Site icon Vistara News

Self Harming : ಸಾಲಗಾರರ ಕಾಟ; ಇಲಿ ಪಾಷಣ ಸೇವಿಸಿ ಜೀವ ಬಿಟ್ಟ ಮೆಕ್ಯಾನಿಕ್

Self Harming

ದೊಡ್ಡಬಳ್ಳಾಪುರ: ಸಾಲ ಮಾಡಿ ಬಡ್ಡಿ ಕಟ್ಟಲಾಗದೆ ಬೇಸತ್ತ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಪರ್ವೀಜ್ ಪಾಷ (38) ಆತ್ಮಹತ್ಯೆಗೆ ಶರಣಾದವರು.

ದೊಡ್ಡಬಳ್ಳಾಪುರ ನಗರದ ರೋಜಿಪುರ ಬಡಾವಣೆಯ ನಿವಾಸಿಯಾದ ಪರ್ವೀಜ್ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪರ್ವೀಜ್‌ ಈ ಹಿಂದೆ ಹಲವು ವ್ಯಕ್ತಿಗಳ ಬಳಿ ಬಡ್ಡಿಗೆ ಸಾಲ ಪಡೆದಿದ್ದ. ಸಾಲಗಾರರ ಕಾಟ ತಡೆಯಲಾರದೇ ಮನನೊಂದಿದ್ದ.

ಸಾಲ ತೀರಿಸಲು ದಿಕ್ಕು ದೋಚದೆ ಮೂರು ದಿನ ಊಟ ಬಿಟ್ಟಿದ್ದ. ನಂತರ ಅಂಗಡಿ ಮುಂದೆ ಸಾಲಗಾರರ ಕಾಟ ಹೆಚ್ಚಾದಾಗ ಕಳೆದ ಭಾನುವಾರ ಮನೆಗೆ ಬಂದವರೇ ಇಲಿ ಪಾಷಣ ಸೇವಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಪರ್ವೀಜ್‌ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಪರ್ವೀಜ್‌ ಸಾವನ್ನಪ್ಪಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Self harming

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ರೋಜಿಪುರದಲ್ಲಿ ಈ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Sonu Srinivas Gowda: ದರ್ಶನ್‌ ಬಗ್ಗೆ ಮಾತನಾಡಿಲ್ಲ ಎಂದು ಸೋನು ಶ್ರೀನಿವಾಸ್ ಗೌಡಗೆ ಕಿರುಕುಳ ಕೊಟ್ಟ ದಚ್ಚು ಫ್ಯಾನ್ಸ್‌!

ಕುಸಿದು ಬಿದ್ದ ದಿಲ್ಲಿ ಏರ್‌ಪೋರ್ಟ್‌ ಛಾವಣಿ- ಒಬ್ಬ ಬಲಿ, 5 ಮಂದಿಗೆ ಗಂಭೀರ ಗಾಯ

ಹೊಸದಿಲ್ಲಿ: ಇಷ್ಟು ದಿನ ಬಿಸಿಲ ಬೇಗೆ, ಉಷ್ಣ ಗಾಳಿಯ ತಾಪಕ್ಕೆ ಬೇಸತ್ತಿದ್ದ ರಾಷ್ಟ್ರ ರಾಜಧಾನಿ ದೆಹಲಿ(New Delhi)ಯಲ್ಲಿ ವರಣನ ಅಬ್ಬರ(Delhi Rain) ಜೋರಾಗಿದೆ. ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಗೆ ದಿಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್‌ 1ರ ಮೇಲ್ಛಾವಣಿ ಕಾರುಗಳ ಮೇಲೆ ಕುಸಿದು ಬಿದ್ದಿದ್ದು, ಒಬ್ಬ ದುರ್ಮರಣಕ್ಕೀಡಾಗಿದ್ದಾನೆ. ಘಟನೆಯಲ್ಲಿ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಟರ್ಮಿನಲ್‌ 1ರ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಅದೂ ಅಲ್ಲದೇ ಮುಂಜಾಗೃತಾ ಕ್ರಮವಾಗಿ ದಿಲ್ಲಿ ವಿಮಾನ ನಿಲ್ದಾಣ(Delhi International Airport)ದ ಎಲ್ಲಾ ಚೆಕ್-ಇನ್‌ ಕೌಂಟರ್‌ಗಳನ್ನು ಮುಚ್ಚಲಾಗಿದೆ.

ಅಧಿಕೃತ ಮೂಲಗಳ ಪ್ರಕಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಛಾವಣಿ ಶೀಟ್‌ ಮತ್ತು ಬೀಮ್‌ ಕುಸಿದು ಬಿದ್ದಿದ್ದು, ಪಾರ್ಕಿಂಗ್‌ ಏರಿಯಾದಲ್ಲಿದ್ದ ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಮಳೆಯಿಂದಾಗಿ ಈ ಅವಘಡ ಸಂಭವಿಸಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಘಟನೆ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ಪ್ರತಿಕ್ರಿಯಿಸಿದ್ದು, ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆ ಖುದ್ದು ಪರಿಶೀಲನೆ ನಡೆಸಲಾಗುತ್ತಿದೆ. ಗಾಯಾಳುಗಳನ್ನು ದಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ರಣಭೀಕರ ಮಳೆಗೆ ದಿಲ್ಲಿ ತತ್ತರ

ಎರಡನೇ ದಿನವೂ ದಿಲ್ಲಿಯ್ಲಿ ಭಾರೀ ಮಳೆಯಾಗುತ್ತಿದೆ. ರಸ್ತೆ, ಮನೆಗಳಿಗೆ ನೀರು ನುಗ್ಗಿದ್ದು, ಜನ ಸಂಚಾರ ಅಸ್ತವ್ಯಸ್ತಗೊಂಡಿದೆ. ದಿಲ್ಲಿಯ ವಿವಿಧ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version