Site icon Vistara News

Physical Abuse: ಹಿಟಾಚಿ ಕೆಳಗೇ 7 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಪಿಶಾಚಿ

Pune Police 60 Hours Operation; Drugs worth more than Rs 1300 crore seized

ಬೆಂಗಳೂರು: ರಾಜಧಾನಿಯಲ್ಲಿ ಕಾಮಪಿಶಾಚಿಯೊಬ್ಬ 7 ವರ್ಷದ ಹೆಣ್ಣುಮಗುವಿನ ಮೇಲೆ‌ ಅತ್ಯಾಚಾರ (Physical Abuse) ಎಸಗಿದ್ದಾನೆ. ಪಾನಿಪುರಿ ಕೊಡಿಸ್ತೇನೆ ಅಂತ ಕರೆದೊಯ್ದವನು ಈ ಅಮಾನುಷ ಕೃತ್ಯ (Crime News) ಎಸಗಿದ್ದಾನೆ.

ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತಾಯಿ ಮತ್ತು ಮಗು ಗರುಡ ಮಾಲ್ ಪಕ್ಕದಲ್ಲಿ ಭಿಕ್ಷೆ ಬೇಡುತ್ತಿದ್ದವರಾಗಿದ್ದು, ತಾಯಿಗೆ ಮಾತು ಬಾರದು. ಮಗುವಿನಲ್ಲಿ ಆಗುತ್ತಿರುವ ರಕ್ತಸ್ರಾವ ಗಮನಿಸಿ ತಾಯಿ ಮತ್ತು ಸ್ಥಳೀಯರು ಪೊಲೀಸರ ಮೊರೆ ಹೋಗಿದ್ದಾರೆ.

ಮೂಕ ತಾಯಿಯ ಮಗುವನ್ನು ರೇಪ್ ಮಾಡಿದ 54ರ ವ್ಯಕ್ತಿ, ಪಾನಿಪುರಿ ಕೊಡಿಸುತ್ತೇನೆ ಎಂದು ಮಗುವನ್ನು ಕರೆದೊಯ್ದು ರಸ್ತೆಯ ಪಕ್ಕದಲ್ಲಿದ್ದ ಹಿಟಾಚಿ ಕೆಳಗೆ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ರೇಪ್‌ ಮಾಡಿದವನೂ ನಿರ್ವಸತಿ ವ್ಯಕ್ತಿ ಎಂದು ತಿಳಿದುಬಂದಿದೆ. ಮೆಗ್ರಾತ್ ರೋಡ್ ಮುಖ್ಯರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ತರಲಾಗಿದ್ದ ಹಿಟಾಚಿ ರಸ್ತೆ ಪಕ್ಕ ನಿಂತಿತ್ತು. ಸದ್ಯ ಮಗುವಿಗೆ ಮೆಡಿಕಲ್ ಚೆಕಪ್‌ ಮಾಡಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಅಶೋಕನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಿಸಿಕೊಳ್ಳುತ್ತಿದ್ದಾರೆ.

ಚುನಾವಣೆ ಗಲಾಟೆ, ವಾಟರ್ ಮ್ಯಾನ್ ಅನುಮಾನಾಸ್ಪದ ಸಾವು

ತುಮಕೂರು: ಚುನಾವಣೆ ಸಂಬಂಧಿತ ಗಲಾಟೆ ಸಂಭವಿಸಿದ ಬಳಿಕ ವಾಟರ್ ಮ್ಯಾನ್ ಒಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಕಿಚ್ಚೇವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚಂದ್ರಪ್ಪ (56) ಮೃತ ವಾಟರ್ ಮ್ಯಾನ್. ಹುಲಿಯೂರುದುರ್ಗ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರು “ನೀನು ಬಿಜೆಪಿ ಪರವಾಗಿ ಕೆಲಸ‌ ಮಾಡ್ತಿಯಾ?” ಎಂದು ಈತನ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಚಂದ್ರಪ್ಪ ಶವ ಪತ್ತೆಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಾದ ನಟೇಶ್, ರವೀಶ್, ವೆಂಕಟೇಶ, ಸಂತೋಷ ನಿನ್ನೆ ಗಲಾಟೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಮುಸ್ಲಿಮ್ ಯುವಕರಿಂದ ಬಸ್​ ಚಾಲಕನ ಮೇಲೆ ಹಲ್ಲೆ, ನೌಕರರಿಂದ ​ ಧರಣಿ

ಬೈಲಹೊಂಗಲ: ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ ಘಟನೆ (Bus driver Attacked) ನಡೆದಿದೆ. ಆಕ್ರೋಶಗೊಂಡ ಸಾರಿಗೆ ನೌಕರರು ಬೈಲಹೊಂಗಲ ಪೊಲೀಸ್ ಠಾಣೆಯ ಮುಂದೆ ಧರಣಿ ಕುಳಿತರು. ಚಾಲಕ ಬಸ್ ನಿಲ್ಲಿಸಲಿಲ್ಲ ಎಂದು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ಧಾರವಾಡದಿಂದ ಬೈಲಹೊಂಗಕ್ಕೆ ಮುಸ್ಲಿಂ ಯುವಕರು ಬಂದಿದ್ದರು. ಬಸ್​​ ಬೈಲಹೊಂಗಲದಿಂದ ಧಾರವಾಡಕ್ಕೆ ಹೊರಟಿತ್ತು. ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಗುಂಪುಕಟ್ಟಿ ಹಲ್ಲೆ ನಡೆಸಿದ್ದರು. ಬೇಸತ್ತ ಚಾಲಕರು ವೃತ್ತಿಯ ವೇಳೆ ಸುರಕ್ಷತೆ ನೀಡಿ ಧರಣಿ ಮಾಡಿದ್ದರು. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿರುವ ಸಾರಿಗೆ ಮೇಲಧಿಕಾರಿಗಳು ಬಂದು ಮಾತು ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಇದನ್ನೂ ಓದಿ: lok sabha election : ಒಂದು ವರ್ಷದ ಕೂಸಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಬಂದ ಪೊಲೀಸ್​​!

Exit mobile version