ಬೆಂಗಳೂರು: ರಾಜಧಾನಿಯ (Bangalore news) ಸುಂಕದಕಟ್ಟೆಯ ಬಳಿ ಮಹಿಳೆಯೊಬ್ಬರು ಮಾಜಿ ಪ್ರಿಯಕರನಿಂದ (Woman Murder Case) ಕೊಲೆಯಾಗಿದ್ದಾರೆ. ನಿನ್ನೆ ರಾತ್ರಿ 9:40ರ ಸುಮಾರಿಗೆ ಈ ಹತ್ಯೆ ನಡೆದಿದೆ. ದಿವ್ಯಾ (30) ಕೊಲೆಯಾದ ಮಹಿಳೆ.
ತನ್ನ ಜೊತೆಗಿದ್ದ ಪ್ರಿಯಕರ ಶಾಂತಕುಮಾರ್ ಎಂಬಾತನಿಂದ ದಿವ್ಯಾ ಕೊಲೆಯಾಗಿದ್ದಾರೆ. ನಾಲ್ಕು ವರ್ಷದ ಹಿಂದೆ ಶಾಂತಕುಮಾರ್ ಜೊತೆ ಬಂದಿದ್ದ ದಿವ್ಯಾ ಈ ಮೊದಲು ಕಾಮಾಕ್ಷಿಪಾಳ್ಯದಲ್ಲಿ ಮನೆ ಮಾಡಿದ್ದರು. ಅನಂತರ ಇಬ್ಬರ ಮಧ್ಯೆ ಜಗಳವಾಗಿದ್ದು, ಇದರಿಂದ ಶಾಂತಕುಮಾರ್‌ನನ್ನು ದಿವ್ಯಾ ಬಿಟ್ಟುಬಿಟ್ಟಿದ್ದರು. ಇಬ್ಬರೂ ಮದುವೆಯಾಗಿದ್ದರೇ ಇಲ್ಲವೇ ಎಂಬ ಬಗ್ಗೆ ಅನುಮಾನವಿದೆ.
5 ದಿನದ ಹಿಂದೆ ಸುಂಕದಕಟ್ಟೆಯ ಸೊಲ್ಲಾಪುರಂ ಲೇ ಔಟ್‌ನಲ್ಲಿ ದಿವ್ಯಾ ಬಾಡಿಗೆ ಮನೆ ಮಾಡಿದ್ದರು. ಈಕೆ ಮನೆ ಮಾಡಿದ್ದ ಬಗ್ಗೆ ತಿಳಿದುಕೊಂಡಿದ್ದ ಶಾಂತಕುಮಾರ್ ರಾತ್ರಿ 9:30ರ ಸುಮಾರಿಗೆ ಬಾಡಿಗೆ ಮನೆ ಸಮೀಪ ಬಂದಿದ್ದ. ಅನಂತರ ಚಾಕುವಿನ ಮೂಲಕ ದಿವ್ಯಳ ಎದೆ ಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದಾನೆ. ಇಬ್ಬರೂ ಮೂಲತಃ ಬಿಡದಿಯವರು.
“ರಾತ್ರಿ 9:30 ಸುಮಾರಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ. ಕೊಲೆಯಾದ ಮಹಿಳೆ ದಿವ್ಯ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದಳು. 35 ವರ್ಷದ ಶಾಂತಕುಮಾರ್ ಎಂಬಾತನಿಂದ ಕೊಲೆಯಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ” ಎಂದು ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಹೇಳಿದ್ದಾರೆ.
ಅಟ್ಟಾಡಿಸಿ ಕೊಚ್ಚಿ ರೌಡಿಶೀಟರ್ ಕೊಲೆ
ಬೆಂಗಳೂರು: ನಡು ರಸ್ತೆಯಲ್ಲೇ ರೌಡಿಶೀಟರ್‌ನ ಅಟ್ಟಾಡಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಭೀಕರ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರೌಡಿಶೀಟರ್ ಪ್ರಾಣ ಬಿಟ್ಟಿದ್ದು, ಘಟನಾ ಸ್ಥಳಕ್ಕೆ ಬಾಣಸವಾಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಾರ್ತಿಗೇಯನ್ (40) ಕೊಲೆಯಾದವ. ಮೃತ ವ್ಯಕ್ತಿ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್, ಬಾಣಸವಾಡಿ ಪೊಲೀಸ್ ಠಾಣೆಯ ರೌಡಿ ಶೀಟ್ ದಾಖಲಾಗಿತ್ತು. ಎರಡು ವರ್ಷಗಳ ಹಿಂದೆ ರೌಡಿಶೀಟ್‌ನಿಂದ ಕೈ ಬಿಡಲಾಗಿತ್ತು. ಈ ಹಿಂದೆ ಬಾಣಸವಾಡಿ ಪೊಲೀಸರಿಂದ ರೌಡಿಶೀಟರ್ ಕಾರ್ತಿಗೇಯನ್ ಗಡಿಪಾರಾಗಿದ್ದ. ಮತ್ತೆ ಬೆಂಗಳೂರಿಗೆ ಬಂದು ಬಾಣಸವಾಡಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದ ಕಚೇರಿ ತೆರೆದಿದ್ದ. ಆದರೆ, ಮಂಗಳವಾರ ರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ | Prajwal Revanna case: ಪ್ರಜ್ವಲ್ ರೇವಣ್ಣ ವಿರುದ್ಧ 196 ದೇಶಗಳಿಗೆ ಇಂಟರ್‌ಪೋಲ್ ಮೆಸೇಜ್; ಎಲ್ಲೇ ಕಂಡರೂ ಸಿಗುತ್ತೆ ಮಾಹಿತಿ!
ಹಬ್ಬಕ್ಕೆ ಊರಿಗೆ ಹೋದ ಅಕ್ಕನ ಮನೆಗೆ ಕನ್ನ; ಸಾಕ್ಷಿ ನಾಶಕ್ಕೆ ಖಾರದ ಪುಡಿ ಚೆಲ್ಲಿದ ತಂಗಿ!
ಬೆಂಗಳೂರು: ಈಗೀನ ಕಾಲದಲ್ಲಿ ಯಾರನ್ನಾ ನಂಬೋದು ಬಿಡೋದು? ಅಕ್ಕನ ಮನೆಯಲ್ಲಿಯೇ ಕಳ್ಳತನ ಮಾಡಿದ್ದ ತಂಗಿಯ (Theft Case) ಬಂಧನವಾಗಿದೆ. ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಉಮಾ ಬಂಧಿತ ಆರೋಪಿಯಾಗಿದ್ದಾಳೆ. ಬಂಧಿಯಾಗಿರುವ ಉಮಾಳಿಂದ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಚೌಡೇಶ್ವರಿ ದೇವರ ಹಬ್ಬ ಎಂದು ಉಮಾಳ ಅಕ್ಕ ಊರಿಗೆ ಹೋಗಿದ್ದರು. ಹೋಗುವ ಮುನ್ನ ಸಂಬಂಧಿಗೆ ಮನೆಯ ಕೀ ಕೊಟ್ಟು ಹೋಗಿದ್ದರು. ನಂತರ ಕಳೆದ ಏ. 24ರ ರಾತ್ರಿ ಆಕೆಯ ಸಂಬಂಧಿ ಮನೆಗೆ ಮಲಗಲು ಹೋಗಿದ್ದಾಗ ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದಳು. ಉಮಾ 182 ಗ್ರಾಂ ಚಿನ್ನಾಭರಣ ಹಾಗು 52 ಲಕ್ಷ ನಗದು ಕಳ್ಳತನ ಮಾಡಿದ್ದಳು.
ಇನ್ನೂ ಮಂಡ್ಯ ಮೂಲದ ಆರೋಪಿ ಉಮಾ ಲಗ್ಗೆರೆಯಲ್ಲಿ ವಾಸವಾಗಿದ್ದಳು. ನಾಗವಾರದಲ್ಲಿ ಆಕೆಯ ಅಕ್ಕ ಹಾಗೂ ಬಾವ ವಾಸವಾಗಿದ್ದರು. ಉಮಾ ಸ್ತ್ರಿ ಶಕ್ತಿ ಸೇರಿದಂತೆ ಹಲವು ಕಡೆ ಸಾಲ ಮಾಡಿಕೊಂಡಿದ್ದಳು. ಇತ್ತೀಚೆಗೆ ಬಾವನ ಜತೆ ಕೂಡ ಹಣ ಕೇಳಿದ್ದಳು, ಆದರೆ ಅವರು ಕೊಟ್ಟಿರಲಿಲ್ಲ ಎನ್ನಲಾಗಿದೆ.
ಇದೇ ಕಾರಣಕ್ಕೆ ಅಕ್ಕ ಮನೆಯವರು ಊರಿಗೆ ಹೋದಾಗ, ನಕಲಿ ಕೀ ಬಳಸಿ ಚಿನ್ನ-ನಗದು ಎಗರಿಸಿದ್ದಳು. ಇತ್ತ ಕಳ್ಳತನ ಮಾಡಿದ ಬಳಿಕ ಖಾರದಪುಡಿ ಚೆಲ್ಲಿ ಸಾಕ್ಷಿ ನಾಶ ಮಾಡಿ ಕಾಲ್ಕಿತ್ತಿದ್ದಳು. ನಂತರ ಕಳ್ಳತನ ಕೇಸ್‌ನ ತನಿಖೆಗಿಳಿದ ಕೆಂಗೇರಿ ಪೊಲೀಸರು ಆರೋಪಿತೆಯನ್ನು ಬಂಧಿಸಿ ಆರು ದಿನಗಳ ಕಾಲ ಕಸ್ಟಿಡಿಗೆ ಪಡೆದಿದ್ದಾರೆ.