ಯಾದಗಿರಿ: ಬಳೆ ವ್ಯಾಪಾರಿಯೊಬ್ಬನನ್ನು ಬರ್ಬರವಾಗಿ ಕತ್ತು ಸೀಳಿ ಕೊಲೆ (Murder Case) ಮಾಡಲಾಗಿದ್ದು, ಕೊಲೆ ಮಾಡಿದ (bangles merchant killed) ಪಕ್ಕದ ಅಂಗಡಿಯ ವ್ಯಾಪಾರಿಯೂ ಹೆಣದ ಪಕ್ಕದಲ್ಲೇ ಕುಳಿತು ಪೊಲೀಸರಿಗೆ ಶರಣಾಗಿದ್ದಾನೆ.
ಯಾದಗಿರಿ (Yadgir news) ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿಯ ಬಳೆ ವ್ಯಾಪಾರಿ ಮಲ್ಲಪ್ಪ (38) ಕೊಲೆಯಾದ ವ್ಯಕ್ತಿ. ಬುರ್ರಾನ್ ಎಂಬಾತ ಕೊಲೆ ಮಾಡಿದ ವ್ಯಕ್ತಿ. ತಿಂಥಣಿ ಗ್ರಾಮದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಕೊಲೆ ನಡೆದಿದೆ.
ತಿಂಥಣಿ ಗ್ರಾಮದಲ್ಲಿ ಮೌನೇಶ್ವರ ದೇವಸ್ಥಾನದ ಜಾತ್ರೆ ನಡೆಯುತ್ತಿದ್ದು, ಇಂದು ಸಂಜೆ ರಥೋತ್ಸವ ಕೂಡ ಇದೆ. ಈ ಜಾತ್ರೆಯಲ್ಲಿ ಅಂಗಡಿ ಹಾಕಲೆಂದು ಕೊಲೆಯಾದವನು ಹಾಗೂ ಆರೋಪಿ ಇಬ್ಬರೂ ಬಂದಿದ್ದರು. ಇಬ್ಬರೂ ಅಕ್ಕಪಕ್ಕದಲ್ಲಿ ಅಂಗಡಿ ಹಾಕಿದ್ದಾರೆ. ರಾತ್ರಿ, ಬಳೆ ವ್ಯಾಪಾರಿ ಮಲ್ಲಪ್ಪ, ಬಳೆ ವ್ಯಾಪಾರದ ವಿಷಯದಲ್ಲಿ ಹಾಗೂ ಬುರ್ರಾನ್ ಪತ್ನಿಗೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಇದರಿಂದಾಗಿ ಸಿಟ್ಟಿಗೆದ್ದ ಬುರ್ರಾನ್, ಚಾಕುವಿನ ಮೂಲಕ ಕೋಳಿ ಕತ್ತು ಕಯ್ಯುವಂತೆ ಮಲ್ಲಪ್ಪನ ಕತ್ತು ಸೀಳಿ ಹಾಕಿದ್ದಾನೆ.
ಬುರ್ರಾನ್ ಬಾಗಲಕೋಟೆ ಜಿಲ್ಲೆಯ ಜಮಖಂಡಿಯವನಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ತಡರಾತ್ರಿ ಅಕ್ಕಪಕ್ಕದ ಅಂಗಡಿಯವರ ಮಧ್ಯೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಲ್ಲಪ್ಪನ ಮೃತದೇಹವನ್ನು ಸುರಪುರ ತಾಲೂಕು ಆಸ್ಪತ್ರೆಗೆ ಒಯ್ಯಲಾಗಿದೆ.
ಅಯೋಧ್ಯೆಧಾಮ ರೈಲಿನಲ್ಲಿ ಅನ್ಯಕೋಮಿನ ವ್ಯಕ್ತಿಯಿಂದ ಪ್ರಚೋದನೆ, ಶ್ರೀರಾಮಭಕ್ತರಿಂದ ಪ್ರತಿಭಟನೆ
ವಿಜಯನಗರ: ಅಯೋಧ್ಯೆಯಿಂದ ಬರುತ್ತಿದ್ದ ರೈಲಿನಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಶ್ರೀರಾಮಭಕ್ತರು ಕೆರಳಿದ, ಪ್ರತಿಭಟನೆ ನಡೆಸಿದ ಪ್ರಸಂಗ ಹೊಸಪೇಟೆಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಯೋಧ್ಯೆಯಿಂದ ಮೈಸೂರಿನತ್ತ ಬರುತ್ತಿದ್ದ ಅಯೋಧ್ಯೆಧಾಮ ರೈಲಿನಲ್ಲಿ ಸಾವಿರಾರು ಶ್ರೀರಾಮ ಭಕ್ತರು ಅಯೋಧ್ಯೆಯತ್ತ ಪ್ರಯಾಣಿಸುತ್ತಿದ್ದು, ಅನ್ಯಕೋಮಿನ ವ್ಯಕ್ತಿಯೊಬ್ಬ ಆಕ್ಷೇಪಾರ್ಹ ಮಾತು ಆಡಿದ್ದಾನೆ. ಇದರಿಂದ ಕೆರಳಿದ ಶ್ರೀರಾಮಭಕ್ತರು ರೈಲು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಹೊಸಪೇಟೆ ಪಟ್ಟಣದ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರಾಮ ಭಕ್ತರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪಿ, ಗಲಾಟೆ ಪ್ರಾರಂಭ ಆಗುತ್ತಿದ್ದಂತೆ ಸ್ಥಳದಿಂದ ಕಾಲು ಕಿತ್ತಿದ್ದಾನೆ. ಅಯೋಧ್ಯೆಧಾಮ ಟ್ರೈನ್ ಇಳಿದು ಪಕ್ಕಕ್ಕೆ ನಿಂತಿದ್ದ ಲಿಂಕ್ ಟ್ರೈನ್‌ಗೆ ಹತ್ತಿ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ್ದ. ಲಿಂಕ್ ಟ್ರೈನ್ ಗದಗಕ್ಕೆ ಬರುತ್ತಿದ್ದಂತೆ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ FIR ದಾಖಲು ಆಗಿದೆ.
ಪ್ರಚೋದನಕಾರಿ ಹೇಳಿಕೆ ನೀಡಿದ ವ್ಯಕ್ತಿಯನ್ನು ಬಂಧಿಸಬೇಕೆಂದು ಪಟ್ಟು ಹಿಡಿದು ಶ್ರೀರಾಮಭಕ್ತರು ಪ್ರತಿಭಟನೆ ಮಾಡಿದರು. ಇದರಿಂದಾಗಿ 8.15ಕ್ಕೆ ಹೊಸಪೇಟೆಗೆ ಬಂದಿದ್ದ ರೈಲು, 10 ಗಂಟೆಯವರೆಗೂ ಬಳ್ಳಾರಿಯಲ್ಲಿ ಬಾಕಿಯಾಯಿತು. ಎರಡು ತಾಸುಗಳ ಕಾಲ ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ಅಯೋಧ್ಯೆ ಧಾಮ ರೈಲನ್ನು ತಡೆಯಲಾಯಿತು.
ಘಟನೆ ನಡೆದ ಕ್ಷಣಾರ್ಧದಲ್ಲೇ ಹೊಸಪೇಟೆ ರೈಲು ನಿಲ್ದಾಣ ರಣರಂಗ ಆಗಿಬಿಟ್ಟಿತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿ, ಶ್ರೀರಾಮ ಭಕ್ತರ ಮನವೊಲಿಸಲು ಪ್ರಯತ್ನಪಟ್ಟರು. ವಿಜಯನಗರ ಎಸ್ಪಿ ಶ್ರೀಹರಿಬಾಬು, ಹೊಸಪೇಟೆಯ ಪೊಲೀಸರಿಂದಲೂ ಮನವೊಲಿಕೆಗೆ ಪ್ರಯತ್ನ ನಡೆಯಿತು. ಹಿಂದೂಪರ, ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ಪ್ರಯತ್ನದಿಂದ ಕೊನೆಗೂ ಎರಡು ಗಂಟೆಗಳ ಬಳಿಕ ರೈಲು ಮೈಸೂರು ಕಡೆಗೆ ಪ್ರಯಾಣ ಬೆಳೆಸಿತು. ಮುಂಜಾಗ್ರತಾ ಕ್ರಮವಾಗಿ ಟ್ರೈನ್‌ನೊಳಗೆ ರೈಲ್ವೇ ಪೊಲೀಸರು, ಸ್ಥಳೀಯ ಪೊಲೀಸರು ಬಳ್ಳಾರಿಯವರೆಗೆ ಸಂಚಾರ ಮಾಡಿದರು.
ಇದನ್ನೂ ಓದಿ: Murder Case : ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆ ಕೊಲೆ; ಪಾಳು ಬಿದ್ದ ಕಟ್ಟಡದಲ್ಲಿ ಶವ ಪತ್ತೆ