Site icon Vistara News

Road Accident : ಡಿವೈಡರ್‌ಗೆ ಬೈಕ್‌ ಬಡಿದು ಮಹಿಳೆ ದಾರುಣ ಸಾವು, VIDEO ಇದೆ

Road Accident Mangalore22

ಮಂಗಳೂರು: ಬೈಕ್ ಡಿವೈಡರ್‌ಗೆ ಡಿಕ್ಕಿ (Bike Hits Divider) ಹೊಡೆದು ಮಹಿಳೆಯೊಬ್ಬರು (Woman died) ದಾರುಣವಾಗಿ (Road Accident) ಸಾವನ್ನಪ್ಪಿರುವ ಘಟನೆ ಮಂಗಳೂರು (Mangalore News) ಹೊರವಲಯದ ನಾಟೆಕಲ್ ಸಮೀಪ ನಡೆದಿದೆ. ಬೋಂದೆಲ್‌ ನಿವಾಸಿ ದೀಕ್ಷಿತ್ ಎಂಬವರ ಪತ್ನಿ ನಿಧಿ (29) ಸಾವನ್ನಪ್ಪಿದವರು.

ನಿಧಿ ಅವರು ತಮ್ಮ ಸಂಬಂಧಿಯಾಗಿರುವ ಯತೀಶ್ ದೇವಾಡಿಗ ಎಂಬವರ ಜತೆ ಮುಡಿಪುವಿನಲ್ಲಿ ಸಂಬಂಧಿಕರ ಗೃಹಪ್ರವೇಶದಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದರು. ಈ ವೇಳೆ ಬೈಕ್ ಸವಾರನ ನಿಯಂತ್ರಣ ತಪ್ಪಿ ನಾಟೆಕಲ್ ಗ್ರೀನ್ ಗ್ರೌಂಡ್ ಸಮೀಪ ಡಿವೈಡರ್ ಗೆ ಬಡಿದಿದೆ. ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಭೀಕರ ದೃಶ್ಯ ಬೈಕ್‌ನ ಹಿಂಬದಿಯಲ್ಲಿ ಬರುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ : Fire Accident :ಕಣ್ಣೆದುರೇ ಹೊತ್ತಿ ಉರಿದ ಬೆಳೆ, ನಂದಿಸಲು ಹೋಗಿ ತಾನೇ ಆಹುತಿಯಾದ ರೈತ ಮಹಿಳೆ

Road Accident: ಬೈಕ್‌ಗಳ ಮುಖಾಮುಖಿ ಡಿಕ್ಕಿ; ಹೆಲ್ಮೆಟ್‌ರಹಿತ ಸವಾರರಿಬ್ಬರು ಬಲಿ

ಮೈಸೂರು: ಎರಡು ಬೈಕುಗಳ ನಡುವೆ (bike hit) ಮುಖಾಮುಖಿ ಡಿಕ್ಕಿ (Road Accident) ಸಂಭವಿಸಿದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ (two death) ಸಾವಿಗೀಡಾಗಿದ್ದಾರೆ. ಈ ದುರಂತ ತಿರುಮಕೂಡಲು ನರಸೀಪುರ ತಾಲೂಕಿನ (Mysore news) ಹೆಳವರಹುಂಡಿ ಬಳಿ ನಡೆದಿದೆ. ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ ಎಂದು ಗೊತ್ತಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಬಿಳಿಗಿರಿ (30‌) ಹಾಗೂ ತಿ.ನರಸೀಪುರ ತಾಲ್ಲೂಕಿನ ಆದಿಬೆಟ್ಟಳ್ಳಿ ಗ್ರಾಮದ ನಾಗರಾಜು (35) ಮೃತ ದುರ್ದೈವಿಗಳು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನ ಹಿಂಬದಿಯಲ್ಲಿಯೂ ಇಬ್ಬರು ಸವಾರರು ಕುಳಿತಿದ್ದು, ಅಪಘಾತದಲ್ಲಿ (road accident) ಅವರಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಮೃತರ ಕುಟುಂಬಸ್ಥರ ಆಕ್ರಂದನ ಕಂಡುಬಂತು. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್‌ ಅಪಘಾತ ನಡೆದ ಸ್ಥಳದಲ್ಲಿ ಯಾವುದೇ ತಿರುವು ಇಲ್ಲ. ಹಾಗಿದ್ದರೂ ಎರಡು ಬೈಕ್‌ಗಳು ಡಿಕ್ಕಿ ಹೊಡೆದುಕೊಂಡದ್ದು ಹೇಗೆ ಎಂಬುದು ಗೊತ್ತಾಗಿಲ್ಲ. ಬೈಕ್‌ಗಳಿಗೆ ಹೆಚ್ಚಿನ ಹಾನಿಯಾಗಿಲ್ಲ. ಇಬ್ಬರೂ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ.

Exit mobile version