ಚಿಕ್ಕಮಗಳೂರು: ಹೆಲ್ಮೆಟ್ ಹಾಕದೆ ಬೈಕ್ ಚಲಾಯಿಸುತ್ತಿದ್ದ ಲಾಯರ್ ಮೇಲೆ ಪೋಲಿಸರು ಮನಸೋ ಇಚ್ಛೆ ಹಲ್ಲೆ (Police Assault) ನಡೆಸಿದ್ದಾರೆ. ವಕೀಲರು ರಾತ್ರೋರಾತ್ರಿ ಭಾರಿ ಪ್ರತಿಭಟನೆ (Lowers protest) ನಡೆಸಿದ್ದು, 6 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಚಿಕ್ಕಮಗಳೂರು ನಗರ ಠಾಣೆಯ ಪೋಲಿಸರ ಮೇಲೆ ಈ ಗಂಭೀರ ಆರೋಪ ಬಂದಿದೆ. ಹೆಲ್ಮೆಟ್ ಹಾಕದೆ ಬೈಕ್ ಓಡಿಸುತ್ತಿದ್ದ ವಕೀಲ ಪ್ರೀತಮ್ ಅವರನ್ನು ತಡೆದ ಪೊಲೀಸರು, ಫೈನ್ ಕಟ್ಟುವುದಾಗಿ ಹೇಳಿದರೂ ಬಿಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬೈಕಿನಿಂದ ಕೀ ಕಿತ್ತುಕೊಂಡ ಪೊಲೀಸರನ್ನು ಪ್ರೀತಮ್ ಪ್ರಶ್ನೆ ಮಾಡಿದಾಗ ಮನಸೋ ಇಚ್ಛೆ ಥಳಿಸಿ, ಹಲ್ಲೆ ನಡೆಸಿದ್ದಾರೆ.
ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಪ್ರೀತಮ್ ದಾಖಲು ಮಾಡಲಾಗಿದೆ. ಲಾಯರ್ ಪ್ರೀತಮ್ ಎದೆ, ಬೆನ್ನು, ಕೈಯಲ್ಲಿ ರಕ್ತದ ಕಲೆಗಳಿದ್ದು, ಬೆನ್ನು, ಕೈ, ಎದೆಗೆ ಗಂಭೀರ ಗಾಯಗಳಾಗಿವೆ. ರಾತ್ರಿ ಇದರಿಂದ ರೊಚ್ಚಿಗೆದ್ದ ವಕೀಲರು ಹಾಗೂ ಸ್ಥಳೀಯರು ಸರ್ಕಾರಿ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆ ಬಳಿ ಜಮಾಯಿಸಿ, ಪ್ರತಿಭಟನೆ ನಡೆಸಿದರು.
ಪ್ರಕರಣ ಸಂಬಂಧ ಒಬ್ಬ PSI ಸೇರಿ 6 ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಆದೇಶ ಹೊರಡಿಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮಕ್ಕೆ ವಕೀಲರು ರಾತ್ರಿ ಇಡೀ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: Attack on youth: ನಾದಿನಿ ಜತೆ ಅಶ್ಲೀಲ ವರ್ತನೆ ಪ್ರಶ್ನಿಸಿದ್ದಕ್ಕೆ ಯದ್ವಾತದ್ವಾ ಹಲ್ಲೆ, ಮುಖಕ್ಕೆ ಮೂತ್ರ ಮಾಡಿ ವಿಕೃತಿ