ವಿಜಯಪುರ/ಉಡುಪಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಸ್ನಾನಕ್ಕೆಂದು ಬಾವಿಗೆ ಇಳಿದಿದ್ದ ಇಬ್ಬರು ಬಾಲಕರು (Drowned in well) ಮೃತಪಟ್ಟಿದ್ದರೆ, ಉಡುಪಿ ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ (Malpe Beach) ಸಮುದ್ರ ಪಾಲಾಗುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲಾಗಿದೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಬಿಸಿಲಿನ ಬೇಗೆಯಿಂದ ಸ್ನಾನಕ್ಕೆಂದು ಬಾವಿಗೆ ಇಳಿದಿದ್ದ ಬಾಲಕರಿಬ್ಬರು ಮೃತಪಟ್ಟಿದ್ದಾರೆ. ಸೋಮಶೇಖರ್ ಆಲಮೇಲ್ (16), ಮಲಿಕ್ ನದಾಫ್ (16) ಮೃತ ಬಾಲಕರು ಎಂದು ಗುರುತಿಸಲಾಗಿದೆ. ಈಜಲು ಬಾರದೆ ಇಬ್ಬರು ಗೆಳೆಯರು ಮೃತಪಟ್ಟಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ ಬೀಚ್‌ನಲ್ಲಿ ಬಾಲಕನ ರಕ್ಷಣೆ
ಉಡುಪಿ: ಮಲ್ಪೆ ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ ಬಾಲಕನೊಬ್ಬನನ್ನು ರಕ್ಷಣೆ ಮಾಡಲಾಗಿದೆ. ಸಮುದ್ರದಲ್ಲಿ ಆಟವಾಡುತ್ತಾ ನೀರು ಪಾಲಾಗುತ್ತಿದ್ದ ಬಾಲಕನನ್ನು ಲೈಫ್ ಗಾರ್ಡ್‌ಗಳು ಗಮನಿಸಿದ್ದರಿಂದ ರಕ್ಷಣೆ ಸಾಧ್ಯವಾಗಿದೆ.
ಚಿಕ್ಕಬಳ್ಳಾಪುರ ಮೂಲದ ಶ್ರೇಯಸ್ (12) ಬಚಾವಾದ ಬಾಲಕ. ಕುಟುಂಬದೊಂದಿಗೆ ಬಂದಿದ್ದ ಶ್ರೇಯಸ್ ಸಮುದ್ರದಲ್ಲಿ ಆಟವಾಡುತ್ತಿದ್ದ. ಈ ವೇಳೆ ಸಮುದ್ರದ ಅಲೆಗಳು ಹೆಚ್ಚಿದ್ದು, ಶ್ರೇಯಸ್ ನಿಯಂತ್ರಣ ತಪ್ಪಿದ್ದಾನೆ. ಹೀಗಾಗಿ ಮುಳುಗಳು ಆರಂಭಿಸಿದ್ದಾನೆ. ಇದನ್ನು ಕಂಡ ಲೈಫ್ ಗಾರ್ಡ್‌ಗಳು ಕೂಡಲೇ ಕಾರ್ಯಾಚರಣೆಗಳಿದು ಆತನನ್ನು ರಕ್ಷಣೆ ಮಾಡಿದ್ದಾರೆ. ಶ್ರೇಯಸ್‌ಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಅಲ್ಲಿಂದ ಕುಟುಂಬದವರು ತೆರಳಿದ್ದಾರೆ.
Physical Abuse: ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನಿಗೆ 106 ವರ್ಷ ಜೈಲು ಶಿಕ್ಷೆ
ಇಡುಕ್ಕಿ(ಕೇರಳ): ಮಾನಸಿಕ ಅಸ್ವಸ್ಥ (mentally challenged) 15 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ (Physical Abuse) ನಡೆಸಿದ್ದರಿಂದ ಆಕೆ ಗರ್ಭಿಣಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ 44 ವರ್ಷದ ವ್ಯಕ್ತಿಯೊಬ್ಬನಿಗೆ ಕೇರಳ (kerala) ನ್ಯಾಯಾಲಯವು ಸೋಮವಾರ ಒಟ್ಟು 106 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ದೇವಿಕುಲಂ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ (POCSO) ನ್ಯಾಯಾಧೀಶ ಸಿರಾಜುದ್ದೀನ್ ಪಿ.ಎ. ಈ ಮಹತ್ವದ ಆದೇಶವನ್ನು ನೀಡಿದ್ದಾರೆ. ಸಂತ್ರಸ್ತೆಯ ತಾಯಿಯ ಸ್ನೇಹಿತನಾಗಿದ್ದ ವ್ಯಕ್ತಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಹಲವು ಪ್ರಕರಣಗಳಡಿ ಒಟ್ಟು 106 ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಲಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸ್ಮಿಜು ಕೆ. ದಾಸ್ ಹೇಳಿದ್ದಾರೆ.
ಇದನ್ನೂ ಓದಿ: Maoists killed: ಭದ್ರತಾ ಪಡೆಗಳ ಜತೆ ಗುಂಡಿನ ಚಕಮಕಿ, ಏಳು ಮಾವೋವಾದಿಗಳು ಫಿನಿಶ್
ಶಿಕ್ಷೆಯನ್ನು ಏಕಕಾಲದಲ್ಲಿ ಪೂರೈಸಬೇಕಾಗುತ್ತದೆ. ಆದರೆ, ಈ ಅಪರಾಧಿಗೆ ನೀಡಲಾದ ಜೈಲು ಶಿಕ್ಷೆಗಳಲ್ಲಿ ಗರಿಷ್ಠ 22 ವರ್ಷಗಳಾಗಿವೆ. ಅಂದರೆ ಅವರು 22 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಆರೋಪಿಗೆ ನ್ಯಾಯಾಲಯವು 60,000 ರೂ. ದಂಡವನ್ನೂ ವಿಧಿಸಿದೆ. ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ ಅಪರಾಧಿ ಹೆಚ್ಚುವರಿ 22 ತಿಂಗಳ ಕಠಿಣ ಸಜೆ ಅನುಭವಿಸಬೇಕಾಗುತ್ತದೆ.
ಆರೋಪಿಯು ದಂಡವನ್ನು ಪಾವತಿಸಿದರೆ ಇಡುಕ್ಕಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂತ್ರಸ್ತ ಪರಿಹಾರ ಯೋಜನೆಯಿಂದ ಬಾಲಕಿಗೆ ಪರಿಹಾರವಾಗಿ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
2022ರಲ್ಲಿ ನಡೆದ ಘಟನೆ
2022ರಲ್ಲಿ ತ್ರಿಶೂರ್ ಮೂಲದ ಈ ವ್ಯಕ್ತಿಯು ಕೆಲಸದ ನಿಮಿತ್ತ ಅಡಿಮಾಲಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಹುಡುಗಿಯ ತಾಯಿಯೊಂದಿಗೆ ಹೋಟೆಲ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಈತ ಆಕೆಯ ಜತೆ ಸ್ನೇಹ ಬೆಳೆಸಿದ್ದ. ಅನಂತರ ಆಕೆಯ ಮನೆಯಲ್ಲಿಯೇ ಇದ್ದ.
ಆದರೆ, ಬಾಲಕಿಯ ತಾಯಿ ಮತ್ತು ಸಹೋದರರು ಮನೆಯಲ್ಲಿ ಇಲ್ಲದಿದ್ದಾಗ ಆರೋಪಿಯು ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಲು ಪ್ರಾರಂಭಿಸಿದ್ದಾನೆ. ಈ ಘಟನೆಯನ್ನು ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಆರೋಗ್ಯ ತೊಂದರೆಯಿಂದಾಗಿ ತಾಯಿ ಬಾಲಕಿಯನ್ನು ಆದಿಮಾಲಿ ತಾಲೂಕು ಆಸ್ಪತ್ರೆಗೆ ಕರೆತಂದಾಗ ಬಾಲಕಿ ಗರ್ಭಿಣಿ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ಕುರಿತು ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಇಡುಕ್ಕಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬಾಲಕಿಯ ಗರ್ಭಪಾತವಾಗಿದೆ. ಬಳಿಕ ಬಾಲಕಿ ಮತ್ತು ಗರ್ಭಪಾತವಾದ ಭ್ರೂಣದ ವೈದ್ಯಕೀಯ ಮಾದರಿಗಳ ಡಿಎನ್‌ಎ ಪರೀಕ್ಷೆ ನಡೆಸಲಾಗಿದ್ದು, ಇದರಿಂದ ಆರೋಪಿಯನ್ನು ಪತ್ತೆ ಹಚ್ಚಲಾಗಿತ್ತು. ಈ ಪ್ರಕರಣದಲ್ಲೀಗ ಆರೋಪಿಗೆ ಶಿಕ್ಷೆಯಾಗಿದೆ.