.

ಸೋಮವಾ ಎರಡನೇ‌ ಮಗನನ್ನ ಅಂಗಡಿ ಕಳಿಸಿ ದಂಪತಿ ನೇಣಿಗೆ ಶರಣಾಗಿದ್ದರು. ಮಗ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರು ಹೊಸಕೋಟೆ ಮೂಲದವರು. ಅವರು ಹಲವು ವರ್ಷಗಳಿಂದ‌ ಹಳೆ ಬೈಯಪ್ಪನಹಳ್ಳಿ ಯಲ್ಲಿ ವಾಸ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲೊ ಕೂಲಿ ಕೆಲಸ ಮಾಡಿಕೊಂಡಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Hemant Nimbalkar: ವಾರ್ತಾ ಇಲಾಖೆ ಆಯುಕ್ತರಾಗಿ ಐಪಿಎಸ್​ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮರು ನೇಮಕ

Exit mobile version