Site icon Vistara News

Road Accident : ಹಿಟ್‌ ಆ್ಯಂಡ್‌ ರನ್‌ಗೆ ಯುವತಿ ಸ್ಪಾಟ್‌ ಡೆತ್‌;‌ ಆರೋಪಿಯ ಬೆನ್ನತ್ತಿದ ಪೊಲೀಸರು

Road Accident

ಕೋಲಾರ: ಅಪರಿಚಿತ ವಾಹನ ಡಿಕ್ಕಿಯಾಗಿ (Road Accident) ವಿಸ್ಟ್ರಾನ್ ಕಂಪನಿಯ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ. ಕೋಲಾರ ಹೊರವಲಯದ ಪವನ್ ಕಾಲೇಜು ಬಳಿ ಘಟನೆ ನಡೆದಿದೆ. ರೂಪಾ (22) ಮೃತ ದುರ್ದೈವಿ.

ಶ್ರೀನಿವಾಸಪುರ ಮೂಲದ‌ ರೂಪಾ ರಾತ್ರಿ ಪಾಳಿ ಕೆಲಸಕ್ಕೆ ತೆರಳುತ್ತಿದ್ದಳು. ಹೆದ್ದಾರಿ ದಾಟುವಾಗ ಅಪರಿಚಿತ ವಾಹನವೊಂದು ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ರೂಪಾಳಿಗೆ ತೀವ್ರ ರಕ್ತಸ್ರಾವಗೊಂಡು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ರೂಪಾ ಮೃತಪಟ್ಟಿದ್ದಾರೆ.

ಇನ್ನೂ ಅಪಘಾತದ ನಂತರ ಚಾಲಕ ಪರಾರಿ ಆಗಿದ್ದಾನೆ. ಸ್ಥಳಕ್ಕೆ ಕೋಲಾರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಪಘಾತ ಮಾಡಿ ಪರಾರಿ ಆಗಿರುವ ಸವಾರನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಬೈಕ್‌ ಹಾಗೂ ಟಿಟಿ ಡಿಕ್ಕಿ

ಬೈಕ್‌ ಹಾಗೂ ಟಿಟಿ ನಡುವೆ ಅಪಘಾತ ಸಂಭವಿಸಿದ್ದು, ಟೆಂಪೊ ಟ್ರಾವೆಲರ್ ಪಲ್ಟಿಯಾಗಿದೆ. ಬೆಂಗಳೂರಿನ ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಬಳಿ ಘಟನೆ ನಡೆದಿದೆ.

ಟಿಟಿ ವಾಹನ ಚಾಲಕ ಹಾಗೂ ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಡ್ಡ ಬಂದ ದ್ವಿಚಕ್ರ ವಾಹನ ತಪ್ಪಿಸಲು ಹೋಗಿ ಟಿಟಿ ವಾಹನ ಪಲ್ಟಿ ಹೊಡೆದಿದೆ. ದೊಡ್ಡಬಳ್ಳಾಪುರಕ್ಕೆ ಕಾರ್ಮಿಕರನ್ನು ಡ್ರಾಪ್ ಮಾಡಿ ಟೆಂಪೋ ಟ್ರಾವೆಲರ್‌ನಲ್ಲಿ ತೆರಳುತ್ತಿತ್ತು. ಡಿವೈಡರ್ ಬಳಿ ಏಕಾಏಕಿ ಬೈಕ್ ಅಡ್ಡ ಬಂದ ಪರಿಣಾಮ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Assault Case: 3 ವರ್ಷದ ಮಗಳ ಗುಪ್ತಾಂಗ ಕಚ್ಚಿ ಮಲತಂದೆಯ ಕ್ರೌರ್ಯ; ಸಿಗರೇಟ್‌ನಿಂದ ಸುಟ್ಟು ವಿಕೃತಿ

ಬಿಸಿ ಬಿಸಿ ಸಾಂಬಾರ್‌ನಲ್ಲಿ ಸಿಕ್ತು ಸತ್ತ ಇಲಿ! ಹೊಟೇಲ್‌ ಫುಡ್‌ ತಿನ್ನೋ ಮುನ್ನ ಈ ವಿಡಿಯೋ ನೋಡಿ

ಅಹಮಾದಾಬಾದ್‌: ಕೆಲವು ದಿನಗಳ ಹಿಂದೆ ರೈಲಿನಲ್ಲಿ ನೀಡುವ ಊಟದಲ್ಲಿ ಜೀವಂತ ಜಿರಳೆ ಪತ್ತೆಯಾದ ಘಟನೆ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ಗುಜರಾತ್‌(Gujarat)ನಲ್ಲಿ ವರದಿಯಾಗಿದೆ. ಸದಾ ಹೊಟೇಲ್‌ ಆಹಾರ ಇಷ್ಟ ಪಡುವವರೂ ಈ ಸುದ್ದಿ ನೋಡಿ ಶಾಕ್‌ ಆಗೋದು ಗ್ಯಾರಂಟಿ. ರೆಸ್ಟೋರೆಂಟ್‌ವೊಂದರ ಸಾಂಬಾರಿನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣ(Social Media)ದಲ್ಲಿ ಫುಲ್‌ ವೈರಲ್‌(Viral Video) ಆಗಿದೆ. ಈ ಆಘಾತಕಾರಿ ವಿಡಿಯೋ ನೋಡಿದ ನೆಟ್ಟಿಗರು ಹೌಹಾರಿದ್ದಾರೆ.

ವಿಡಿಯೋದಲ್ಲೇನಿದೆ?

ಅಹಮದಾಬಾದ್‌ನ ನಿಕೋಲ್‌ ಪ್ರದೇಶದಲ್ಲಿರುವ ದೇವಿ ದೋಸಾ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಗ್ರಾಹಕರೊಬ್ಬರು ಫುಡ್‌ ಆರ್ಡರ್‌ ಮಾಡಿದ್ದರು. ಟೇಬಲ್‌ಗೆ ಫುಡ್‌ ಬರುತ್ತಿದ್ದಂತೆ ಬಹಳ ಖುಷಿಯಿಂದ ತೆರೆದು ನೋಡಿದರೆ ಸಾಂಬಾರ್‌ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದೆ. ಇದನ್ನು ಕಂಡು ಶಾಕ್‌ ಆದ ಗ್ರಾಹಕರು ತಕ್ಷಣ ಗಲಾಟೆ ಮಾಡಿದ್ದಾರೆ. ಆದರೆ ಹೊಟೇಲ್‌ ಸಿಬ್ಬಂದಿ ಇದಕ್ಕೆ ಕ್ಯಾರೇ ಎನ್ನದಾಗ ಗ್ರಾಹಕ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಅಹ್ಮದಾಬಾದ್‌ ಮಹಾನಗರ ಪಾಲಿಕೆ(AMC) ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅದೂ ಅಲ್ಲದೇ ಈ ವಿಚಾರ ರಾಜ್ಯ ಆರೋಗ್ಯ ಇಲಾಖೆ ರೆಸ್ಟೋರೆಂಟ್‌ ಮಾಲಿಕ ಅಲ್ಪೇಶ್‌ ಕೆವಾಡಿಯಾ ಅವರಿಗೆ ನೊಟೀಸ್‌ ಜಾರಿಗೊಳಿಸಿದೆ. ಅದೂ ಅಲ್ಲದೇ ಅಧಿಕಾರಿಗಳು ರೆಸ್ಟೋರೆಂಟ್‌ಗೆ ಬೀಗ ಜಡಿದಿದ್ದಾರೆ. ಇನ್ನು ವಿಡಿಯೋ ನೋಡಿದ ಅನೇಕ ನೆಟ್ಟಿಗರು ವಿವಿಧ ರೀತಿಯಲ್ಲಿ ರಿಯಾಕ್ಟ್‌ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾಗಿದ್ದ ಊಟದಲ್ಲಿ ಜೀವಂತ ಜಿರಳೆ ಪತ್ತೆಯಾಗಿದೆ. ಈ ವಿಡಿಯೋವನ್ನು ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಹಳ ವೈರಲ್‌ ಆಗಿತ್ತು. ರೈಲು ಪ್ರಯಾಣಿಕರೊಬ್ಬರು ರೈಲಿನಲ್ಲಿ ಊಟ ಆರ್ಡರ್‌ ಮಾಡಿದ್ದರು. ಅನ್ನ, ಸಾಂಬಾರ್‌, ದಾಲ್‌ ಹಾಗೂ ಎರಡು ವಿಧದ ಪಲ್ಯವನ್ನು ಊಟದಲ್ಲಿ ಬಯಸಿದ್ದರು. ಊಟ ಬರುತ್ತಿದ್ದಂತೆ ಬಹಳ ಉತ್ಸಾಹದಿಂದ ಊಟದ ಬಾಕ್ಸ್‌ ತೆರೆಯುತ್ತಿದ್ದಂತೆ ಅದರಲ್ಲಿದ್ದ ಗುಲಾಬ್‌ ಜಾಮೂನಿನಲ್ಲಿ ಜೀವಂತ ಜಿರಳೆ ಇರುವುದನ್ನು ಕಂಡು ಪ್ರಯಾಣಿಕರು ಹೌಹಾರಿದ್ದಾರೆ.

ತಕ್ಷಣ ಕೋಪಗೊಂಡ ಪ್ರಯಾಣಿಕ ಆ ಊಟದ ವಿಡಿಯೋ ಮಾಡಿ ರೆಡ್ಡಿಟ್‌ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ವಿಡಿಯೋ ಶೇರ್‌ ಆಗುತ್ತಿದ್ದಂತೆ ರೈಲ್ವೆ ಸಿಬ್ಬಂದಿಯ ಭಾರೀ ನಿರ್ಲಕ್ಷ್ಯಕ್ಕೆ ನೆಟ್ಟಿಗರು ಅಕ್ರೋಸ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕ ಆರೋಗ್ಯದ ಜೊತೆ ಆಟವಾಡುತ್ತಿದ್ದೀರಾ ಎಂದು ಕಿಡಿ ಕಾರಿದ್ದಾರೆ. ಇನ್ನು ಕೆಲವರು ಇದೊಂದು ದುಬಾರಿ ಮಾಂಸಾಹಾರಿ ಊಟ ಎಂದು ವ್ಯಂಗ್ಯವಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version