ಬೆಂಗಳೂರು: ಸಾಲದ ಹೊರೆಗೆ ಅಂಜಿ, ಖಾಸಗಿ ಬ್ಯಾಂಕ್ ಸಿಬ್ಬಂದಿಯ ತಾಕೀತಿಗೆ ಅಂಜಿ ಇಬ್ಬರು ಮಕ್ಕಳೊಂದಿಗೆ ತಾಯಿಯೊಬ್ಬರು ಆತ್ಮಹತ್ಯೆ (self harm) ಮಾಡಿಕೊಂಡಿದ್ದಾರೆ. ಜೆಪಿ ನಗರದ ಮೂರನೇ ಹಂತದಲ್ಲಿ ಈ ದುರಂತ ಸಂಭವಿಸಿದ್ದು, ಖಾಸಗಿ ಬ್ಯಾಂಕ್ ಸಾಲದ ಹೊರೆಗೆ ಮೂವರೂ ಬಲಿಯಾಗಿದ್ದಾರೆ.
ಉಡುಪಿ ಜಿಲ್ಲೆಯ ಅಂಬಲಪಾಡಿ ಮೂಲದವರಾದ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿತ್ತು. ಮೃತಪಟ್ಟ ಮಹಿಳೆ ಸುಕನ್ಯ (58). ನಿಖಿತ್, ನಿಶ್ಚಿತ ಮೃತ ಪಟ್ಟಿರುವ ಅವಳಿ ಮಕ್ಕಳು. ನಿನ್ನೆ ಸಂಜೆ ಬ್ಯಾಂಕ್ ಸಿಬ್ಬಂದಿಗಳು ಮನೆಗೆ ಆಗಮಿಸಿ ಸಾಲದ ಹಣ ವಾಪಸು ಕೇಳಿದ್ದರು. ಗಂಡ ಮನೆಯಲ್ಲಿರದ ವೇಳೆ ಬ್ಯಾಂಕ್ ಸಿಬ್ಬಂದಿಗಳು ಬಂದಿದ್ದರು ಎಂದು ಗೊತ್ತಾಗಿದೆ.
ಇದರಿಂದ ನೊಂದ ಸುಕನ್ಯ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಜೆಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಡ್‌ರೂಂ ಕಿಟಕಿ ಹಾಕದೆ ರತಿಕೇಳಿ, ಪಕ್ಕದ ಮನೆ ಮಹಿಳೆಗೆ ಕಿರಿಕ್!
ಬೆಂಗಳೂರು: ರಾಜಧಾನಿ ನಗರದಲ್ಲಿ ವಿಚಿತ್ರ ದೂರೊಂದು ಪೊಲೀಸರಲ್ಲಿ ದಾಖಲಾಗಿದೆ. ದೂರಿಗೆ ಕಾರಣವಾಗಿರುವುದು ಪಕ್ಕದ ಮನೆ ದಂಪತಿಯ ಖುಲ್ಲಂಖುಲ್ಲಾ ಸರಸ ಸಲ್ಲಾಪ ವಿಚಾರ.
ಗಿರಿನಗರ ಪೊಲೀಸ್ ಠಾಣೆಗೆ ಈ ವಿಚಿತ್ರ ಕೇಸ್ ಬಂದಿದೆ. 44 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಗಿರಿನಗರ ವ್ಯಾಪ್ತಿಯ ಅವಲಹಳ್ಳಿ ಏರಿಯಾದಲ್ಲಿ ಮಹಿಳೆ ವಾಸವಿರುವ ಬಾಡಿಗೆಮನೆಯ ಪಕ್ಕದ ಮನೆಯಲ್ಲಿ ಈ ವಿಚಿತ್ರ ದಂಪತಿ ವಾಸವಿದ್ದಾರೆ. ಮಹಿಳೆ ಇರುವ ಮನೆ ಬಾಗಿಲಿಗೆ ಎದುರಾಗಿಯೇ ಪಕ್ಕದ ಮನೆ ಬೆಡ್ ರೂಂ ಇದೆ.
ದೂರು ಏನೆಂದರೆ, ಪಕ್ಕದ ಮನೆ ದಂಪತಿ ಲೈಂಗಿಕ ಕ್ರಿಯೆ ಮಾಡುವಾಗ ಕಿಟಕಿ ಬಾಗಿಲು ತೆರೆದಿಟ್ಟುಕೊಂಡೇ ನಡೆಸುತ್ತಾರೆ; ಜೊತೆಗೆ ವಿಕೃತ ವರ್ತನೆ ಮಾಡುತ್ತಾರಂತೆ. ವಿಕೃತ ಸದ್ದುಗಳು ಹಾಗೂ ಹಾವಭಾವಗಳನ್ನು ಪ್ರದರ್ಶಿಸುವ ಇವರ ವರ್ತನೆಯಿಂದ ಮಹಿಳೆ ಕುಟುಂಬಕ್ಕೆ ಕಿರಿಕಿರಿ ಉಂಟಾಗಿದೆ. ʼಕಿಟಕಿ ಬಾಗಿಲು ಹಾಕಿಕೊಳ್ಳಿʼ ಎಂದು ಆಗ್ರಹಿಸಿದರೆ, ʼನಮ್ಮ ಮನೆ, ನಮ್ಮ ಇಷ್ಟʼ ಎಂಬ ಉತ್ತರ ದಂಪತಿಯಿಂದ ಬಂದಿದೆ. ಆಕ್ಷೇಪಿಸಿದಾಗ, ಪಕ್ಕದ ಮನೆ ವ್ಯಕ್ತಿ ಮಹಿಳೆಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದಾನೆ.
ಆರೋಪಿಗೆ ಮನೆ ಮಾಲೀಕ ಮತ್ತು ಆತನ ಮಗನೂ ಸಾಥ್ ಕೊಟ್ಟಿದ್ದಾರಂತೆ. “ನಿಮಗೆ ಇಷ್ಟವಿಲ್ಲದಿದ್ರೇ ನೀವೇ ಮನೆ ಬಿಟ್ಟುಹೋಗಿ” ಎಂದು ದಬಾಯಿಸಿದ್ದಾರೆ. ಮನೆ ಮಾಲಿಕನೂ ರೌಡಿ ಹುಡುಗರನ್ನು ಕರೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ. ಮನೆ ಮಾಲೀಕ ಚಿಕ್ಕಣ್ಣ, ಆತನ ಪುತ್ರ ಮಂಜುನಾಥ್, ಪಕ್ಕದ ಮನೆ ವ್ಯಕ್ತಿ ವಿರುದ್ಧ ದೂರು ನೀಡಲಾಗಿದೆ. ದೂರು ಸ್ವೀಕರಿಸಿ ಎಫ್‌ಐಆರ್ ಮಾಡಿರುವ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. IPC ಸೆಕ್ಷನ್ 504, 506, 509, 34ರಡಿ ಪ್ರಕರಣ ದಾಖಲು ಮಾಡಲಾಗಿದೆ.
ಮೆಟ್ರೋ ಸಿಬ್ಬಂದಿಯಿಂದ ಅಸಭ್ಯ ವರ್ತನೆ
ಬೆಂಗಳೂರು: ನಮ್ಮ ಮೆಟ್ರೋ (Namma Metro) ಸಿಬ್ಬಂದಿಯೊಬ್ಬ ಮಹಿಳೆಯ ಮುಂದೆ ಅಸಭ್ಯವಾದ ವರ್ತನೆ (Indecent behavior) ತೋರಿಸಿದ್ದಾನೆ. ಇದರಿಂದ ಆತಂಕಿತರಾದ ಮಹಿಳೆ, ʼನನಗೆ ಇಲ್ಲಿ ಅಸುರಕ್ಷಿತʼ ಎನಿಸುತ್ತಿದೆ ಎಂದು ಎಕ್ಸ್‌ನಲ್ಲಿ ಸಂದೇಶ ಹಾಕಿದ್ದಾರಲ್ಲದೆ, ಕ್ರಮ ಕೈಗೊಳ್ಳುವಂತೆ ಮೆಟ್ರೋ ಅಧಿಕಾರಿಗಳು ಹಾಗೂ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಜಾಲಹಳ್ಳಿ ಮೆಟ್ರೋ ಫ್ಲಾಟ್‌ಫಾರಂನಲ್ಲಿ ಘಟನೆ ನಡೆದಿದ್ದು, ಮೆಟ್ರೋ ಸಿಬ್ಬಂದಿಯಿಂದ ಈ ಕೃತ್ಯ ನಡೆದಿದೆ ಎಂದು ದೂರಲಾಗಿದೆ. ಎದುರಿನ ಫ್ಲಾಟ್‌ಫಾರಂನಲ್ಲಿದ್ದ ಮಹಿಳೆಯ ಮುಂದೆ ಖಾಸಗಿ ಅಂಗವನ್ನು ಸ್ಪರ್ಶ ಮಾಡಿಕೊಂಡು ದುರ್ವರ್ತನೆ ತೋರಿದ್ದಾನೆ. ಇದನ್ನು ಮಹಿಳೆ ಆಕ್ಷೇಪಿಸಿದರೂ ಆತ ನಿಲ್ಲಿಸಿಲ್ಲ. ಬಳಿಕ ಆಕೆ ಇದನ್ನು ವಿಡಿಯೋ ಮಾಡಿಕೊಳ್ಳಲು ಆರಂಭಿಸಿದಾಗ ಆತ ಅಲ್ಲಿಂದ ಹೋಗಿದ್ದಾನೆ ಎಂದು ಗೊತ್ತಾಗಿದೆ.
ಈ ವಿಚಾರವನ್ನು ಮಹಿಳೆ ಮೆಟ್ರೋ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಅವರಿಂದ ಯಾವುದೇ ಕ್ರಮ ಬರದಿರುವ ಹಿನ್ನೆಲೆಯಲ್ಲಿ, ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Raj Kumar Bust: ವರನಟ ಡಾ.ರಾಜ್ ಕುಮಾರ್ ಪುತ್ಥಳಿ ಕೆಡವಿದ ಬಿಬಿಎಂಪಿ, ಆಕ್ರೋಶ; ಏಕೆ ಹೀಗಾಯ್ತು?