Site icon Vistara News

Murder Case: ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌, ಮೊಬೈಲ್‌ ಗೀಳಿಗಾಗಿ ಅಣ್ಣನೇ ಕೊಂದ

sarjapura boy murder case

ಆನೇಕಲ್: ಬೆಂಗಳೂರು ಹೊರವಲಯ (Bangalore rural) ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ (Sarjapura murder) ನಿನ್ನೆ ನಡೆದ ಹದಿನೈದು ವರ್ಷದ ಬಾಲಕನ ಕೊಲೆ ಪ್ರಕರಣದಲ್ಲಿ (boy murder case) ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತಮ್ಮನನ್ನೇ ಕೊಲೆಗೈದ ಪಾಪಿ ಅಣ್ಣ (brother) ಅಂದರ್ ಆಗಿದ್ದಾನೆ.

ಪ್ರಾಣೇಶ್ (15) ಕೊಲೆಯಾಗಿದ್ದ ಬಾಲಕ. ಶಿವಕುಮಾರ್ (18) ಕೊಲೆ ಮಾಡಿದ ಪಾಪಿ ಸಹೋದರ. ಆನ್ಲೈನ್ ಗೇಮ್ ಆಡಲು ಮೊಬೈಲ್ ನೀಡಲಿಲ್ಲ ಅಂತ ಪಾತಕಿ, ತಮ್ಮನನ್ನು ಸಾಯಿಸಿದ್ದಾನೆ. ಕೊಲೆ ಆರೋಪಿಯನ್ನು ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ.

ಇವರಿಬ್ಬರೂ ಮೂಲತಃ ಆಂಧ್ರ ಮೂಲದ ಸೂಳೆಕೆರಿ ಗ್ರಾಮದ ಚನ್ನಮ್ಮ ಮತ್ತು ಬಸವರಾಜ್ ದಂಪತಿಯ ಮಕ್ಕಳು. ಈ ಕುಟುಂಬ ಕೆಲಸ ಅರಸಿಕೊಂಡು ಕಳೆದ ಮೂರು ತಿಂಗಳ ಹಿಂದೆ ನೆರಿಗಾ ಗ್ರಾಮಕ್ಕೆ ಬಂದಿತ್ತು. ಪತಿ-ಪತ್ನಿ ಹಾಗೂ ಹಿರಿಯ ಮಗ ಶಿವಕುಮಾರ್ ಗಾರೆ ಕೆಲಸ ಮಾಡಿಕೊಂಡಿದ್ದರು. ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ದ್ವಿತೀಯ ಪುತ್ರ ಪ್ರಾಣೇಶ್ ಸೂಳಕೆರೆ ಗ್ರಾಮದಲ್ಲಿ ಅಜ್ಜಿಯ ಜೊತೆಗೆ ವಾಸವಿದ್ದ.

ಬೇಸಿಗೆ ರಜೆಗೆ ನೆರಿಗಾ ಗ್ರಾಮದಲ್ಲಿನ ತಂದೆ ತಾಯಿ ಬಳಿಗೆ ಪ್ರಾಣೇಶ್‌ ಬಂದಿದ್ದ. ಮನೆಯಲ್ಲಿದ್ದ ಮೊಬೈಲಿನಲ್ಲಿ ಶಿವಕುಮಾರ್ ಯಾವಾಗ್ಲೂ ಆನ್ಲೈನ್ ಗೇಮ್ ಆಡುತ್ತಿದ್ದ. ಪ್ರಾಣೇಶ್ ಮನೆಗೆ ಬಂದವನೇ ಮೊಬೈಲ್‌ನಲ್ಲಿ ತಾನು ಗೇಮ್ ಆಡಲು ಶುರು ಮಾಡಿದ್ದ. ಪ್ರಾಣೇಶ್ ಬಳಿ ಮೊಬೈಲ್ ನೀಡುವಂತೆ ಶಿವಕುಮಾರ್ ಕೇಳುತ್ತಿದ್ದ. ಆದರೆ ಪ್ರಾಣೇಶ್‌ ಮೊಬೈಲ್ ನೀಡುತ್ತಿರಲಿಲ್ಲ.

ನನಗೆ ಆನ್ಲೈನ್ ಗೇಮ್ ಆಡಲು ಮೊಬೈಲ್ ಸಿಗುತ್ತಿಲ್ಲ ಎಂದು ಶಿವಕುಮಾರ ಕುಪಿತಗೊಂಡಿದ್ದ. ಇಬ್ಬರೂ ಮೊಬೈಲ್‌ಗಾಗಿ ಆಗಾಗಾ ಗಲಾಟೆ ಮಾಡಿಕೊಳ್ಳುತ್ತಿದ್ದರು. ಕಳೆದ ಹದಿನೈದನೇ ತಾರೀಕು ಗಾರೆ ಕೆಲಸಕ್ಕೆ ಹೋದ ಶಿವಕುಮಾರ ತಮ್ಮನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಕೆಲಸ ಮಾಡುತ್ತಿದ್ದ ಜಾಗದಿಂದ ಸಣ್ಣ ಸುತ್ತಿಗೆಯನ್ನು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ.

ಬಯಲು ಶೌಚಕ್ಕೆ ಹೋಗಿದ್ದ ಪ್ರಾಣೇಶನನ್ನು ಹಿಂಬಾಲಿಸಿಕೊಂಡು ಹೋಗಿದ್ದ ಶಿವಕುಮಾರ್, ಅಲ್ಲಿ ಸುತ್ತಿಗೆಯಿಂದ ತಲೆ ಹಾಗೂ ಎದೆ ಭಾಗಕ್ಕೆ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಪ್ರಾಣೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ತಂದೆ ತಾಯಿ ಸಂಜೆ ಮನೆಗೆ ಬಂದು ಎಲ್ಲೆಡೆ ಹುಡುಕಾಡಿದ್ದರು. ಈ ವೇಳೆ ತಮ್ಮನ ಶವ ಬಿದ್ದಿದೆ ಎಂದು ಓಡೋಡಿ ಬಂದು ಪೋಷಕರಿಗೆ ತಿಳಿಸಿದ್ದ ಶಿವಕುಮಾರ.

ಸರ್ಜಾಪುರ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಗೆ ಇಳಿದಿದ್ದರು. ತಮ್ಮನ ಶವವನ್ನು ನಾನೇ ಮೊದಲು ನೋಡಿದೆ ಎಂದು ಹೇಳುತ್ತಿದ್ದ ಶಿವಕುಮಾರನ ಮೇಲೆ ಪೋಲೀಸರಿಗೆ ಅನುಮಾನ ಮೂಡಿತ್ತು. ವಿಚಾರಣೆ ನಡೆಸಿದಾಗ ಆರೋಪಿ ಬಾಯಿ ಬಿಟ್ಟಿದ್ದಾನೆ. ಆರೋಪಿ ಶಿವಕುಮಾರ್‌ನನ್ನು ಬಂಧಿಸಿದ ಸರ್ಜಾಪುರ ಪೋಲೀಸರು ಜೈಲಿಗೆ ಕಳುಹಿಸಿದ್ದಾರೆ.

ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ; ಕಾಲೇಜು ಕಿರುಕುಳಕ್ಕೆ ಬೇಸತ್ತಳೇ?

ಆನೇಕಲ್: ಎಂಜಿನಿಯರಿಂಗ್‌ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ (Student Death) ಮೃತಪಟ್ಟಿದ್ದಾಳೆ. ಕಾಲೇಜು ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ಸ್ಥಿತಿಯಲ್ಲಿ (Self Harming) ಶವ ಪತ್ತೆಯಾಗಿದೆ. ಬೆಂಗಳೂರು ಕಾಲೇಜ್ ಆಫ್ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತ (18) ಮೃತ ದುರ್ದೈವಿ.

ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಹೀಲಲಿಗೆಯಲ್ಲಿ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ ಗ್ರಾಮದ ವಿದ್ಯಾರ್ಥಿನಿ ಹರ್ಷಿತ ಕಾಲೇಜು ಹಾಸ್ಟೆಲ್‌ನಲ್ಲಿ ಇದ್ದಳು. ನಿನ್ನೆ ಗುರುವಾರ ರಾತ್ರಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ.

ಕಾಲೇಜಿನವರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆಡಳಿತ ಮಂಡಳಿ ಸಾಕಷ್ಟು ದಿನಗಳಿಂದ ಕಿರುಕುಳ ನೀಡುತ್ತಿದ್ದರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿನಿ ಸಾವು ಖಂಡಿಸಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: Murder case : ಕಳ್ಳನೆಂದು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್‌ಗಳು; ನೂಕಾಟದಲ್ಲಿ ಬಿದ್ದ ಯುವಕ, ಕರೆಂಟ್‌ ಶಾಕ್‌ನಿಂದ ಸಾವು

ರಕ್ಷಿಸಲು ಹೋದ ವಿದ್ಯಾರ್ಥಿನಿಗೆ ಎಚ್‌ಓಡಿ ಬೈಗುಳ

ಇನ್ನೂ ಪಕ್ಕದ ರೂಮಿನ ವಿದ್ಯಾರ್ಥಿನಿ ಪ್ರಗತಿ ಎಂಬಾಕೆ ಬಾಗಿಲು ತೆರೆದು ನೋಡಿದಾಗ ಹರ್ಷಿತಾ ನೇಣಿಗೆ ಶರಣಾಗಿದ್ದು ಕಂಡಿದೆ. ಕೊಠಡಿಯ ಬಾಗಿಲು ತೆರೆದು ರಕ್ಷಣೆ ಮಾಡಲು ಪ್ರಗತಿ ಮುಂದಾಗಿದ್ದಕ್ಕೆ, ಎಚ್‌ಓಡಿ ಭಾರತಿ ಎಂಬುವವರು ಕೊಠಡಿ ಬಾಗಿಲನ್ನು ತೆರೆದಿದ್ದು ಯಾಕೆ ಎಂದು ಪ್ರಶ್ನೆ ಮಾಡಿ ಬೈದಿದ್ದಾರೆ. ರಕ್ಷಣೆ ಮಾಡಲು ಮುಂದಾಗಿದ್ದೆ ತಪ್ಪಾ ಎಂದು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟಿಸಿದ್ದಾರೆ. ಹರ್ಷಿತಾ ಮೃತಪಟ್ಟಾಗ ರಕ್ಷಣೆಗೆ ಹಾಸ್ಟೆಲ್‌ನಲ್ಲಿ ಯಾರು ಇರಲಿಲ್ಲ. ವಾರ್ಡನ್, ಆಯಾ ಯಾರು ಹಾಸ್ಟೆಲ್‌ನಲ್ಲಿ ಇರಲಿಲ್ಲ. ಹಾಸ್ಟೆಲ್ ಆಡಳಿತ ವ್ಯವಸ್ಥೆ ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದರು.

Exit mobile version