Site icon Vistara News

Road Accident : ಹಿಟ್‌ ಆ್ಯಂಡ್ ರನ್‌ಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ತಲೆ ಪೀಸ್‌ ಪೀಸ್‌; ಗಾಡಿ ಸಮೇತ ಚಾಲಕ ಪರಾರಿ

Road Accident Hit And Run case

ಆನೇಕಲ್: ಹಿಟ್‌ ಆ್ಯಂಡ್ ರನ್‌ಗೆ (Hit And Run Case) ಬೈಕ್‌ ಸವಾರನೊಬ್ಬ ಬಲಿಯಾಗಿದ್ದಾನೆ. ಬೆಂಗಳೂರು ಹೊರವಲಯದ ಆನೇಕಲ್ (Anekal News) ಪಟ್ಟಣದ ಮಿರ್ಜಾ ರಸ್ತೆಯ ಪೊಲೀಸ್ ಕ್ವಾಟ್ರಸ್ ಮುಂಭಾಗ ಅಪಘಾತ (Road Accident) ಸಂಭವಿಸಿದೆ.

ಶೇಕ್ ಶಹಬಾಶ್ (17) ಮೃತ ದುರ್ದೈವಿ. ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ಅಪಘಾತ ನಡೆದಿದೆ. ವೆಂಕಟೇಶ್ವರ ಸರ್ಕಲ್‌ನಿಂದ ರಾಘವೇಂದ್ರ ಭವನ್ ಸರ್ಕಲ್ ಮಾರ್ಗವಾಗಿ ಹೋಗುವಾಗ ಬಸ್‌ ವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಶೇಕ್‌ ಶಹಬಾಶ್‌ ದೇಹವು ಛಿದ್ರ ಛಿದ್ರವಾಗಿದೆ.

ಕಲಬುರಗಿ ಮೂಲದ ಶೇಕ್ ಮೆಹಬೂಬ್, ಶಾಹಿನಾ ದಂಪತಿಯ ಪುತ್ರ ಶೇಕ್‌ ಶಹಬಾಶ್‌, ಕಳೆದ 15 ವರ್ಷಗಳಿಂದ ಆನೇಕಲ್‌ನಲ್ಲಿ ನೆಲೆಸಿದ್ದರು. ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶೇಕ್ ಶಹಬಾಶ್, ಕೊನೆಯ ದಿನದ ಪರೀಕ್ಷೆ ಬರೆಯಬೇಕಿತ್ತು. ಆದರೆ ವಿಧಿಯಾಟ ಖಾಸಗಿ ಕಂಪನಿಯ ಬಸ್ ಡಿಕ್ಕಿ ಹೊಡೆದ ಕಾರಣಕ್ಕೆ ಸ್ಥಳದಲ್ಲೇ ಅಸುನೀಗಿದ್ದ. ಇಂದು ಬೆಳಗ್ಗೆ ಹಾಲು ತರಲು ಮನೆಯಿಂದ ಸ್ಕೂಟರ್‌ನಲ್ಲಿ ಹೊರಟಿದ್ದ. ಈ ವೇಳೆ ಪೊಲೀಸ್ ಕ್ವಾಟ್ರಸ್ ಮುಂಭಾಗ ಸ್ಟ್ರೈಡ್ಸ್ ಕಂಪನಿಯ ಬಸ್ ಡಿಕ್ಕಿ ಹೊಡೆದಿತ್ತು. ರಸ್ತೆಗೆ ಬಿದ್ದ ಶೇಕ್ ಶಹಬಾಶ್ ತಲೆಯ ಮೇಲೆ ಹರಿದಿತ್ತು. ಅಪಘಾತದ ನಂತರ ಪರಾರಿಯಾಗಿದ್ದ ಚಾಲಕನನ್ನು ಬಸ್‌ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಿರ್ಜಾ ರಸ್ತೆಯಲ್ಲಿ ಒಂದೇ ವಾರದಲ್ಲಿ ಎರಡು ಅಪಘಾತ ಸಂಭವಿಸಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಿದ್ದರು. ವಾಹನ ಚಾಲಕರ ಅತಿವೇಗದ ಚಾಲನೆಗೆ ಅಮಾಯಕ ಬೈಕ್ ಸವಾರರು ಬಲಿಯಾಗುತ್ತಿದ್ದಾರೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Road Rage: ನಿಲ್ಲದ ರೋಡ್‌ ರೇಜ್;‌ ಬೆಂಗಳೂರಿನ ಬೀದಿಗಳಲ್ಲಿ ಪುಂಡರ ಮತ್ತೊಂದು ಅಟ್ಟಹಾಸ!

ಕಾಲಭೈರವನಂತೆ ಎರಗಿದ ಕೋಲೆಬಸವ! ಭಯಾನಕ ಆ್ಯಕ್ಸಿಡೆಂಟ್ ವಿಡಿಯೋ

ಬೆಂಗಳೂರು: ಬೆಂಗಳೂರಿನಲ್ಲಿ ಒಂದು ಭಯಾನಕ ಆ್ಯಕ್ಸಿಡೆಂಟ್‌ (Road Accident) ನಡೆದಿದೆ. ಇದಕ್ಕೆ ಕಾರಣವಾದದ್ದು ಬಸ್ಸೂ ಅಲ್ಲ, ಲಾರಿಯೂ ಅಲ್ಲ. ಅಪಘಾತದಲ್ಲಿ ಯಾರೂ ಸತ್ತಿಲ್ಲವಾದರೂ, ಪವಾಡಸದೃಶವಾಗಿ ಬೈಕ್‌ ಸವಾರನೊಬ್ಬ (bike rider) ಬದುಕುಳಿದಿದ್ದಾನೆ. ಅಪಘಾತಕ್ಕೆ ಕಾರಣವಾದದ್ದು ಒಂದು ಕೋಲೆಬಸವ! ಅಪಘಾತದ ವಿಡಿಯೋ (Viral video) ಲಭ್ಯವಾಗಿದೆ.

ರಸ್ತೆಯ ಬದಿಯಲ್ಲಿ ಮಾಲಕಿಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಕೋಲೆಬಸವ, ಇದ್ದಕ್ಕಿದ್ದಂತೆ, ಯಾವುದೇ ಪ್ರಚೋದನೆಯಿಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌ ಸವಾರನಿಗೆ ಎಗರಿ ಗುದ್ದಿದೆ. ಬೈಕ್‌ ಪಲ್ಟಿ ಹೊಡೆದಿದ್ದು, ಸವಾರ ರಸ್ತೆಗೆ ಬಿದ್ದಿದ್ದಾರೆ. ಪಕ್ಕದಲ್ಲಿ ಕ್ಯಾಂಟರ್‌ ಹಾದುಹೋಗುತ್ತಿದ್ದು, ಇನ್ನೇನು ಸವಾರನ ಮೇಲೆ ಹರಿದುಹೋಗಲಿದೆ ಎಂಬ ಕ್ಷಣದಲ್ಲಿ ಕ್ಯಾಂಟರ್‌ ಚಾಲಕ ಥಟ್ಟನೆ ಬ್ರೇಕ್‌ ಹಾಕಿದ್ದಾನೆ. ಬೈಕ್‌ ಸವಾರ ಪವಾಡಸದೃಶವಾಗಿ ಬದುಕುಳಿದಿದ್ದಾನೆ.

ಮಹಾಲಕ್ಷ್ಮಿ ಲೇಔಟ್ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ಘಟನೆ ನಡೆದಿದೆ. ಕಳೆದ ವಾರ ನಡೆದಿರುವ ಈ ಘಟನೆಯ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ವಿಡಿಯೋ ನೋಡಿದ ಅನೇಕ ಮಂದಿ, “ಇದು ಪವಾಡವೇ ಸರಿ” ಎಂದು ಕಮೆಂಟ್‌ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version