Site icon Vistara News

Physical Abuse: ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನಿಗೆ 106 ವರ್ಷ ಜೈಲು ಶಿಕ್ಷೆ

Physical Abuse

ಇಡುಕ್ಕಿ(ಕೇರಳ): ಮಾನಸಿಕ ಅಸ್ವಸ್ಥ (mentally challenged) 15 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ (Physical Abuse) ನಡೆಸಿದ್ದರಿಂದ ಆಕೆ ಗರ್ಭಿಣಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ 44 ವರ್ಷದ ವ್ಯಕ್ತಿಯೊಬ್ಬನಿಗೆ ಕೇರಳ (kerala) ನ್ಯಾಯಾಲಯವು ಸೋಮವಾರ ವಿವಿಧ ಪ್ರಕರಣಗಳ ಅಡಿಯಲ್ಲಿ ಒಟ್ಟು 106 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ದೇವಿಕುಲಂ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ (POCSO) ನ್ಯಾಯಾಧೀಶ ಸಿರಾಜುದ್ದೀನ್ ಪಿ.ಎ. ಅವರು ಸಂತ್ರಸ್ತೆಯ ತಾಯಿಯ ಸ್ನೇಹಿತನಾಗಿದ್ದ ವ್ಯಕ್ತಿಗೆ ಒಟ್ಟು 106 ವರ್ಷಗಳ ಕಾಲ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ವಿವಿಧ ಶಿಕ್ಷೆಗಳನ್ನು ವಿಧಿಸಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸ್ಮಿಜು ಕೆ. ದಾಸ್ ಹೇಳಿದರು.

ಇದನ್ನೂ ಓದಿ: Maoists killed: ಭದ್ರತಾ ಪಡೆಗಳ ಜತೆ ಗುಂಡಿನ ಚಕಮಕಿ, ಏಳು ಮಾವೋವಾದಿಗಳು ಫಿನಿಶ್

ಶಿಕ್ಷೆಯನ್ನು ಏಕಕಾಲದಲ್ಲಿ ಪೂರೈಸಬೇಕಾಗುತ್ತದೆ. ವ್ಯಕ್ತಿಗೆ ನೀಡಲಾದ ಜೈಲು ಶಿಕ್ಷೆಗಳಲ್ಲಿ ಗರಿಷ್ಠ 22 ವರ್ಷಗಳಾಗಿವೆ. ಅಂದರೆ ಅವರು 22 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಆರೋಪಿಗೆ ನ್ಯಾಯಾಲಯವು 60,000 ರೂ. ದಂಡವನ್ನೂ ವಿಧಿಸಿದೆ. ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ ಅಪರಾಧಿ ಹೆಚ್ಚುವರಿ 22 ತಿಂಗಳ ಕಠಿಣ ಸಜೆ ಅನುಭವಿಸಬೇಕಾಗುತ್ತದೆ.

ಆರೋಪಿಯು ದಂಡವನ್ನು ಪಾವತಿಸಿದರೆ ಇಡುಕ್ಕಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂತ್ರಸ್ತ ಪರಿಹಾರ ಯೋಜನೆಯಿಂದ ಬಾಲಕಿಗೆ ಪರಿಹಾರವಾಗಿ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

2022ರಲ್ಲಿ ನಡೆದ ಘಟನೆ

2022ರಲ್ಲಿ ತ್ರಿಶೂರ್ ಮೂಲದ ಆರೋಪಿ ಕೆಲಸದ ನಿಮಿತ್ತ ಅಡಿಮಾಲಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಹುಡುಗಿಯ ತಾಯಿಯೊಂದಿಗೆ ಹೊಟೇಲ್ ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಈತ ಆಕೆಯ ಜೊತೆ ಸ್ನೇಹ ಬೆಳೆಸಿದ ಅನಂತರ ಆಕೆಯ ಮನೆಯಲ್ಲಿಯೇ ಇದ್ದ.

ಅನಂತರ ಬಾಲಕಿಯ ತಾಯಿ ಮತ್ತು ಸಹೋದರರು ಮನೆಯಲ್ಲಿ ಇಲ್ಲದಿದ್ದಾಗ ಆರೋಪಿಯು ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಲು ಪ್ರಾರಂಭಿಸಿದ್ದಾನೆ. ಈ ಘಟನೆಯನ್ನು ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದ.

ಆರೋಗ್ಯ ತೊಂದರೆಯಿಂದಾಗಿ ತಾಯಿ ಬಾಲಕಿಯನ್ನು ಆದಿಮಾಲಿ ತಾಲೂಕು ಆಸ್ಪತ್ರೆಗೆ ಕರೆತಂದಾಗ ಬಾಲಕಿ ಗರ್ಭಿಣಿ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ಕುರಿತು ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಇಡುಕ್ಕಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬಾಲಕಿಯ ಗರ್ಭಪಾತವಾಗಿದೆ. ಬಳಿಕ ಬಾಲಕಿ ಮತ್ತು ಗರ್ಭಪಾತವಾದ ಭ್ರೂಣದ ವೈದ್ಯಕೀಯ ಮಾದರಿಗಳ ಡಿಎನ್‌ಎ ಪರೀಕ್ಷೆ ನಡೆಸಲಾಗಿದ್ದು, ಇದರಿಂದ ಆರೋಪಿಯನ್ನು ಪತ್ತೆ ಹಚ್ಚಲಾಗಿತ್ತು.

Exit mobile version