Site icon Vistara News

142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಂಶುಪಾಲ; ತಂದೆ ವಯಸ್ಸು ಇವನಿಗೆ!

Physical abuse to girl

Woman Jailed For 40 Years For Letting Lover Rape Her Minor Daughter

ಚಂಡೀಗಢ: ಗುರು ಎಂದು ಕರೆಸಿಕೊಂಡವರು, ಶಾಲೆಯ ಪ್ರಾಂಶುಪಾಲರಾದವರು ಹೇಗಿರಬೇಕು? ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತನ್ನ ಮಕ್ಕಳೆಂದೇ ಭಾವಿಸಬೇಕು. ಶಿಷ್ಯಂದರು ತಪ್ಪು ಮಾಡಿದಾಗ ತಿದ್ದಿ, ಗದರಿ, ಅವರಿಗೆ ಪಠ್ಯದ ಜತೆಗೆ ಜೀವನ ಪಾಠವನ್ನೂ ಹೇಳಿ, ಅವರ ಉಜ್ವಲ ಭವಿಷ್ಯದಲ್ಲಿ ತಮ್ಮ ಖುಷಿ ಕಾಣಬೇಕು. ಆದರೆ, ಹರಿಯಾಣದಲ್ಲಿ (Haryana) ಶಾಲೆಯ ಪ್ರಾಂಶುಪಾಲನೊಬ್ಬ (School Principal) ತನ್ನ ಶಾಲೆಯ 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ (Sexual Assault) ನೀಡುವ ಮೂಲಕ ‘ಗುರು’ ಎಂಬ ಸ್ಥಾನಕ್ಕೆ ಕಳಂಕ ಅಂಟಿಸಿದ್ದಾನೆ.

ಹೌದು, ಜಿಂಡ್‌ ಜಿಲ್ಲೆಯಲ್ಲಿರುವ ಬಾಲಕಿಯರ ಸರ್ಕಾರಿ ಶಾಲೆಯ ಪ್ರಾಂಶುಪಾಲ ಕರ್ತಾರ್‌ ಸಿಂಗ್‌ ಎಂಬುವವನೇ ಇಂತಹ ನೀಚ ಕೃತ್ಯ ಎಸಗಿದ್ದಾನೆ. 56 ವರ್ಷದ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲಿಗೆ ಈತ 60 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಈತನು ಸುಮಾರು 142 ವಿದ್ಯಾರ್ಥಿನಿಯರ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬುದು ತನಿಖೆ ಬಳಿಕ ಬಯಲಾಗಿದೆ. ನವೆಂಬರ್‌ 6ರಂದೇ ಪೊಲೀಸರು ಕರ್ತಾರ್‌ ಸಿಂಗ್‌ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಕಾಮುಕ ಪ್ರಾಂಶುಪಾಲನನ್ನು ಬಂಧಿಸಿದ ಪೊಲೀಸರು.

“ಶಾಲೆಯ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ತನಿಖೆ ನಡೆಸಲು ಸಬ್‌ ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ ನೇತೃತ್ವದ ಸಮಿತಿ ರಚಿಸಲಾಗಿದೆ. ಶಾಲೆಯಲ್ಲಿ 9, 10, 11 ಹಾಗೂ 12ನೇ ತರಗತಿ ಓದುತ್ತಿರುವ 390 ವಿದ್ಯಾರ್ಥಿಗಳ ಜತೆ ನೇರವಾಗಿ ಮಾತುಕತೆ ನಡೆಸಲಾಗಿದೆ. ಇವರಲ್ಲಿ 142 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ನೀಡಿರುವ ಕುರಿತು ಮಾಹಿತಿ ನೀಡಿದ್ದಾರೆ. ಈಗಾಗಲೇ ಆರೋಪಿ ವಿರುದ್ಧ ಐಪಿಸಿ ಹಾಗೂ ಪೋಕ್ಸೋ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಜಿಂಡ್‌ ಡಿಸಿಪಿ ಮೊಹಮ್ಮದ್‌ ಇಮ್ರಾನ್‌ ರಾಜಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Namma Metro : ಮೆಟ್ರೊದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಕೆಂಪು ಅಂಗಿಯವ ಯಾರು?

ರಾಷ್ಟ್ರಪತಿಗೆ ಪತ್ರ ಬರೆದಿದ್ದ ವಿದ್ಯಾರ್ಥಿನಿಯರು

ಪ್ರಾಂಶುಪಾಲನು ಲೈಂಗಿಕ ಕಿರುಕುಳ ನೀಡುತ್ತಿದ್ದು, ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಲೆಯ ವಿದ್ಯಾರ್ಥಿನಿಯರೇ ಹೋರಾಟ ಆರಂಭಿಸಿದ್ದರು. ಅವರು ಕಳೆದ ಆಗಸ್ಟ್‌ 31ರಂದು ವಿದ್ಯಾರ್ಥಿನಿಯರು ಸಹಿ ಹಾಕಿರುವ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಹರಿಯಾಣ ರಾಜ್ಯಪಾಲ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಳುಹಿಸಿದ್ದರು. ಇದಾದ ಬಳಿಕ ಶಾಲೆಯ ಪ್ರಾಂಶುಪಾಲನ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೊನೆಗೆ ಆತನನ್ನು ಬಂಧಿಸಲಾಗಿದ್ದು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿನಿಯರು, ಅವರ ಪೋಷಕರು ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version