Site icon Vistara News

Accident compensation : ಅಪಘಾತದಿಂದ ಕಾಲು ಕಳೆದುಕೊಂಡು, ನಿರುದ್ಯೋಗಿಯಾದ ವ್ಯಕ್ತಿಗೆ 1.5 ಕೋಟಿ ರೂ. ಪರಿಹಾರ

cash

ಮುಂಬಯಿ: ಮುಂಬಯಿನಲ್ಲಿ ರಸ್ತೆ ಅಪಘಾತವೊಂದರಲ್ಲಿ ಕಾಲನ್ನು ಕಳೆದುಕೊಂಡು ನಿರುದ್ಯೋಗಿಯಾಗಿದ್ದ ಮುಂಬಯಿನ 37 ವರ್ಷ ವಯಸ್ಸಿನ ಯುವಕನಿಗೆ 1.58 ಕೋಟಿ ರೂ. ಪರಿಹಾರವನ್ನು ಬಡ್ಡಿ ಸಹಿತ ನೀಡಬೇಕು ಎಂದು (Accident compensation) ಮೋಟಾರ್‌ ವಾಹನ ಅಪಘಾತ ಕ್ಲೇಮ್ ಕುರಿತ ನ್ಯಾಯಾಧೀಕರಣ (motor accident claims tribunal ) ಆದೇಶಿಸಿದೆ.

ಕಂಪನಿಯೊಂದರ ಎಂಜಿನಿಯರಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪರಾಗ್‌ ಕಾಡು ಎಂಬಾತ ಅಪಘಾತದಲ್ಲಿ ಎಡಗಾಲನ್ನು ಕಳೆದುಕೊಂಡಿದ್ದ. 2018ರಲ್ಲಿ ಟ್ರಕ್‌ ಒಂದು ಯುವಕನ ಸ್ಕೂಟಿ ಮೇಲೆ ಹರಿದು ಅಪಘಾತ ಸಂಭವಿಸಿತ್ತು. ಬಳಿಕ ಕಾಲನ್ನು ಕತ್ತರಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಆಗ ಪರಾಗ್‌ ಮಾಸಿಕ 30,000 ರೂ. ವೇತನ ಪಡೆಯುತ್ತಿದ್ದರು.

ಟ್ರಕ್‌ ಚಾಲಕರ ನಿರ್ಲಕ್ಷ್ಯದಿಂದ ಅಪಘಾತ ಉಂಟಾಗಿತ್ತು. ಟ್ರಕ್‌ ಮಾಲೀಕರು (ಎಬಿಸಿ ಲಾಜಿಸ್ಟಿಕ್ಸ್‌, ದಿ ನ್ಯೂ ಇಂಡಿಯಾ ಅಶ್ಶೂರೆನ್ಸ್‌ ಕಂಪನಿ ) ಪರಿಹಾರ ಕೊಡಬೇಕು ಎಂದು ನ್ಯಾಯಾಧೀಕರಣ ಆದೇಶಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 10 ಲಕ್ಷ ರೂ. ಖರ್ಚಾಗಿತ್ತು.

ಇದನ್ನೂ ಓದಿ :Road Accident: ಶಿರಸಿಯಲ್ಲಿ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಪ್ರಾಣಬಿಟ್ಟ ಚಾಲಕ

ವಿಮೆ ಕಂಪನಿಯು ವಾಹನದ ಚಾಲಕ ಸರಿಯಾದ ಡ್ರೈವಿಂಗ್‌ ಲೈಸೆನ್ಸ್‌ ಹೊಂದಿರದಿದ್ದ ಕಾರಣ ವಿಮೆ ಪರಿಹಾರ ನೀಡಲು ಅಸಾಧ್ಯ ಎಂದಿತ್ತು. ಆದರೆ ವಿಮೆ ಕಂಪನಿಯ ವಾದವನ್ನು ತಳ್ಳಿ ಹಾಕಿರುವ ನ್ಯಾಯಾಧೀಕರಣವು ಪರಿಹಾರ ನೀಡಬೇಕು ಎಂದು ಆದೇಶಿಸಿದೆ.

ಯುವಕ ಪರಾಗ್‌ ಅವರ ಚಿಕಿತ್ಸೆಗೆ ತಗಲಿರುವ ವೆಚ್ಚ, ಆತನ ವಯಸ್ಸು, ನಿರುದ್ಯೋಗ ಪರಿಸ್ಥಿತಿಯನ್ನು ನ್ಯಾಯಾಧೀಕರಣ ಪರಿಗಣಿಸಿದೆ. ಅಂಗ ವೈಕಲ್ಯದ ಜತೆಗೆ ಎಂದಿನಂತೆ ದುಡಿಯುವ ಸಾಮರ್ಥ್ಯವನ್ನೂ ಕಳೆದುಕೊಂಡಿರುವುದರಿಂದ 1.5 ಕೋಟಿ ರೂ. ಪರಿಹಾರವನ್ನು ನ್ಯಾಯಾಧೀಕರಣ ಸೂಚಿಸಿದೆ.

Exit mobile version