Site icon Vistara News

Physical Abuse : ನೂರು ಡಾಲರ್ ಆಫರ್ ಮಾಡಿ ಗಗನ ಸಖಿ ಮೈ ಮುಟ್ಟಿದ ಮಾಲ್ಡೀವ್ಸ್‌ ಪ್ರಜೆ ಅರೆಸ್ಟ್‌!

Physical Abuse by Maldivian person to air hostess

ಬೆಂಗಳೂರು: ಇತ್ತೀಚೆಗೆ ವಿಮಾನದಲ್ಲಿ ಗಗನ ಸಖಿಯರಿಗೆ ಉಪಟಳ ನೀಡುವುದು, ಲೈಂಗಿಕ ದೌರ್ಜನ್ಯ (Physical Abuse) ನಡೆಸುವುದು ಹೆಚ್ಚಾಗಿದೆ. ಮೊನ್ನೆಯಷ್ಟೇ ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ ವೃದ್ಧನೊಬ್ಬ ಕದ್ದು ಮುಚ್ಚಿ ಗಗನಸಖಿಯರ ಫೋಟೊ ತೆಗೆದಿದ್ದಲ್ಲದೆ. ಕಿರುಕುಳ ನೀಡಿದ್ದ. ಇದೀಗ ಇದೆ ರೀತಿ ಬೆಂಗಳೂರಿನಲ್ಲೂ ಗಗನ ಸಖಿಯರಿಗೆ ಮಾಲ್ಡೀವ್ಸ್‌ ಪ್ರಜೆಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.

ಮಾಲ್ಡೀವ್ಸ್ ಪ್ರಜೆಯಾದ ಅಕ್ರಂ ಅಹ್ಮದ್ ಎಂಬಾತ ಕಳೆದ ಆಗಸ್ಟ್ 18ರಂದು ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬರುತ್ತಿದ್ದ. ಇಂಡಿಗೋ ಫ್ಲೈಟ್‌ನಲ್ಲಿ ಪ್ರಯಾಣ ಮಾಡುವಾಗ ಗಗನ ಸಖಿ ಬಳಿ ಬಿಯರ್ ಹಾಗೂ ಗೋಡಂಬಿ‌ ಕೇಳಿದ್ದಾನೆ. ಬಳಿಕ ಸುಮ್ಮನಾಗದ ಈತ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಮಾತ್ರವಲ್ಲದೆ I have been looking for a girl like you , how much you charge for service and when will you be free ಎಂದು ಕೇಳಿದ್ದಾನೆ.

ಇದನ್ನೂ ಓದಿ: Old Age Love : 70ರ ಅಜ್ಜನಿಂದ ಲವ್‌ ದೋಖಾ; ಠಾಣೆ ಮೆಟ್ಟಿಲೇರಿದ 63ರ ವೃದ್ಧೆ!

ಬಂಧಿತ ಆರೋಪಿ

ಬಳಿಕ ಮತ್ತೊಬ್ಬ ಗಗನ‌‌ಸಖಿಯನ್ನು ಕರೆದು ನಿನಗೆ ಹತ್ತು ಡಾಲರ್ ಬದಲಾಗಿ ನೂರು ಡಾಲರ್ ನೀಡುತ್ತೇನೆ ಬಾ ಎಂದು ಆಕೆಯ ದೇಹವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಇಷ್ಟು ಮಾತ್ರವಲ್ಲದೆ ಫ್ಲೈಟ್‌ ಲ್ಯಾಂಡ್ ಆಗುವಾಗ ಪದೇಪದೆ ಎದ್ದು ನಿಲ್ಲುವ ಮೂಲಕ ವಿಮಾನಯಾನದ ನಿಯಮಗಳನ್ನು ಮುರಿದಿದ್ದಾನೆ.

ಕಂಬಿ ಹಿಂದೆ ಲಾಕ್‌

ಸದ್ಯ ಈತನಿಂದ ಮುಜುಗರಕ್ಕೊಳಗಾದ ಗಗನ ಸಖಿಯರು ಫ್ಲೈಟ್‌ ಲ್ಯಾಂಡ್ ಆಗುತ್ತಿದ್ದಂತೆ ಕೆಐಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಕೂಡಲೇ ಅಕ್ರಂ ಅಹ್ಮದ್‌ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version