ನವದೆಹಲಿ: ಮಾನವೀಯತೆ ಎಂಬುದು ಮರೆಯಾದರೆ, ಕಟುಕತನ ಅತಿರೇಕಕ್ಕೆ ಹೋದರೆ ಏನಾಗುತ್ತದೆ ಎಂಬುದಕ್ಕೆ ದೆಹಲಿಯಲ್ಲೊಂದು ನಿದರ್ಶನ (Woman Set On Fire) ಸಿಕ್ಕಿದೆ. ಏಳು ತಿಂಗಳ ಗರ್ಭಿಣಿ ಮೇಲೆ ಆಕೆಯ ಪತಿ ಹಾಗೂ ಅತ್ತೆಯು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ದೆಹಲಿಯ ಬವಾನ ಪ್ರದೇಶದಲ್ಲಿ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವರದಕ್ಷಿಣೆಗಾಗಿ ಇಂತಹ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
“ಪತಿ ಹಾಗೂ ಆತನ ಸಂಬಂಧಿಕರು ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ಕುರಿತು ದೆಹಲಿ ಪೊಲೀಸರಿಗೆ ನೋಟಿಸ್ ನೀಡಲಾಗಿದೆ. ಹಾಗೆಯೇ, ಸಂತ್ರಸ್ತೆಗೆ ಸಕಲ ರೀತಿಯ ನೆರವು ನೀಡಲಾಗುತ್ತಿದೆ” ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ | Body found | ಮನೆಯಿಂದ ಹೊರ ಹೋಗಿದ್ದ ವೃದ್ಧ ಶವವಾಗಿ ಪತ್ತೆ; ಕೊಲೆ ಶಂಕೆ