Site icon Vistara News

Obscene Act: ಡ್ರೈವಿಂಗ್‌ ಹೇಳಿಕೊಡುವ ನೆಪದಲ್ಲಿ ಖಾಸಗಿ ಅಂಗ ತೋರಿಸಿದ ಟ್ರೇನರ್‌, ಯುವತಿಯ ದೂರು

odscene act driver

ಬೆಂಗಳೂರು: ರಾಜಧಾನಿಯಲ್ಲಿ ಮಹಿಳೆಯರಿಗೆ ಪುಂಡ ಪೋಕರಿಗಳ‌ ಕಿರುಕುಳ ಹೆಚ್ಚಾಗುತ್ತಿದೆ ಎಂಬ ದೂರುಗಳ ನಡುವೆ, ಇನ್ನೊಂದು ಅಂಥದೇ ಘಟನೆ ನಡೆದಿದೆ. ಕಾರ್ ಡ್ರೈವಿಂಗ್ (Car driving) ಹೇಳಿಕೊಡುವ‌ ನೆಪದಲ್ಲಿ ಟ್ರೈನರ್ (Driving trainer) ಒಬ್ಬ ಅಸಭ್ಯ ವರ್ತನೆ (Obscene Act) ತೋರಿಸಿದ್ದಾನೆ.

ಯುವತಿಯನ್ನು ಕಾರು ಚಾಲನೆಯ ನೆಪದಲ್ಲಿ ಕೂರಿಸಿಕೊಂಡು ಕರೆದುಕೊಂಡು ಖಾಸಗಿ ಅಂಗ ಪ್ರದರ್ಶಿಸಿ ಟ್ರೇನರ್‌ ಅಸಭ್ಯ ವರ್ತನೆ ತೋರಿದ್ದಾನೆ. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಫ್ಲೈಓವರ್‌ನಲ್ಲಿ ಈ ಘಟನೆ ನಡೆದಿದೆ. 18 ವರ್ಷದ ಯುವತಿಯ ಜೊತೆ ಕಾರ್ ಡ್ರೈವಿಂಗ್ ಟ್ರೈನರ್ ಅಸಭ್ಯ ವರ್ತನೆ ತೋರಿದ್ದಾನೆ.

ಬಸವೇಶ್ವರ ನಗರದ ಮಾರುತಿ ಡ್ರೈವಿಂಗ್ ಸ್ಕೂಲ್‌ನಲ್ಲಿ ಯುವತಿ ಟ್ರೈನಿಂಗ್‌ಗೆ ಸೇರಿದ್ದರು. ಈ ವೇಳೆ ಅಣ್ಣಪ್ಪ ಎಂಬಾತ ಪರ್ಸನಲ್ ಟ್ರೈನರ್ ಆಗಿ ಡ್ರೈವಿಂಗ್ ಕಲಿಸಿಕೊಡಲು ಮುಂದಾಗಿದ್ದ. ಆದರೆ ಕಳೆದ ವಾರ ಬೆಳಗ್ಗೆ 6.30ಕ್ಕೆ ಕಾರ್‌ನಲ್ಲಿದ್ದ ಅಣ್ಣಪ್ಪ ಅಸಭ್ಯ ವರ್ತನೆ ತೋರಿದ್ದಾನೆ. ಯುವತಿ ಪಕ್ಕದಲ್ಲಿ ಕೂತು ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾನೆ. ಈ ಬಗ್ಗೆ ಬಸವೇಶ್ವರ ನಗರ ಠಾಣೆಗೆ ಯುವತಿ ದೂರು ನೀಡಿದ್ದಾರೆ. ಅಣ್ಣಪ್ಪನ ವಿರುದ್ಧ FIR ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

ರಸ್ತೆಯಲ್ಲಿ ಗೂಂಡಾಗಿರಿ, ಇನೋವಾ ಚಾಲಕನ ಮೇಲೆ ಫಾರ್ಚುನರ್‌ನಲ್ಲಿದ್ದ ತಂಡದಿಂದ ತೀವ್ರ ಹಲ್ಲೆ

ಬೆಂಗಳೂರು: ತಮ್ಮ ಐಷಾರಾಮಿ ಫಾರ್ಚುನರ್ ಕಾರು (Fortuner Car) ಹೋಗೋಕೆ ದಾರಿ ಬಿಡಲಿಲ್ಲ ಎಂದು ಬಾಡಿಗೆ ಇನೋವಾ ಕಾರಿನ (Innova Car) ಚಾಲಕನ ಮೇಲೆ ಒಂದು ತಂಡ ಯದ್ವಾತದ್ವಾ ಹಲ್ಲೆ (Assault Case) ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜಧಾನಿಯಲ್ಲಿ ನಡೆಯುತ್ತಿರುವ ರೋಡ್‌ ರೇಜ್‌ (Road Rage) ಪ್ರಕರಣಗಳಿಗೆ ಇದು ಇನ್ನೊಂದು ಸೇರ್ಪಡೆ.

ರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಚಾಲಕನ ಮೇಲೆ ತಂಡ ಹಲ್ಲೆ ನಡೆಸಿದೆ. ಕಾಲಿನಿಂದ ತುಳಿದು, ಕರಾಟೆ ಕಿಕ್‌ ನೀಡಿ ಡ್ರೈವರ್‌ನನ್ನು ಗಾಯಗೊಳಿಸಲಾಗಿದೆ. ಈ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಫಾರ್ಚುನರ್ ಕಾರಿನಲ್ಲಿ ಇದ್ದ ಪುಂಡರ ಗುಂಪು, ಮುಂದೆ ಇದ್ದ ಇನೋವಾ ಕಾರು ಚಾಲಕ ತಮ್ಮ ವಾಹನ ಮುಂದೆ ಹೋಗಲು ಬಿಟ್ಟಿಲ್ಲ ಎಂದು ಆತನನ್ನು ಹೊರಗೆಳೆದು ಅವನ ಮೇಲೆ ಹಲ್ಲೆ ನಡೆಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಡಾ. ಪ್ರಜ್ವಿತ್ ರೈ ಎಂಬವರು ಪೋಸ್ಟ್ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಸಹಾಯಕನ ಮೇಲೆ ಹೀಗೆ ಹಲ್ಲೆ ಮಾಡಲಾಗಿದೆ. ಈ ರೀತಿ ಅಸಹಾಯಕರ ಮೇಲೆ ದರ್ಪ ತೋರುವವರಿಗೆ ಶಿಕ್ಷೆ ಆಗಬೇಕು ಎಂದು ಪೋಸ್ಟ್ ಹಾಕಿದ್ದಾರೆ. ಪೋಸ್ಟ್‌ಗೆ ʼದರ್ಶನ್ʼ ಮತ್ತು ʼರೇಣುಕಾಸ್ವಾಮಿʼ ಹೆಸರಿನ ಹ್ಯಾಶ್‌ಟ್ಯಾಗ್ ಹಾಕಲಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ: Shiradi Ghat: ಭೂಕುಸಿತ; ಶಿರಾಡಿ ಘಾಟ್​ನಲ್ಲಿ ಸಂಚಾರ ನಿಷೇಧ ​; ಬೆಂಗಳೂರು- ಮಂಗಳೂರು ಸಂಪರ್ಕ ಬಹುತೇಕ ಕಟ್​

Exit mobile version