Site icon Vistara News

Ragging Cruelty : ಹೈಸ್ಕೂಲ್‌ನಲ್ಲೇ ಭಯಾನಕ ರ‍್ಯಾಗಿಂಗ್‌; ಹೋಮೋ ಸೆಕ್ಸ್‌ಗೆ ಒತ್ತಾಯಿಸಿ ಹಾಸ್ಟೆಲ್‌ ಹುಡುಗರ ಚಿತ್ರಹಿಂಸೆ

Sexual Harrassment on Boy in tumkur Hostel

ತುಮಕೂರು: ರಾಜ್ಯದಲ್ಲಿ ನಾವ್ಯಾರೂ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದ ಭಯಾನಕ ಘಟನೆಯೊಂದು (Horrible Cruelty) ನಡೆದಿದೆ. ಇನ್ನೂ ಮಕ್ಕಳು ಎಂದು ನಾವೆಲ್ಲ ಪರಿಗಣಿಸುವ 9 ಮತ್ತು 10ನೇ ಕ್ಲಾಸಿನ ವಿದ್ಯಾರ್ಥಿಗಳು ತಮ್ಮದೇ ಗೆಳೆಯನೊಬ್ಬನನ್ನು ಸಲಿಂಗ ಕಾಮಕ್ಕೆ (Pressure for Homo sex) ಒತ್ತಾಯಿಸಿ ಚಿತ್ರಹಿಂಸೆ ನೀಡಿದ ಕ್ರೌರ್ಯವಿದು (Ragging Cruelty). ಇದು ನಡೆದಿರುವುದು ಎಲ್ಲೋ ದೂರದಲ್ಲಿ ಅಲ್ಲ. ನಮ್ಮದೇ ತುಮಕೂರಿನ ಕೆಂಪೇಗೌಡ ವಸತಿ ಶಾಲೆಯಲ್ಲಿ (Kempegowda Residential school in Tumkur)!

ಇಲ್ಲಿ ರ‍್ಯಾಗಿಂಗ್‌ ಅಥವಾ ಸೆಕ್ಸ್‌ ಬಯಕೆಯ ಕ್ರೌರ್ಯ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಕೆಲವು ವಿದ್ಯಾರ್ಥಿಗಳು ಅತ್ಯಂತ ಅಸಹ್ಯ ರೀತಿಯಲ್ಲಿ ಲೈಂಗಿಕ ದೌರ್ಜನ್ಯ (Sexual Harrassment) ನಡೆಸಿದ್ದಾರೆ. ಒಬ್ಬ ವಿದ್ಯಾರ್ಥಿಯ ಬಾಯಿಗೆ ಇತರ ಕೆಲವು ವಿದ್ಯಾರ್ಥಿಗಳು ತಮ್ಮ ಗುಪ್ತಾಂಗವನ್ನು ಇಟ್ಟು ಅಸಹ್ಯ ಪ್ರದರ್ಶನ ಮಾಡಿದ್ದಾರೆ. ಆತ ಅದಕ್ಕೆ ಒಪ್ಪದೆ ಇದ್ದುದಕ್ಕೆ, ಸಲಿಂಗ ಕಾಮಕ್ಕೆ ಸಹಕರಿಸದೆ ಇದ್ದುದಕ್ಕೆ ಅವನಿಗೆ ಬ್ಲೇಡ್‌ನಿಂದ ಕೊಯ್ದು ಕ್ರೌರ್ಯ ಮೆರೆದಿದ್ದಾರೆ.

ತುಮಕೂರಿನ ಕೆಂಪೇಗೌಡ ವಸತಿ ಶಾಲೆಯಲ್ಲಿ ಈ ಭಯಾನಕ ಘಟನೆ ನಡೆದಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಒಂಬತ್ತನೇ ತರಗತಿ ವಿದ್ಯಾರ್ಥಿಗೆ ಹರಿಯ ವಿದ್ಯಾರ್ಥಿಗಳು ನಿತ್ಯ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎನ್ನಲಾಗಿದೆ. ಆತ ಹೋಮೋಸೆಕ್ಸ್‌ಗೆ ವಿರೋಧಿಸಿದ್ದಕ್ಕೆ ಸಿಗರೇಟ್‌ನಿಂದ ಸುಡಲಾಗಿದೆ!

ಇಷ್ಟೇ ಅಲ್ಲ, ಅವನ ದೇಹಕ್ಕೆ ಬ್ಲೇಡ್‌ನಿಂದ ಗೀರಿ, ಕಾದ ಮೇಣವನ್ನು ಸುರಿಸಿದ್ದಲ್ಲದೆ, ತಲೆಗೆ ರಾಡ್‌ನಿಂದ ಹೊಡೆದು ದೌರ್ಜನ್ಯ ನಡೆಸಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಗಂಡು ಮಕ್ಕಳೇ ಇರುವ ಈ ಹಾಸ್ಟೆಲ್‌ನಲ್ಲಿ ಸಣ್ಣ ಸಣ್ಣ ಮಕ್ಕಳೇ ಇಂಥ ಭಯಾನಕ ಕೃತ್ಯಗಳನ್ನು ನಡೆಸುತ್ತಿರುವುದು ಭಯ ಹುಟ್ಟಿಸಿದೆ.

ನಮ್ಮ ಶಾಲೆಯಲ್ಲಿ ನಡೆದೇ ಇಲ್ಲ ಎಂದರಂತೆ ಪ್ರಾಂಶುಪಾಲೆ!

ದೌರ್ಜನ್ಯಕ್ಕೆ ಒಳಗಾದ ಬಾಲಕ ಈ ವಿಚಾರವನ್ನು ತನ್ನ ಹೆತ್ತವರ ಮುಂದೆ ಈ ವಿಷಯವನ್ನು ತಿಳಿಸಿದ್ದಾನೆ. ಅವರು ಬಂದು ವಸತಿ ಶಾಲೆಯಲ್ಲಿ ವಿಚಾರಿಸಿದರೆ ಇಲ್ಲಿನ ಪ್ರಿನ್ಸಿಪಾಲ್‌ ಆಗಿರುವ ಕನಕ ಲಕ್ಷ್ಮಿ ಮತ್ತು ವಾರ್ಡನ್ ಕುಮಾರ್ ಅವರು ನಮ್ಮಲ್ಲಿ ಇಂಥ ಯಾವುದೇ ಕೃತ್ಯ ನಡೆದಿಲ್ಲ ಎಂದು ಅಸಡ್ಡೆಯ ಮಾತು ಆಡಿದ್ದರಂತೆ. ನಮ್ಮ ಮಗನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ, ಚಿತ್ರ ಹಿಂಸೆ ನೀಡಲಾಗಿದೆ ಎಂದು ಪೋಷಕರು ಬಂದು ದೂರು ಚೇರ್ ಮೆನ್ ದಾಸೇಗೌಡ, ಪ್ರಾಂಶುಪಾಲೆ ಕನಕ ಲಕ್ಷ್ಮಿ ಅವರು ಕ್ಯಾರೇ ಅನ್ನಲಿಲ್ಲವಂತೆ.

ಪೊಲೀಸ್‌ ಠಾಣೆಯಲ್ಲಿ ದಾಖಲಾಯ್ತು ಎಫ್‌ಐಆರ್‌

ಇದೀಗ ಮಗನ ಮೇಲಿನ ಹೋಮೋ ಸೆಕ್ಸ್ ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿ ಪೋಷಕರಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ತುಮಕೂರಿನ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯಿದೆ ಅಡಿ ಎಫ್‌ಐಆರ್‌ ಕೂಡಾ ದಾಖಲಾಗಿದೆ.

ವಾರ್ಡನ್ ಕುಮಾರ್, ಪ್ರಾಂಶುಪಾಲೆ ಕನಕ ಲಕ್ಷ್ಮಿ, 9 ಮತ್ತು 10ನೇ ತರಗತಿಯ ಮೂವರು ಬಾಲಕರು ಸೇರಿದಂತೆ ಒಟ್ಟು ಮಂದಿ ಮೇಲೆ ಎಫ್ಐಆರ್ ದಾಖಲಾಗಿದೆ.

ಇದೀಗ ಎಫ್ಐಆರ್ ದಾಖಲಾಗುತಿದ್ದಂತೆ ಬೆಳಂಗುಬದಲ್ಲಿರುವ ಕೆಂಪೇಗೌಡ ವಸತಿ ಶಾಲೆಯ ಆವರಣದಲ್ಲಿ ಮಾಧ್ಯಮಕ್ಕೆ ಪ್ರವೇಶ ನಿಷೇಧದ ಬೋರ್ಡ್ ಹಾಕಿಸಲಾಗಿದೆ.

ಹುಡುಗರಿಂದಲೇ ಸಿಗರೇಟು ಕೇಳುತಿದ್ದ ಎ1 ಆರೋಪಿ ಕುಮಾರ್‌

ಈ ಭಯಾನಕ ಪ್ರಕರಣದಲ್ಲಿ ವಾರ್ಡನ್‌ ಕುಮಾರ್‌ನನ್ನು ನಂಬರ್‌ 1 ಆರೋಪಿ ಎಂದು ಗುರುತಿಸಲಾಗಿದೆ. ಪೋಷಕರು ಹಲವಾರು ಬಾರಿ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಪ್ರಾಂಶುಪಾಲೆ ಕನಕ ಲಕ್ಷ್ಮಿ ಎ2 ಆರೋಪಿ. ಈ ವಾರ್ಡನ್‌ ಕುಮಾರ್‌ ಹಿರಿಯ ವಿದ್ಯಾರ್ಥಿಗಳಿಗೆ ಸಿಗರೇಟ್ ತಂದುಕೊಡುವಂತೆ ತಾಕೀತು ಮಾಡುತಿದ್ದನಂತೆ.

ವಾರ್ಡನ್‌ ಕುಮಾರ್‌, ಚೇರ್ಮನ್‌ ದಾಸೇಗೌಡರು

ಒಂದು ತಿಂಗಳು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ

ದೌರ್ಜನ್ಯಕ್ಕೊಳಗಾದ ಬಾಲಕನ ಮೇಲೆ ಇತರ ಹುಡುಗರ ದೌರ್ಜನ್ಯ ಯಾವ ಮಟ್ಟದಲ್ಲಿತ್ತು ಎಂದರೆ ರಾಡ್‌ನಿಂದ ಹೊಡೆದ ಏಟಿನಿಂದ ಅವನು ಅರೆಪ್ರಜ್ಞಾವಸ್ಥೆಯಲ್ಲಿದ್ದ.

ನಿಜವೆಂದರೆ ಈ ಘಟನೆಗಳೆಲ್ಲ ನಡೆದು ಐದು ತಿಂಗಳೇ ಆಗಿವೆ. ವಸತಿ ಶಾಲೆಯಲ್ಲಿ ನಡೆದ ದೌರ್ಜನ್ಯದಿಂದ ಗಾಯಗೊಂಡಿದ್ದ ಬಾಲಕನನ್ನು ಪೋಷಕರು ಕಳೆದ ಮಾರ್ಚ 23ರಂದೇ ಮನೆಗೆ ಕರೆದುಕೊಂಡು ಹೋಗಿದ್ದರು.

ತಲೆಗೆ ಬಲವಾದ ಏಟು ಬಿದ್ದಿದ್ದರಿಂದ ಅರೆ ಪ್ರಜ್ಞೆಯಲ್ಲಿದ್ದ ಮಹೇಶ್‌ನನ್ನು ಮೊದಲು ಬೆಂಗಳೂರಿನ ರಾಜಾಜಿ ನಗರದ ಕ್ಲಿನಿಕ್‌ಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಕೊಡಿಸಿದರೂ ಸುಧಾರಣೆಗಳನ್ನು ಕಾಣದೆ ಇದ್ದುದರಿಂದ ಬಳಿಕ ಜೂನ್ 23ರಿಂದ ಜುಲೈ 15ರ ವರೆಗೂ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅದಾದ ಬಳಿಕ ಆತ ಚೇತರಿಸಿಕೊಂಡಿದ್ದಾರೆ. ಇದೆಲ್ಲವೂ ಮುಗಿದ ಬಳಿಕ ಈಗ ಕೇಸು ದಾಖಲಿಸಲಾಗಿದೆ.

Exit mobile version