ಜಲೋರ್: ರಾಜಸ್ಥಾನದ ಜಲೋರ್ ಜಿಲ್ಲೆಯ ರಾಜಪುರ ಗ್ರಾಮದಲ್ಲಿರುವ ಸುಂಧಾ ಮಾತಾ ದೇವಸ್ಥಾನದ ಸಮೀಪ ಮರಕ್ಕೆ ನೇಣು ಬಿಗಿದು 60 ವರ್ಷದ ಸಾಧುವೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಧು ರವಿನಾಥ್ ಅವರು ಭೂವಿವಾದದಿಂದ ಮನ ನೊಂದು ಈ ಕೃತ್ಯಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ತಮ್ಮ ಆತ್ಮಹತ್ಯೆಗೆ ಭಿನ್ಮಾಲ್ ಶಾಸಕ ಪೂರ ರಾಮ್ ಚೌಧರಿ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ತಮ್ಮ ಶವವನ್ನು ಪೋಸ್ಟ್ ಮಾರ್ಟಂ ಮಾಡದಂತೆ ಮನವಿ ಮಾಡಿದ್ದಾರೆ. ಆದರೆ ಪೊಲೀಸರು ಈ ಡೆತ್ ನೋಟನ್ನು ಅಡಗಿಸಿಟ್ಟಿದ್ದಾರೆ ಎಂದು ಆಶ್ರಮವಾಸಿಗಳು ಆರೋಪಿಸಿದ್ದಾರೆ.
ಆಶ್ರಮದ ಹಿಂದಿರುವ ಜಮೀನು ಶಾಸಕರಿಗೆ ಸೇರಿದ್ದು ಎನ್ನಲಾಗಿದೆ. ಅದಕ್ಕೆ ಮಾರ್ಗ ನಿರ್ಮಿಸಿಕೊಳ್ಳಲು ಮೂರು ದಿನಗಳ ಹಿಂದೆ ಆಶ್ರಮದ ಆವರಣದಲ್ಲಿರುವ ಜಮೀನನ್ನು ಅಳತೆ ಮಾಡಲು ಶಾಸಕರು ಕೆಲವರನ್ನು ಕಳುಹಿಸಿದ್ದರು ಇದಕ್ಕೆ ಸಾಧು ರವಿನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
“ನಾನು ಆ ಜಮೀನಿನಲ್ಲಿ ರೆಸಾರ್ಟ್ ನಿರ್ಮಿಸಲು ಯೋಜಿಸಿದ್ದೆ, ಗುರುವಾರ, ತಹಸೀಲ್ದಾರ್ ಅವರಿಂದ ಅನುಮತಿ ಪಡೆದು, ಸರ್ಕಾರಿ ಅಧಿಕಾರಿಯಿಂದ ಜಮೀನು ಅಳತೆ ಮಾಡಲಾಗಿತ್ತು, ಕೆಲವು ದಿನಗಳ ಹಿಂದೆ, ಆಗ ಯಾರೂ ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ, ನಮ್ಮ ನಡುವೆ ಯಾವುದೇ ವಿವಾದ ಇರಲಿಲ್ಲ. “ಎಂದು ಶಾಸಕ ಪೂರ ರಾಮ್ ಚೌಧರಿ ಹೇಳಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಆಶ್ರಮದ ಬಳಿ ಹೆಚ್ಚಿನ ನಿಗಾ ಇರಿಸಿದ್ದಾರೆ.
ಇದನ್ನೂ ಓದಿ: ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೇಮನೆ ಮುಕ್ತ ಮಾತು