ಹುಬ್ಬಳ್ಳಿ: ಸರಳ ವಾಸ್ತು (Sarla Vastu) ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ಇಲ್ಲಿಯ ಖಾಸಗಿ ಹೋಟೆಲ್‌ನಲ್ಲಿ ಹತ್ಯೆ ಮಾಡಲಾಗಿದೆ. ಭಕ್ತರ ಸೋಗಿನಲ್ಲಿ ಬಂದ ಅಪರಿಚಿತರು, ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹೋಟೆಲ್‌ನಲ್ಲಿ ರಿಸೆಪ್ಷನ್ ಕೌಂಟರ್ ಬಳಿಯೇ ಈ ಘಟನೆ ನಡೆದಿದೆ.
ʼಸರಳ ವಾಸ್ತುʼ ಸಲಹೆ ನೀಡುವ ಮೂಲಕ ಮನೆಮಾತಾಗಿದ್ದ ಚಂದ್ರಶೇಖರ್ ಹಲವು ಪುಸ್ತಕಗಳನ್ನೂ ಬರೆದಿದ್ದರು. ಸರಳ ವಾಸ್ತು ಹೆಸರಿನಲ್ಲಿಯೇ ಟಿವಿ ಕಾರ್ಯಕ್ರಮ ನಡೆಸುವ ಮೂಲಕ ಕರ್ನಾಟಕದಲ್ಲಿ ಜನಪ್ರಿಯರಾಗಿದ್ದರು. ವ್ಯವಹಾರದ ಸಂಬಂಧ ಅವರು ಬೆಂಗಳೂರಿನಿಂದ ಇಲ್ಲಿಗೆ ಆಗಮಿಸಿದ್ದರು.
ಘಟನೆ ನಡೆದ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಕಮೀಷನರ್ ಲಾಬೂರಾಮ್ ಆಗಮಿಸಿದ್ದು, ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಇವರ ಹತ್ಯೆ ಮಾಡಲಾಗಿದೆ ಎನ್ನುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಸರಳ ಜೀವನ, ಸರಳ ವಾಸ್ತು, ಸರಳ ಅಕಾಡೆಮಿ, ಮನೆಗಾಗಿ ವಾಸ್ತು, ವಾಸ್ತು ಪರಿಹಾರದ ಮೂಲಕ ಅವರು ಕರ್ನಾಟಕದ ಮನೆಮಾತಾಗಿದ್ದರು. ಈವರೆಗೂ 2 ಸಾವಿರಕ್ಕೂ ಅಧಿಕ ವಿಚಾರ ಸಂಕಿರಣಗಳಲ್ಲಿ ಮಾತನಾಡಿರುವ ಚಂದ್ರಶೇಖರ್ ಗುರೂಜಿ, ಈವರೆಗೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 16 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಸಿವಿಲ್ ಎಂಜಿನಿಯರಿಂಗ್ ಜತೆಗೆ ಕಾಸ್ಮಿಕ್ ಆರ್ಕಿಟೆಕ್ಚರ್ ನಲ್ಲಿ ಡಾಕ್ಟರೇಟ್ ಪದವಿಯನ್ನೂ ಅವರು ಸಂಪಾದಿಸಿದ್ದರು.
ಚಂದ್ರಶೇಖರ ಗುರೂಜಿ ಹತ್ಯೆ ಕುರಿತ ಇತರೆ ಸುದ್ದಿಗಳು
1. ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ: ಎದೆಯ ಮೇಲಿಟ್ಟು ಮೆರೆಸುತ್ತಿದ್ದವನು ಅರವತ್ತು ಕಡೆ ಇರಿದ
2. Chandrashekhar Guruji | ಚಂದ್ರಶೇಖರ ಗುರೂಜಿ ಹತ್ಯೆ ಮಾಡಿದ ಹಂತಕರ ಸೆರೆ: ನಿಗೂಢ ಸ್ಥಳದಲ್ಲಿ ಪೊಲೀಸರ ವಿಚಾರಣೆ
3. ಮೊದಲು ಚಂದ್ರಶೇಖರ್ ಗುರೂಜಿ ಕಾಲಿಗೆ ಬಿದ್ದರು, ನಂತರ 60 ಬಾರಿ ಇರಿದು ಕೊಂದರು!
4. ವಿಸ್ತಾರ ವಿಶೇಷ | ಸೇನೆ ಸೇರಬಯಸಿದ್ದ ಎಂಜಿನಿಯರ್ ಕೊನೆಗೆ ಸರಳ ವಾಸ್ತು ತಜ್ಞರಾಗಿದ್ದರು!
5. ವಾಸ್ತು ಸಲಹೆ ನಮ್ಮದು, ಪರಿಹಾರ ಸಿಗದಿದ್ದರೆ ನಾವು ಹೊಣೆಯಲ್ಲ: ಇದು ಸರಳ ವಾಸ್ತು ಷರತ್ತು!