Site icon Vistara News

POCSO Case: ಬಾಗೇಪಲ್ಲಿಯಲ್ಲಿ 14 ವರ್ಷದ ಬಾಲಕಿಗೆ ಹೆರಿಗೆ!

POCSO Case

ಚಿಕ್ಕಬಳ್ಳಾಪುರ: ತುಮಕೂರು ಜಿಲ್ಲೆಯ ಮಧುಗಿರಿ ಹಾಸ್ಟೆಲ್‌ನಲ್ಲಿದ್ದ (Madhugiri Hostel) 14 ವರ್ಷದ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಆರೋಪಿ ಮೇಲೆ ಪೋಕ್ಸೋ (POCSO Case) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ತುಮಕೂರು ಜಿಲ್ಲೆಯ ಮಧುಗಿರಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿದ್ದುಕೊಂಡು ಈಕೆ 9ನೇ ತರಗತಿ ಓದುತ್ತಿದ್ದಳು. ಈ ಮಧ್ಯೆ ಗರ್ಭಿಣಿಯಾಗಿದ್ದು, ಈಗ ಹೆರಿಗೆಯಾಗಿದೆ. ಆದರೆ, ತನಗೆ ಹೀಗಾಗಿರುವ ವಿಚಾರವನ್ನು ಆಕೆ ಭಯದಿಂದ ಮುಚ್ಚಿಟ್ಟಿದ್ದಾಳೆ ಎನ್ನಲಾಗಿದೆ.

ಬಾಗೇಪಲ್ಲಿ ತಾಲೂಕಿನ ಕನ್ನಂಪಲ್ಲಿ ಗ್ರಾಮದಲ್ಲಿ ತಾಯಿ ಜತೆಗೆ ಇದ್ದಾಗ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೀಗಾಗಿ ತಾಯಿಯು ಮಗಳನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಈಕೆಯನ್ನು ಪರೀಕ್ಷೆ ಮಾಡಿದ ವೈದ್ಯರು, ಇದು ಹೊಟ್ಟೆನೋವಲ್ಲ, ಹೆರಿಗೆ ನೋವು ಎಂದು ಹೇಳಿದ್ದಾರೆ. ಇದರಿಂದ ತಾಯಿ – ಮಗಳಿಗೆ ಆಕಾಶವೇ ಕಳಚಿಬಿದ್ದಂತೆ ಆಗಿದೆ. ಕೂಡಲೇ ಆಕೆಗೆ ಹೆರಿಗೆ ಮಾಡಿಸಲಾಗಿದೆ.

ಮಗುವಿನ ತೂಕ 2.2 ಕೆಜಿ ಇದ್ದು, ಹೆಚ್ಚಿನ ಆರೈಕೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈಗ ಬಾಲಕಿಯ ಈ ಪರಿಸ್ಥಿತಿಗೆ ಕಾರಣವಾದವನಿಗಾಗಿ ಹುಡುಕಾಟ ನಡೆಸಲಾಗಿದೆ. ಈ ಬಗ್ಗೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Killer CEO: ʼಪ್ರೀತಿಯಿಂದಾಗಿಯೇ ಮಗುವನ್ನು ಕೊಂದೆʼ ಎಂದಳಾ ಹಂತಕಿ!

ಬೆಂಗಳೂರು: ʼನನಗೆ ಮಗನ ಮೇಲೆ ಅಪಾರ ಪ್ರೀತಿಯಿತ್ತು, ಅದಕ್ಕಾಗಿಯೇ ಮಗುವನ್ನು ಕೊಂದೆʼ ಎಂದು ಗೋವಾದಲ್ಲಿ ಮಗುವನ್ನು ಕೊಂದು ಬ್ಯಾಗಿನಲ್ಲಿ ಹಾಕಿ ತಂದ ಹಂತಕಿ, ಕಿಲ್ಲರ್‌ ಸಿಇಒ (Killer CEO) ಸುಚನಾ ಸೇಠ್‌ (Suchana Seth) ಹೇಳಿದ್ದಾಳೆ.

ಮಗು ಹತ್ಯೆ ಪ್ರಕರಣದಲ್ಲಿ ಮೈಂಡ್‌ಫುಲ್‌ ಎಐ ಲ್ಯಾಬ್ಸ್‌ ಸಿಇಒ ಸುಚನಾ ಸೇಠ್ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಮಗುವಿನ ಮೇಲಿನ ಪ್ರೀತಿ ಹಾಗೂ ಮಾಜಿ ಗಂಡನ ಮೇಲಿನ ದ್ವೇಷದಿಂದಾಗಿಯೇ ಈ ಕೊಲೆ ಮಾಡಿದ್ದೇನೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ.

ತನ್ನ ದಿನಚರಿ ಹೇಳಿ ಬಿಡುತ್ತೆ ಹಾಗೂ ತಂದೆಯ ಜೊತೆ ಅಟ್ಯಾಚ್‌ಮೆಂಟ್ ಹೆಚ್ಚಾಗುತ್ತೆ ಎಂಬ ಕಾರಣದಿಂದ ಪತಿ ವೆಂಕಟರಮಣ ಕರೆ ಮಾಡಿದಾಗ ಸುಚನಾ ಅದನ್ನು ರಿಸೀವ್ ಮಾಡಿರಲಿಲ್ಲ. ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಮಗು ತಂದೆ ಜತೆ ಹೋಗಿಬಿಡಬಹುದು ಹಾಗೂ ಕೋರ್ಟ್ ಕೂಡ ಇದಕ್ಕೆ ಸಮ್ಮತಿ ಸೂಚಿಸಬಹುದು ಎಂಬ ಕಾರಣಕ್ಕೆ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

“ನಮ್ಮ ವಿಚ್ಛೇದನ ಕೋರ್ಟ್‌ನಲ್ಲಿತ್ತು. ವಾರಕ್ಕೊಮ್ಮೆ ಪತಿ ವೆಂಕಟರಮಣನಿಗೆ ಮಗುವನ್ನು ವಿಡಿಯೊ ಕಾಲ್ ಮೂಲಕ ತೋರಿಸಬೇಕಿತ್ತು. ಅದು ನನಗೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೆ ಬಹಳ ಪ್ರೀತಿ. ಹೀಗಾಗಿ ನಾನು ಮಗುವಿನ ಪ್ರಜ್ಞೆ ತಪ್ಪಿಸಲು ಮುಖಕ್ಕೆ ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆ. ಆದರೆ, ಮಗು ಸಾವನ್ನಪ್ಪಿತ್ತು. ಇದೇ ನೋವಿನಲ್ಲಿ ಕೈ ಕುಯ್ದು ಆತ್ಮಹತ್ಯೆಗೆ ಯತ್ನಿಸಿದೆ. ಅದು ಸಾಧ್ಯವಾಗಿಲ್ಲ. ಗಾಬರಿಯಲ್ಲಿ ಏನೂ ಮಾಡಬೇಕೆಂದು ತೋಚದೆ ಸೂಟ್‌ಕೇಸ್‌ನಲ್ಲಿ ಹಾಕಿ ಪರಾರಿಯಾಗಲು ಯತ್ನಿಸಿದೆ” ಎಂದು ಸುಚನಾ ಸೇಠ್‌ ಹೇಳಿದ್ದಾಳೆ.

ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ

ಬುಧವಾರ ಆಪ್ತರು, ಕುಟುಂಬಸ್ಥರಿಗೆ ಮೃತ ಮಗುವಿನ ಅಂತಿಮ ದರ್ಶನಕ್ಕೆ ಯಶವಂತಪುರದ ಬಳಿಯ ಬ್ರಿಗೇಡ್ ಗೇಟ್‌ವೇ ರೆಸಿಡೆನ್ಸಿಯ ಫ್ಲ್ಯಾಟ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ದರ್ಶನದ ಬಳಿಕ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಂಗಳವಾರ ಮಧ್ಯರಾತ್ರಿ 1.45ರ ಸುಮಾರಿಗೆ ಹಿರಿಯೂರಿನಿಂದ ಬೆಂಗಳೂರಿಗೆ ಮೃತದೇಹವನ್ನು ಕುಟುಂಬಸ್ಥರು ತಂದಿದ್ದರು. ಬ್ರಿಗೇಡ್ ಅಪಾರ್ಟ್ಮೆಂಟ್‌ನಲ್ಲಿ ಸ್ಥಳೀಯ ಪೊಲೀಸರು ಬಿಗಿ ಭದ್ರತೆ ಹಾಕಿದ್ದಾರೆ. ಗೋವಾ ಪೊಲೀಸರು ಕೂಡ ಹೆಚ್ಚಿನ ತನಿಖೆಗಾಗಿ ಫ್ಲಾಟ್‌ನಲ್ಲಿ ಬೀಡು ಬಿಟ್ಟಿದ್ದಾರೆ.

ಇದನ್ನೂ ಓದಿ: Forced Conversion : ಮನೆಯೊಳಗೆ ಅನಧಿಕೃತ ಚರ್ಚ್‌ ನಿರ್ಮಿಸಿ ಪ್ರಾರ್ಥನೆ; ಭದ್ರಾವತಿಯಲ್ಲಿ ಮತಾಂತರಕ್ಕೆ ಪ್ರಚೋದನೆ!

ಸುಚನಾ ಸೇಠ್‌ ಅವರನ್ನು ಈಗಾಗಲೇ ಆರು ದಿನಗಳ ಕಾಲ ಗೋವಾ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ಸ್ಪಾಟ್ ಇನ್ವೆಷ್ಟಿಗೇಷನ್ ನಡೆಯುತ್ತಿದೆ. ಮಗುವಿನ ಮೃತದೇಹದಲ್ಲಿ ಯಾವುದೇ ಗಾಯಗಳಿಲ್ಲ. ಎದೆ ಹಾಗು ಮುಖದ ಭಾಗ ಮಾತ್ರ ಊದಿಕೊಂಡಿದೆ. ಸದ್ಯ ಸುಚನಾ ಸ್ಟೇಟ್‌ಮೆಂಟನ್ನು ಪಡೆದುಕೊಂಡ ಬಳಿಕ ಕೃತ್ಯಕ್ಕೆ ಬಳಸಿದ್ದ ದಿಂಬುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Exit mobile version