Site icon Vistara News

Murder Case : ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ; ಕೆಆರ್‌ ಮಾರ್ಕೆಟ್‌ನಲ್ಲಿ ಶವ ಪತ್ತೆ

Murder case

ವಿಜಯಪುರ: ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ (Murder Case) ಆಗಿದೆ. ವಿಜಯಪುರ ನಗರದ ಎಪಿಎಂಸಿ ಮೇಕೆ ಹಾಗೂ ಕುರಿ ಮಾರುಕಟ್ಟೆಯ ಬಳಿ (Vijayapura Murder Case) ಘಟನೆ ನಡೆದಿದೆ. ರೋಹಿತ್ ಸುಭಾಶ ಪವಾರ (22) ಕೊಲೆಯಾದವನು.

ವಿಜಯಪುರ ನಗರದ ಕಂಬಾರ ಓಣಿ ನಿವಾಸಿ ರೋಹಿತ್‌ನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದು ಬಳಿಕ ಮುಳ್ಳುಕಂಟಿಯಲ್ಲಿ ಶವ ಬಿಸಾಡಿದ್ದಾರೆ. ಸ್ಥಳದಲ್ಲಿ ಬಿಯರ್ ಬಾಟಲ್, ಚಿಪ್ಸ್ ಪ್ಯಾಕೇಟ್ ಪತ್ತೆಯಾಗಿದೆ. ಹೀಗಾಗಿ ಕುಡಿದ ಮತ್ತಿನಲ್ಲಿ ಪರಿಚಯಸ್ಥರಿಂದ ಕೊಲೆ ಆಗಿರಬಹುದೆಂದು ಶಂಕಿಸಲಾಗಿದೆ.

ಖಾಲಿದ್ ಇನಾಂದಾರ್ ಎಂಬಾತ ರೋಹಿತ್ ಪೋಷಕರಿಗೆ ನಿನ್ನೆ ಭಾನುವಾರ ತಡರಾತ್ರಿ 2.21ಕ್ಕೆ ಕರೆ ಮಾಡಿ ರೋಹಿತ್ ಕೊಲೆಯಾಗಿದೆ ಎಂದು ಮಾಹಿತಿ ನೀಡಿದ್ದ. ಕರೆ ಅನ್ವಯ ರೋಹಿತ್ ಮನೆಯವರು ಆತನಿಗಾಗಿ ಹುಡುಕಾಡಿದ್ದರು. ಖಾಲೀದ್ ಮನೆಗೆ ಹೋದರೂ ಆತ ಅಲ್ಲಿರಲಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ನಂತರ ರೋಹಿತ್‌ಗಾಗಿ ಹುಡುಕಾಡಿದಾಗ ಆತನ ಶವ ಎಪಿಎಂಸಿ ಆವರಣದಲ್ಲಿ ಕಂಡು ಬಂದಿದೆ.

ಇದನ್ನೂ ಓದಿ: IPL 2024 : ಐಪಿಎಲ್‌ ಬೆಟ್ಟಿಂಗ್‌ಗಾಗಿ ಮೈ ತುಂಬಾ ಸಾಲ; ನೇಣಿಗೆ ಶರಣಾದ ಯುವಕ

ಕೂಡಲೇ ರೋಹಿತ್‌ ಕುಟುಂಬಸ್ಥರು ಎಪಿಎಂಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಜಯಪುರ ಡಿವೈಎಸ್‌ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿ‌ ಘಟನೆ ನಡೆದಿದೆ. ಕೊಲೆಗಾರರಿಗಾಗಿ ಹುಡುಕಾಟ ನಡೆಸಿದ್ದಾರೆ.

ಬೆಂಗಳೂರು ಸಿಟಿ ಮಾರ್ಕೆಟ್‌ನಲ್ಲಿ ಅಪರಿಚಿತ ಶವ ಪತ್ತೆ

ಬೆಂಗಳೂರಿನಲ್ಲಿ ಅಪರಿಚಿತ ವ್ಯಕ್ತಿಯ ಕೊಲೆಯಾಗಿದೆ. ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ಮೃತದೇಹ ಪತ್ತೆಯಾಗಿದೆ. ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತುಹಾಕಿ ಕೊಲೆ ಮಾಡಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಸಿಟಿ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version