Site icon Vistara News

ದೇಶವ್ಯಾಪಿ ಸೆಕ್ಸ್‌ ರ್‍ಯಾಕೆಟ್‌ ಪತ್ತೆ, 14,000 ಹೆಣ್ಣುಮಕ್ಕಳ ರಕ್ಷಣೆ, ಬೆಂಗಳೂರಿನಲ್ಲೂ ಇತ್ತು ಇದರ ಜಾಲ!

sex work legal

ಬೆಂಗಳೂರು: ದೇಶವಿಡೀ ವ್ಯಾಪಿಸಿರುವ, ಬೆಂಗಳೂರಿನಲ್ಲೂ ಕಾರ್ಯಾಚರಿಸುತ್ತಿರುವ ಬೃಹತ್‌ ಸೆಕ್ಸ್‌ ರ್‍ಯಾಕೆಟ್‌ ಒಂದನ್ನು ಸೈಬರಾಬಾದ್‌ ಪೊಲೀಸರು ಬೇಧಿಸಿದ್ದಾರೆ.

ಬೆಂಗಳೂರು, ದೆಹಲಿ, ಹೈದರಾಬಾದ್‌ ಮುಂತಾದ ಕಡೆ ಈ ಲೈಂಗಿಕ ಕಾರ್ಯಕರ್ತರ ಮಾಫಿಯಾ ಕಾರ್ಯಾಚರಿಸುತ್ತಿದೆ. ಈ ಜಾಲವನ್ನು ಭೇದಿಸಿರುವ ಪೊಲೀಸರು 14,000ಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ಈ ಮಾಫಿಯಾದಿಂದ ರಕ್ಷಿಸಿದ್ದಾರೆ. 17 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಹಲವು ಪ್ರಮುಖ ನಗರಗಳಲ್ಲಿ ಕಾಲ್‌ ಸೆಂಟರ್‌ಗಳನ್ನು ನಿರ್ವಹಿಸುತ್ತಿದ್ದರು. ಇವರ ಪ್ರಮುಖ ಸಂಪರ್ಕ ಜಾಲ ವಾಟ್ಸ್ಯಾಪ್‌ನಲ್ಲಿತ್ತು. ವಿಲಾಸಿ ಲೈಫ್‌ಸ್ಟೈಲ್‌, ಐಷಾರಾಮಿ ಜೀವನ, ಸುಲಭ ಹಣದ ಆಸೆ ತೋರಿಸಿ ಸಾವಿರಾರು ಹೆಣ್ಣು ಮಕ್ಕಳನ್ನು ಈ ದಂಧೆಗೆ ಸೆಳೆಯಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.

ಬೆಂಗಳೂರಿನ ಅನೇಕ ಗಣ್ಯರು ಈ ಲೈಂಗಿಕ ಮಾಫಿಯಾದ ಉಪಯೋಗ ಪಡೆದುಕೊಂಡಿದ್ದು, ಅವರ ಜಾಡನ್ನು ಈಗ ಪೊಲೀಸರು ಹಿಡಿದಿದ್ದಾರೆ ಎನ್ನಲಾಗಿದೆ. ಇದು ಹಲವು ಮಂದಿಯಲ್ಲಿ ನಡುಕ ಹುಟ್ಟಿಸಿದೆ.

ಇದನ್ನೂ ಓದಿ | Sexual harrassment | ಮುಖ್ಯ ಶಿಕ್ಷಕನ ಮೇಲೆ ಲೈಂಗಿಕ ಕಿರುಕುಳ ಆರೋಪ, ಸಹಶಿಕ್ಷಕರೇ ಸ್ಕೆಚ್‌ ಹಾಕಿದರಾ?

Exit mobile version