ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡೆದ ಹಿಂದೂ ಟೇಲರ್ ಕನ್ಹಯ್ಯ ಲಾಲ್ ಅವರ ಭೀಕರ ಹತ್ಯೆಗೆ ದೇಶಾದ್ಯಂತ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ಫಲಕ ಹಿಡಿದುಕೊಂಡು ಸೋಷಿಯಲ್ ಮೀಡಿಯಾ ಮೂಲಕ ಮತಾಂಧರ ವಿರುದ್ಧ ದನಿ ಹೊರ ಹಾಕುತ್ತಿದ್ದಾರೆ.
ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಅನಿತಾ ಭಟ್ ʻಹಿಂದೂ ಜೀವಗಳು ಮುಖ್ಯ, ಈಗ ನಾವೂ ಸ್ವಾತಂತ್ರ್ಯವನ್ನು ಪಡೆಯುತ್ತೇವೆʼ ಎಂದು ಬರೆದಿರುವ ಫಲಕ ಹಿಡಿದುಕೊಂಡು ಉದಯಪುರದ ಭೀಕರ ಕೃತ್ಯವನ್ನು ಖಂಡಿಸಿದ್ದಾರೆ. ಈ ಭಾವಚಿತ್ರವನ್ನು ಟ್ವಿಟರ್ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಮತಾಂಧತೆಗೆ ಹಿಂದೂ ಜೀವಗಳನ್ನು ಬಲಿ ಕೊಡಬೇಡಿ ಎಂಬ ಸಂದೇಶವನ್ನು ಅವರು ಸಾರಿದ್ದಾರೆ. ಡೇಸ್ ಆಫ್ ಬೋರಾಪುರ,`ಟಗರು,`ಹೊಸ ಕ್ಲೈಮ್ಯಾಕ್ಸ್ ಮುಂತಾದ ಚಿತ್ರಗಳಲ್ಲಿ ಅನಿತಾ ಭಟ್ ನಟಿಸಿದ್ದರು.
ಇದನ್ನೂ ಓದಿ | Rajasthan murder: ಜೈಪುರದಲ್ಲಿ ಸರಣಿ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದ ಕನ್ಹಯ್ಯ ಲಾಲ್ ಹಂತಕರು, NIA ತನಿಖೆ ವೇಳೆ ಬಯಲು
ಖ್ಯಾತ ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಕೂಡ ಈ ಉಗ್ರ ಕೃತ್ಯದ ವಿರುದ್ಧ ಗಮನ ಸೆಳೆಯುವಂತೆ ಪ್ರತಿಭಟಿಸಿದ್ದಾರೆ. ಅವರನ್ನು ಬೆಂಬಲಿಸಿ ಹಲವರು ಪ್ರತಿಕ್ರಿಯಿಸಿದ್ದಾರೆ.
ಚಿತ್ರ ನಿರ್ಮಾಪಕ, ನಿರ್ದೇಶಕ, ನಟರಾದ ಅಶೋಕ್ ಪಂಡಿತ್, ಅನುಪಮ್ ಖೇರ್ ಮತ್ತು ಕುಸ್ತಿಪಟು ಬಬೀತಾ ಫೋಗಾಟ್ ಅವರೂ ಟ್ವೀಟ್ ಮೂಲಕ ಶಿರಚ್ಛೇದ ಕೃತ್ಯವನ್ನು ಖಂಡಿಸಿದ್ದಾರೆ.
ಇದನ್ನೂ ಓದಿ | Rajasthan murder| ಹಿಂದೂ ಟೇಲರ್ ಕನ್ಹಯ್ಯಲಾಲ್ ಶಿರಚ್ಛೇದ ಖಂಡಿಸಿದ ಖ್ಯಾತ ನಟಿ ಪ್ರಣಿತಾ ಸುಭಾಷ್