Site icon Vistara News

ದೆಹಲಿ ಡಾಬಾ ಫ್ರಿಡ್ಜ್‌ನಲ್ಲಿ ಶವ ಪತ್ತೆ, ನಿಕ್ಕಿ ಜತೆ 2020ರಲ್ಲೇ ಮದುವೆ, 2ನೇ ಮದುವೆಗಾಗಿ ಹೆಂಡತಿಯನ್ನೇ ಕೊಂದ ಸಾಹಿಲ್

Sahil and Nikki had temple wedding in 2020, cops recover marriage certificate

ನಿಕ್ಕಿ ಯಾದವ್ ಹಾಗೂ ಸಾಹಿಲ್‌ ಗೆಹ್ಲೋಟ್

ನವದೆಹಲಿ: ರಾಷ್ಟ್ರ ರಾಜಧಾನಿಯ ನಜಾಫ್‌ಗಢದ ಡಾಬಾವೊಂದರ ಫ್ರಿಡ್ಜ್‌ನಲ್ಲಿ ಶವ ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹತಳಾದ ನಿಕ್ಕಿ ಯಾದವ್‌ (Nikki Yadav) ಹಾಗೂ ಸಾಹಿಲ್‌ ಗೆಹ್ಲೋಟ್‌ (Sahil Gehlot) ಅವರು ೨೦೨೦ರಲ್ಲಿಯೇ ಮದುವೆಯಾಗಿದ್ದರು. ಆದರೆ, ಎರಡನೇ ಮದುವೆಯಾಗುವ ಕಾರಣಕ್ಕಾಗಿ ಸಾಹಿಲ್‌ ಗೆಹ್ಲೋಟ್‌, ನಿಕ್ಕಿ ಯಾದವ್‌ಳನ್ನು ಕೊಲೆ ಮಾಡಿ, ಆಕೆಯ ಶವವನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಎಂದು ಪೊಲೀಸರಿಂದ ತಿಳಿದುಬಂದಿದೆ.

ನಿಕ್ಕಿ ಯಾದವ್‌ ಹಾಗೂ ಸಾಹಿಲ್‌ ಗೆಹ್ಲೋಟ್‌ ಅವರು ಮದುವೆಯಾದ ಪ್ರಮಾಣಪತ್ರವು ಪೊಲೀಸರಿಗೆ ದೊರೆತಿದೆ. ಇಬ್ಬರೂ ೨೦೨೦ರಲ್ಲಿಯೇ ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ಆರ್ಯ ಸಮಾಜ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ಈ ಫೋಟೊ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಆದರೆ, ನಿಕ್ಕಿ ಯಾದವ್‌ ಜತೆ ಮದುವೆಯಾಗಿದ್ದು ಸಾಹಿಲ್‌ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ ಎಂದು ತಿಳಿದುಬಂದಿದೆ.

ಸಾಹಿಲ್‌ ಗೆಹ್ಲೋಟ್‌ಗೆ ಕುಟುಂಬಸ್ಥರ ಕಡೆಯಿಂದ ಒತ್ತಡ ಇತ್ತು. ಹಾಗಾಗಿ, ಆತ ಎರಡನೇ ಮದುವೆಗೆ ಒಪ್ಪಿಗೆ ಸೂಚಿಸಿದ್ದ. ಇದಕ್ಕಾಗಿಯೇ ನಿಕ್ಕಿ ಯಾದವ್‌ಳನ್ನು ಕೊಂದು, ಆಕೆಯ ಶವವನ್ನು ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದ ಎಂದು ತಿಳಿದುಬಂದಿದೆ. ಫೆಬ್ರವರಿ ೧೪ರಂದು ನಿಕ್ಕಿ ಯಾದವ್‌ ಶವ ಪತ್ತೆಯಾಗಿತ್ತು.

ಇದನ್ನೂ ಓದಿ: ಡಾಬಾದ ಫ್ರಿಡ್ಜ್‌ನಲ್ಲಿ ಗೆಳತಿಯ ಶವ ಇಟ್ಟು, ಕೆಲವೇ ಗಂಟೆಯಲ್ಲಿ ಮತ್ತೊಬ್ಬಳನ್ನು ಮದುವೆಯಾದ ಸಾಹಿಲ್‌ ಗೆಹ್ಲೋಟ್

Exit mobile version