ಚಿಕ್ಕಬಳ್ಳಾಪುರ: 16 ವರ್ಷದ ಬಾಲಕಿ ಮೇಲೆ ಎರಗಿ, ಗರ್ಭಿಣಿ ಮಾಡಿ ಯುವಕನೊಬ್ಬ ಪರಾರಿ (Physical Abuse) ಆಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಸುರೇಶ್ ಎಂಬಾತ ಈ ಕೃತ್ಯವೆಸಗಿದವನು.
ಸುರೇಶ್, ಹದಿನಾರು ವರ್ಷದ ದಲಿತ ಬಾಲಕಿಯನ್ನು ಗರ್ಭಿಣಿ ಮಾಡಿ ಪರಾರಿಯಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೇಕೆ ಮೇಯಿಸಲು ಹೋಗುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿ ಕೈ-ಕಾಲು ಕಟ್ಟಿ ಅತ್ಯಾಚಾರವೆಸಗಿದ್ದಾನೆ. ಈ ಕೃತ್ಯ ಮಹಿಳೆಯೊಬ್ಬಳ ಸಹಕಾರ ಇತ್ತು ಎನ್ನಲಾಗಿದೆ. ಈ ವಿಷಯವನ್ನು ಹೊರಗೆ ಹೇಳದಂತೆ ಬೆದರಿಕೆಯನ್ನೂ ಹಾಕಿದ್ದಾನೆ. ಮಾತ್ರವಲ್ಲದೇ ಮದುವೆ ಆಗುವುದಾಗಿ ನಂಬಿಸಿ, ಪದೇಪದೇ ಆಕೆಯೊಂದಿಗೆಬಲವಂತವಾಗಿ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ.
ಇದನ್ನೂ ಓದಿ: Sikh Symbol: ಸ್ತ್ರೀಯರ ಒಳಉಡುಪುಗಳ ಮೇಲೆ ಸಿಖ್ ಚಿಹ್ನೆ ಮುದ್ರಿಸಿ ಮಾರಾಟ; ಏನಿದು ಜಾಲ?
ಬಾಲಕಿ ತನಗೆ ಅರಿವಿಲ್ಲದೆ ಏಳು ತಿಂಗಳ ಗರ್ಭಿಣಿಯಾಗಿದ್ದಾಳೆ. ಆಕೆಯ ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಗಮನಿಸಿದ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆ ಗರ್ಭಿಣಿ ಎಂಬುದು ತಿಳಿದು ಬಂದಿದೆ. ಆಗಲೇ ಸುರೇಶ್‌ನ ಕೃತ್ಯವು ಬೆಳಕಿಗೆ ಬಂದಿದೆ. ಮದುವೆ ಆಗುವಂತೆ ಕೇಳಿದ್ದರೆ, ಹಣ ಕೊಟ್ಟು ಸೇಟಲ್‌ಮೆಂಟ್ ಮಾಡಿಕೊಳ್ಳೋಣಾ ಎಂದನಂತೆ.
ಸದ್ಯ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಂತರ ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ರವಾನೆ ಮಾಡಲಾಗುತ್ತದೆ. ಪ್ರಕರಣ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪರಾರಿ ಆಗಿರುವ ಆರೋಪಿಗಾಗಿ ಪೊಲೀಸರು ಹುಡುಕಾಟವನ್ನು ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ