ಬೆಂಗಳೂರು: ಹಿಟ್ ಆ್ಯಂಡ್ ರನ್‌ಗೆ (Hit And Run Case) ಯುವಕನೊರ್ವ ಬಲಿಯಾಗಿದ್ದಾನೆ. ಬೆಂಗಳೂರಿನ ಹೈ ಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ (Road Accident) ನಡೆದಿದೆ. ಕನ್ನಿಂಗ್ ಹಾಮ್ ರಸ್ತೆಯಲ್ಲಿ ನಿನ್ನೆ ಸೋಮವಾರ ರಾತ್ರಿ 10.30ಕ್ಕೆ ಅಪಘಾತ ನಡೆದಿದೆ. ಆಯುಷ್ ಅಪ್ಪಯ್ಯ (21) ಮೃತ ದುರ್ದೈವಿ.
ಆಯುಷ್ ಕಲ್ಪನಾ ಜಂಕ್ಷನ್ ಕಡೆಯಿಂದ ಚಂದ್ರಿಕಾ ಜಂಕ್ಷನ್ ಕಡೆಗೆ ಡಿಯೋ ಬೈಕ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ವಕ್ಫ್ ಬೋರ್ಡ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಚಾಲಕ ವಾಹನ ಸಮೇತ ಎಸ್ಕೇಪ್ ಆಗಿದ್ದಾನೆ. ಘಟನೆಯಲ್ಲಿ ಆಯುಷ್ ತಲೆಗೆ ಗಂಭೀರ ಪೆಟ್ಟಾಗಿತ್ತು. ಈ ವೇಳೆ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವಾಗ ಆಯುಷ್ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಅಪಘಾತ ಮಾಡಿ ಎಸ್ಕೇಪ್ ಆಗಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: Alur Nagappa: ‘ಸಾವಿರ ಹಾಡುಗಳ ಸರದಾರ’ ಖ್ಯಾತಿಯ ಜಾನಪದ ಹಾಡುಗಾರ, ಸಾಹಿತಿ ಆಲೂರು ನಾಗಪ್ಪ ಇನ್ನಿಲ್ಲ
ಕುಸಿದು ಬಿದ್ದ ಬೆಂಗಳೂರು ಫುಟ್‌ಬಾಲ್ ಸ್ಟೇಡಿಯಂ ಸ್ಟ್ಯಾಂಡ್
ಸಿವಿ ರಾಮನ್ ನಗರ ಹಾಗೂ ಶಾಂತಿನಗರ ಮಧ್ಯೆ ಸಿಎಂ ಕಪ್ ನಡೆಯುವ ವೇಳೆ ಬೆಂಗಳೂರು ಫುಟ್‌ಬಾಲ್ ಸ್ಟೇಡಿಯಂ ಸ್ಟ್ಯಾಂಡ್ ಕುಸಿದು ಬಿದ್ದಿದೆ. ಫುಟ್‌ಬಾಲ್ ಪಂದ್ಯ ವೀಕ್ಷಣೆ ಮಾಡುತ್ತಿದ್ದಾಗ ಏಕಾಏಕಿ ಅಭಿಮಾನಿಗಳು ನಿಂತಿದ್ದ ಆಡಿಯನ್ಸ್ ಸ್ಟ್ಯಾಂಡ್ ಕುಸಿದಿದೆ. ಪರಿಣಾಮ ಹಲವರಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಅಶೋಕ್ ನಗರದಲ್ಲಿರುವ ಫುಟ್‌ಬಾಲ್ ಮೈದಾನದಲ್ಲಿ ಘಟನೆ ನಡೆದಿದೆ. ರಾಜ್ಯ ಸರ್ಕಾರ ಅಧೀನದಲ್ಲಿರುವ ಮೈದಾನ ಇದಾಗಿದ್ದು, ಮೊನ್ನೆ ಪಂದ್ಯಾವಳಿ ನಡೆಯುವ ವೇಳೆ ಕುಸಿದಿದೆ. ಇನ್ನೂ ಸರ್ಕಾರದ ನ್ಯೂನತೆ ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಒಬ್ಬರಿಗೊಬ್ಬರು ಬಡಿದಾಡಿಕೊಂಡ ಕಂಡಕ್ಟರ್-ಪ್ಯಾಸೇಂಜರ್
ಬಿಎಂಟಿಸಿ ಕಂಡಕ್ಟರ್‌ನಿಂದ ಪ್ರಯಾಣಿಕನ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಟಿಕೇಟ್ ಕೊಡುವ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಕಂಡಕ್ಟರ್ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಘಟನೆ ನಡೆದಿದೆ. ಚಂದಾಪುರ ಮಾರ್ಗವಾಗಿ ಹೋಗುತ್ತಿದ್ದ ಬಸ್‌ನಲ್ಲಿ ಚಿಲ್ಲರೆ ವಿಚಾರಕ್ಕಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಪ್ರಯಾಣಿಕನಿಗೆ ಬಸ್ ಕಂಡಕ್ಟರ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಸದ್ಯ ಪ್ರಯಾಣಿಕ ವಿಡಿಯೋ ಪೋಸ್ಟ್ ಮಾಡಿ ದೂರು ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ