Site icon Vistara News

Safe Bangalore : ಬೆಂಗಳೂರಿಗರೇ ಆಪತ್ತು ಬಂತಾ? ಈ ನಂಬರ್‌ಗೆ ಕರೆ ಮಾಡಿ; 7 ನಿಮಿಷಕ್ಕೆ ಪೊಲೀಸರು ಹಾಜರ್!

CM Siddaramaiah in Bangalore Safe City Command Centre

ಬೆಂಗಳೂರು: ಬೆಂಗಳೂರು ಮಹಾನಗರವಾಗಿ ಬೆಳೆದಿದೆ. ಅದೇ ರೀತಿಯಾಗಿ ಕ್ರೈಂ ರೇಟ್‌ (Crime rate in Bengaluru) ಸಹ ಹೆಚ್ಚಳವಾಗುತ್ತಲಿದೆ. ಎಲ್ಲ ಕಡೆ ಪೊಲೀಸರು ಇರಲು ಸಾಧ್ಯವಿಲ್ಲ. ಇಂತಹ ವೇಳೆ ಕೆಲವೊಂದು ಕುಕೃತ್ಯಗಳು ನಡೆದು ಹೋಗುತ್ತವೆ. ಅದರಲ್ಲೂ ಬೆಂಗಳೂರಿನಲ್ಲಿ ಸರಗಳ್ಳತನ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಕೊಲೆಗಳು, ಕಾನೂನು ಬಾಹಿರ ಚಟುವಟಿಕೆ (Illegal activity) ಹೆಚ್ಚಾಗಿವೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು, ಬೆಂಗಳೂರಿನಲ್ಲಿ ಸುರಕ್ಷೆ (Safe Bangalore ) ಕಲ್ಪಿಸಲು ನಿರ್ಭಯಾ ನಿಧಿಯಡಿ (Nirbhaya Fund) ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್ (Bangalore Safe City Command Centre) ಅನ್ನು ಬೆಂಗಳೂರಿನಲ್ಲಿ ತೆರೆಯಲಾಗಿದೆ. ಇದರ ವಿಶೇಷವೆಂದರೆ ಇಂತಹ ಆಪತ್ತು ಎದುರಾದಾಗ ಸಂತ್ರಸ್ತರು ಕಮಾಂಡ್ ಸೆಂಟರ್ ಸಹಾಯವಾಣಿಗೆ (Helpline Number) ಕರೆ ಮಾಡಿದರೆ ಕೇವಲ ಏಳು ನಿಮಿಷದಲ್ಲಿ ಪೊಲೀಸರು ಹಾಜರಿರುತ್ತಾರೆ. ಇದರಿಂದ ಅಪರಾಧ ಚಟುವಟಿಕೆಯನ್ನು ತಗ್ಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಬೆಂಗಳೂರು ಸೇರಿದಂತೆ ದೇಶದ 8 ಕಡೆಗಳಲ್ಲಿ ಇಂತಹ ಕೇಂದ್ರವನ್ನು ತೆರೆಯಲಾಗಿದೆ. ದೇಶದ 8 ಸ್ಥಳಗಳಲ್ಲಿ ಈ ಕೇಂದ್ರಕ್ಕೆ ಮಂಜೂರಾತಿ ನೀಡಿದ್ದರೂ, ಬೆಂಗಳೂರಿನಲ್ಲಿ ಮಾತ್ರ ಸೇಫ್ ಸಿಟಿ ಕಮಾಂಡ್ ಕೇಂದ್ರ ಕಟ್ಟಡವನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗಿದೆ. ಈ ಕಟ್ಟಡಕ್ಕೆ ಸುಮಾರು 12 ಕೋಟಿ ರೂ. ವೆಚ್ಚವಾಗಿದೆ. ನಿರ್ಭಯಾ ನಿಧಿಯಡಿ ಕಟ್ಟಡ ನಿರ್ಮಾಣವಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಇಲ್ಲಿದೆ!

ಸೇಫ್ ಸಿಟಿ ಯೋಜನೆಯಡಿ ನಗರದಲ್ಲಿ ತಲೆ ಎತ್ತಿರುವ ಈ ಅತ್ಯಾಧುನಿಕ ಕಮಾಂಡ್ ಸೆಂಟರ್​ನಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಕೃತಕ ಬುದ್ಧಿಮತ್ತೆ (ಎಐ) ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಇದರಿಂದ ಕೆಲವು ಅನುಮಾನಾಸ್ಪದ ಘಟನೆಗಳು ತಕ್ಷಣ ಅರಿವಿಗೆ ಬರುತ್ತದೆ. ಇದರಿಂದ ಸಹ ಕೆಲವು ಅಪರಾಧ ಕೃತ್ಯಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎನ್ನಲಾಗಿದೆ. ನೂತನ ಕಮಾಂಡ್ ಸೆಂಟರ್​ನಲ್ಲಿ ಡಯಲ್ -112 ಕಾಲ್ ಸೆಂಟರ್, ಮಹಿಳಾ‌‌ ಸೇಫ್ಟಿ ಲ್ಯಾಂಡ್ ಕಮಾಂಡ್ ಸೆಂಟರ್​ನಲ್ಲಿ ವಿವಿಧ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.

ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್‌ನ ತಂತ್ರಜ್ಞಾನದ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದರು.

112ಕ್ಕೆ ಕರೆ ಮಾಡಿದರೆ ಲೊಕೇಷನ್ ಪತ್ತೆ

ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆಯಾದ 112ಕ್ಕೆ ಆಪತ್ತಿನಲ್ಲಿ ಸಿಲುಕಿರುವವರು ಕರೆ ಮಾಡಿದರೆ ತಕ್ಷಣ ಆ ವ್ಯಕ್ತಿ ಇರುವ ಸ್ಥಳದ ಲೊಕೇಷನ್ ಲಭ್ಯವಾಗಲಿದೆ.‌ ಆಗ ಲಭ್ಯವಾಗುವ ಲೊಕೇಷನ್‌ ಸಹಾಯದಿಂದ ಕ್ಷಣಾರ್ಧದಲ್ಲೇ ಅಂದರೆ ಕರೆ ಮಾಡಿದ ಏಳೇ ನಿಮಿಷದಲ್ಲಿ ಪೊಲೀಸರ ನೆರವು ಸಿಗಲಿದೆ. ಅಂದರೆ ಯಾವ ಸ್ಥಳದಲ್ಲಿ ಸಂತ್ರಸ್ತರು ಇರುತ್ತಾರೋ ಅದರ ಸಮೀಪ ಇರುವ ಪೊಲೀಸರಿಗೆ ಮಾಹಿತಿ ಹೋಗುತ್ತದೆ. ಕೂಡಲೇ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಲಿದ್ದಾರೆ.

ಈಗಾಗಲೇ ಠಾಣಾ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮರಾಗಳ‌‌ನ್ನು ಅಳವಡಿಸಲಾಗಿದೆ. ಇದರ ನೇರ ಸಂಪರ್ಕ ಕಮಾಂಡ್ ಸೆಂಟರ್​ನಲ್ಲಿ‌ ಇರಲಿದೆ.‌ ಅಲ್ಲದೆ, ಕಾನೂನು ಹಾಗೂ ಸುವ್ಯವಸ್ಥೆಗೆ ಪೊಲೀಸ್ ಠಾಣೆಗಳು, ಎಂಟು ಡಿಸಿಪಿ ಕಚೇರಿಗಳು ಹಾಗೂ ಎಂಟು ಹೆಚ್ಚುವರಿ ವೀಕ್ಷಣಾ ಕೇಂದ್ರಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ಸೆರೆಯಾಗುವ ವಿಡಿಯೊ, ಪೋಟೊ ಒಂದು ತಿಂಗಳಿನವರೆಗೂ ಸ್ಟೋರ್​ ಆಗಿರಲಿದೆ. ಅಪರಾಧ ಕೃತ್ಯಗಳು ನಡೆದಾಗ ಸಹ ಇವುಗಳ ಆಧಾರದ ಮೇಲೆ ಅಪರಾಧಿಗಳನ್ನು ಸೆರೆ ಹಿಡಿಯಲು ಅನುಕೂಲವಾಗುತ್ತದೆ.

ಯೋಜನೆಗೆ 661.5 ಕೋಟಿ ರೂ. ಖರ್ಚು

ನಿರ್ಭಯ ನಿಧಿ ಅಡಿ ಬೆಂಗಳರು ನಗರ ಸೇಫ್ ಸಿಟಿ ಕಮಾಂಡ್ ಸೆಂಟರ್ ಕಟ್ಟಡವನ್ನು ಇಂದು ಉದ್ಘಾಟಿಸಲಾಗಿದೆ. ಈ ಯೋಜನೆಗೆ 661.5 ಕೋಟಿ ರೂ. ಖರ್ಚಾಗಿದೆ. ಕೇಂದ್ರ ಸರ್ಕಾರದ ಶೇ.60 ಹಾಗೂ ರಾಜ್ಯ ಸರ್ಕಾರದ ಶೇ. 40ರಷ್ಟು ಅನುದಾನ ನೀಡಲಾಗಿದೆ. ಬೆಂಗಳೂರು ನಗರದ ಜನರಿಗೆ ಸುರಕ್ಷತೆಯನ್ನು ಈ ಕೇಂದ್ರ ಒದಗಿಸಲಿದೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಮಹಿಳೆಯರು, ಅಂಗವಿಕಲರು, ವಯೋವೃದ್ಧರಿಗೆ ಯಾವುದೇ ತೊಂದರೆ ಸಂಭವಿಸಿದರೂ ಈ ಕೇಂದ್ರ ಅವರಿಗೆ ತ್ವರಿತ ಸಹಾಯ ಒದಗಿಸಲಿದೆ. ಈ ಕೇಂದ್ರದ ಸಹಕಾರದಿಂದ ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಪೊಲೀಸರು 7 ನಿಮಿಷದೊಳಗೆ ಆಗಮಿಸಿ, ತೊಂದರೆಯಲ್ಲಿರುವ ಜನರಿಗೆ ನೆರವು ನೀಡಲಿದೆ. ಬೆಂಗಳೂರು ಸೇರಿದಂತೆ ದೇಶದ 8 ಕಡೆಗಳಲ್ಲಿ ಇಂತಹ ಕೇಂದ್ರವನ್ನು ತೆರೆಯಲಾಗಿದೆ. ದೇಶದ 8 ಸ್ಥಳಗಳಲ್ಲಿ ಈ ಕೇಂದ್ರಕ್ಕೆ ಮಂಜೂರಾತಿ ನೀಡಿದ್ದರೂ, ಬೆಂಗಳೂರಿನಲ್ಲಿ ಮಾತ್ರ ಸೇಫ್ ಸಿಟಿ ಕಮಾಂಡ್ ಕೇಂದ್ರ ಕಟ್ಟಡವನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗಿದೆ. ಈ ಕಟ್ಟಡಕ್ಕೆ ಸುಮಾರು 12 ಕೋಟಿ ರೂ. ವೆಚ್ಚವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್ ಅನ್ನು ಅವರು ಶುಕ್ರವಾರ ಉದ್ಘಾಟಿಸಿದರು.

ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಇದನ್ನೂ ಓದಿ: HSRP Number Plate : ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹಾಕಿಸಿಲ್ವಾ? ಕೂಡಲೇ ಈ ಕೆಲಸ ಮಾಡಿ!

ಕ್ರೈಂ ಮ್ಯಾಪಿಂಗ್‌ಗೆ ಸಹಕಾರಿ

ಸುಲಿಗೆ, ಕಳ್ಳತನ ಹಾಗೂ ಮಹಿಳೆ ಮೇಲಾಗುವ ಲೈಂಗಿಕ ದೌರ್ಜನ್ಯ ಸೇರಿ ವಿವಿಧ ಅಪರಾಧಗಳು ಪದೇ‌ ಪದೆ ಒಂದು ಕಡೆ ನಡೆಯುವುದು ವರದಿಯಾದರೆ ತಂತ್ರಜ್ಞಾನ ನೆರವಿನಿಂದ ಸುಲಭವಾಗಿ ಕ್ರೈಂ ಮ್ಯಾಪಿಂಗ್ ಮಾಡಬಹುದಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಸೋಷಿಯಲ್ ಡೆಮೊಗ್ರಾಫಿಕ್ ನೆರವಿನಿಂದ ಅಪರಾಧ ನಡೆಯುವ ಸ್ಥಳಗಳ ಬಗ್ಗೆ ಮ್ಯಾಪಿಂಗ್ ಮಾಡಲು ಎಐ ಗುರುತು ಮಾಡಲಿದೆ.

Exit mobile version