Site icon Vistara News

Physical Abuse: ನಡುಬೀದಿಯಲ್ಲಿ ಲೈಂಗಿಕ ಕಿರುಕುಳ, ಹೆಂಡತಿಯನ್ನು ಕಳಿಸುವಂತೆ ಗಂಡನಿಗೆ ಬೆದರಿಕೆ

physical abuse bangalore crime

ಬೆಂಗಳೂರು: ಸಿಲಿಕಾನ್‌ ಸಿಟಿ (Silicon city) ಬೆಂಗಳೂರು ಹೆಣ್ಣು ಮಕ್ಕಳಿಗೆ ಎಷ್ಟು ಸೇಫ್ ಎಂಬ ಪ್ರಶ್ನೆ ಮತ್ತೆ ಮತ್ತೆ ಎದುರಾಗುತ್ತಲೇ ಇದೆ. ಇಂಥ ಕರಾಳ ಪ್ರಕರಣಗಳು (Crime news) ಘಟಿಸುತ್ತಲೇ ಇವೆ. ನಿನ್ನೆ ರಾತ್ರಿ ಬಿಹಾರ ಮೂಲದ ದಂಪತಿಗೆ ಲೈಂಗಿಕ ಕಿರುಕುಳದ (Physical abuse) ಕರಾಳ ಅನುಭವ ಆಗಿದ್ದು, ಅದರಿಂದ ಪಾರಾಗಲು ಇಬ್ಬರೂ ಒದ್ದಾಡಿದ್ದಾರೆ.

ನಗರದಲ್ಲಿ ಪದೇ ಪದೆ ಬೆಳಕಿಗೆ ಬರುತ್ತಿರುವ ಹೆಣ್ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಇದೂ ಒಂದು ಸೇರ್ಪಡೆ. ರಾತ್ರಿ ಸಮಯದಲ್ಲಿ ಯುವತಿಯೊಬ್ಬಳಿಗೆ ಪುಂಡರು ಲೈಂಗಿಕ ಕಿರುಕುಳ ನೀಡಿದ್ದಾರೆ. ನಡು ರಸ್ತೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ ಮಾಡಿದ್ದಾರೆ ಎಂದು ಯುವತಿ ಹಾಗೂ ಆಕೆಯ ಪತಿ ಆರೋಪಿಸಿದ್ದಾರೆ. ಕೊಡಿಗೆಹಳ್ಳಿಯ ವಿರೂಪಾಕ್ಷಪುರದಲ್ಲಿ ನಿನ್ನೆ ರಾತ್ರಿ 10:30ರ ಸುಮಾರಿಗೆ ನಡೆದ ಘಟನೆ ಇದು.

ಜೊತೆಗಿದ್ದ ದಂಪತಿಯ ಬಳಿ ಬಂದ ಮೂರ್ನಾಲ್ಕು ಪುಂಡರು, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಯುವತಿಗೆ ಒತ್ತಾಯ ಮಾಡಿದ್ದಾರೆ. ಒಪ್ಪದಿದ್ದಾಗ ಕಿಡ್ನ್ಯಾಪ್ ಮಾಡುವ ಬೆದರಿಕೆ ಹಾಕಿದ್ದಾರೆ. ಈ ದಂಪತಿ ಬಿಹಾರ ಮೂಲದವರಾಗಿದ್ದು, ಈ ದಂಪತಿಗೆ ನಿನ್ನೆ ರಾತ್ರಿ ಕರಾಳ ಅನುಭವವಾಗಿದೆ. ಹೆಂಡತಿಯನ್ನು ಕಳಿಸುವಂತೆ ಪುಂಡರು ಗಂಡನಿಗೆ ಬೆದರಿಕೆ ಹಾಕಿದ್ದಾರೆ. ಗಂಡನ ಸ್ನೇಹಿತನಿಂದಲೇ ಕೃತ್ಯ ನಡೆದಿದೆ.

ಇದರಿಂದ ಭಯಭೀತರಾದ ದಂಪತಿ ಸಹಾಯ ಕೋರಿ ಬೆಂಗಳೂರು ಪೊಲೀಸರಿಗೆ ಫೋನ್ ಮಾಡಿದರೂ ಸರಿಯಾದ ರೆಸ್ಪಾನ್ಸ್ ಸಿಕ್ಕಿಲ್ಲ. ಕಿರುಕುಳದ ಬಗ್ಗೆ ಬೆಂಗಳೂರು ಪೋಲಿಸ್ ಸಹಾಯವಾಣಿಗೆ ಕರೆ ಮಾಡಿದ್ದರು. ಬೆಂಗಳೂರು ಪೋಲಿಸರು ಸ್ಪಂದಿಸದಿದ್ದುದರಿಂದ ಬಿಹಾರ ಪೋಲಿಸರಿಗೆ ದಂಪತಿ ಫೋನ್ ಮಾಡಿದ್ದಾರೆ. ಕೊಡಿಗೆಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಧ್ಯಪ್ರದೇಶ: ಹೊಟೇಲ್‌ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಹಿಂದೂ ಯುವತಿಯ ಮೃತದೇಹ ಪತ್ತೆ (Love Jihad) ಯಾಗಿದ್ದು, ಆಕೆ ಪ್ರಿಯಕರ ಜುನೈದ್‌ (Junaid) ಎಂಬಾತನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಮಧ್ಯಪ್ರದೇಶ (Madhya pradesh) ಧಾರ್‌ ಜಿಲ್ಲೆಯಲ್ಲಿ ಈ ಘಟನೆ ನಡೆಸಿದ್ದು, ಸಾಮಾಜಿಕ ಜಾಲತಾಣ (Social Media) ದಲ್ಲಿ ವಿಡಿಯೋ ಬಹಳ ಸುದ್ದಿ ಮಾಡುತ್ತಿದೆ. ಪೊಲೀಸ್‌ ಮಾಹಿತಿ ಪ್ರಕಾರ, ಜುನೈದ್‌ ಎಂಬಾತನ ಹೆಸರಿನಲ್ಲಿ ಬುಕ್‌ ಆಗಿದ್ದ ಹೊಟೇಲ್‌ ರೂಂನಲ್ಲಿ ಹಿಂದೂ ಯುವತಿಯ(24) ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ.

ವಟಿಕಾ ಎಂಬ ಹೊಟೇಲ್‌ನಲ್ಲಿ ಈ ಘಟನೆ ನಡೆದಿದ್ದು, ಮೃತ ಯುವತಿ ಎರಡು ದಿನಗಳಿಂದ ಆರೋಪಿ ಜುನೈದ್‌ ಜೊತೆ ಹೊಟೇಲ್‌ನಲ್ಲಿ ತಂಗಿದ್ದಳು. ಅನುಮಾನಗೊಂಡ ಹೊಟೇಲ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ಬಾಗಿಲು ಒಡೆದು ನೋಡಿದಾಗ ಆಕೆಯ ದೇಹ ಸೀಲಿಂಗ್‌ ಫ್ಯಾನ್‌ನಲ್ಲಿ ನೇತಾಡುತ್ತಿತ್ತು.

ಮದುವೆಗೆ ನಿರಾಕರಿಸಿದ್ದಕ್ಕೆ ಸೂಸೈಡ್‌

ಇನ್ನು ಆರೋಪಿ ಜುನೈದ್‌ ಮದುವೆಗೆ ನಿರಾಕರಿಸಿದಕ್ಕೆ ಬೇಸರಗೊಂಡು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್‌ ಆದಿಕಾರಿ ಅಮಿತ್‌ ಕುಮಾರ್‌ ಮಿಶ್ರಾ, 24 ವರ್ಷದ ಯುವತಿ ಮೃತದೇಹ ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದೆವು. ಆಕೆ ತನ್ನ ಚೂಡಿದಾರ್‌ ಶಾಲಿನಿಂದ ಕುತ್ತಿಗೆ ಬಿಗಿದು ಸಾವಿಗೆ ಶರಣಾಗಿದ್ದಾಳೆ. ಇನ್ನು ಈಕೆ ಎರಡು ದಿನಗಳಿಂದ ಜುನೈದ್‌ ಎಂಬಾತನ ಜತೆ ಹೊಟೇಲ್‌ನಲ್ಲಿ ತಂಗಿದ್ದಳು ಎಂಬ ಮಾಹಿತಿ ಇದೆ.

ಇದನ್ನೂ ಓದಿ:America Shootout: ಅಮೆರಿಕದಲ್ಲಿ ಮತ್ತೆ ಶೂಟೌಟ್‌; 4 ಪೊಲೀಸರು ಬಲಿ

ಯುವತಿ ಮತ್ತು ಆರೋಪಿ ಜುನೈದ್‌ ಇಂಧೋರ್‌ನ ಮಹುಗಾವ್‌ ಜಿಲ್ಲೆಯವರಾಗಿದ್ದು, ಇಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಕಾಲೇಜಿನಲ್ಲೇ ಇಬ್ಬರು ಪರಸ್ಪರ ಪ್ರೀತಿಸಲು ಶುರುಮಾಡಿದ್ದು, ಕಳೆದ ಐದು ವರ್ಷದಿಂದ ರಿಲೇಶನ್‌ಶಿಪ್‌ನಲ್ಲಿದ್ದರು. ಯುವತಿ ತನ್ನನ್ನು ಮದುವೆ ಆಗುವಂತೆ ಜುನೈದ್‌ನನ್ನು ಆಗಾಗ ಒತ್ತಾಯಿಸುತ್ತಿದ್ದಳು. ಆದರೆ ಆತ ಮದುವೆಗೆ ತಯಾರಿರಲಿಲ್ಲ. ನೆಪ ಹೇಳಿಕೊಂಡು ಮದುವೆಯನ್ನು ಮುಂದಕ್ಕೆ ತಳ್ಳುತ್ತಲೇ ಇದ್ದ. ಇದೇ ಕಾರಣಕ್ಕೆ ಬೇಸರಗೊಂಡಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಇವರಿಬ್ಬರ ಪ್ರೀತಿಯ ವಿಷಯ ಮನೆಯವರಿಗೂ ತಿಳಿದಿತ್ತು. ಇದೀಗ ನಾಪತ್ತೆಯಾಗಿರುವ ಜುನೈದ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Murder case: ಹೆಂಡ್ತಿ ಮೇಲೆ ಸಂಶಯ; ಕುಡಿದು ಬಂದು ಕೊಡಲಿಯಿಂದ ಕೊಚ್ಚಿ ಕೊಂದ

Exit mobile version