Site icon Vistara News

Self Harming : ಕುಡಿಬೇಡ ಎಂದಿದ್ದಕ್ಕೆ ಬಾತ್‌ರೂಂನಲ್ಲಿ ನೇಣು ಬಿಗಿದುಕೊಂಡ ಯುವಕ

Self Harming By boy

ರಾಯಚೂರು: ಕುಡಿಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವಕನೊರ್ವ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣ ಘಟನೆ ನಡೆದಿದೆ. ಆದರ್ಶ್‌ (24) ಆತ್ಮಹತ್ಯೆ ಮಾಡಿಕೊಂಡವನು.

ಮಾನ್ವಿ ಪಟ್ಟಣದಲ್ಲಿ ಆದರ್ಶ್‌ ಹೇರ್ ಕಟಿಂಗ್ ಶಾಪ್ ಹೊಂದಿದ್ದ. ಈ ನಡುವೆ ಮದ್ಯ ಸೇವಿಸುವುದನ್ನು ಹವ್ಯಾಸ ಮಾಡಿಕೊಂಡಿದ್ದ. ದುಡಿದ ಹಣವನ್ನೆಲ್ಲ ಕುಡಿತಕ್ಕೆ ಹಾಕುತ್ತಿದ್ದ. ನಿತ್ಯ ಕುಡಿದು ಮನೆಗೆ ಬರುತ್ತಿದ್ದ. ಇದೇ ವಿಚಾರಕ್ಕೆ ಮನೆಯಲ್ಲಿ ಪೋಷಕರು ಬೈದು ಬುದ್ಧಿವಾದ ಹೇಳಿದ್ದರು.

ಬುದ್ಧಿವಾದವನ್ನೇ ಅವಮಾನ ಎಂದು ತಿಳಿದು ಮನನೊಂದಿದ್ದ. ಕೋಪದ ಕೈಗೆ ಬುದ್ಧಿಕೊಟ್ಟ ಆದರ್ಶ್‌ ಮನೆ ಬಾತ್ ರೂಂನಲ್ಲಿರುವ ಪೈಪ್‌ಗೆ ಹಗ್ಗ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಸಾವಿನಿಂದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Fraud Case: ವರ್ಕ್‌ ಫ್ರಂ ಹೋಮ್‌ ಆಮಿಷ, ಐಟಿ ಉದ್ಯೋಗಿಗೆ 4.33 ಲಕ್ಷ ರೂ. ವಂಚನೆ

ಬೆಂಗಳೂರಲ್ಲಿ ವೃದ್ಧ ದಂಪತಿ ಸೂಸೈಡ್‌

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಕೃಷ್ಣಯ್ಯ ಲೇಔಟ್‌ನಲ್ಲಿ ಘಟನೆ ನಡೆದಿದೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣಂ ನಾಯ್ಡು(84), ಸರೋಜಮ್ಮ (78) ಮೃತ ವೃದ್ಧ ದಂಪತಿ.

ಈ ದಂಪತಿಗೆ ಅಶೋಕ್ ಎಂಬ ಒಬ್ಬನೆ ಮಗನಿಂದು. ಮಗನೊಂದಿಗೆ ವಾಸವಾಗಿದ್ದ ವೃದ್ಧ ದಂಪತಿ, ಕೆಲ ತಿಂಗಳ ನಂತರ ಮನೆಯ ಟೆರೆಸ್ ಮೇಲಿರುವ ರೂಂನಲ್ಲಿ ವಾಸವಾಗಿದ್ದರು. ಫೆ.22ರ ಗುರುವಾರ ಬೆಳಗ್ಗೆ 7.30 ರ ಸುಮಾರಿಗೆ ಸೊಸೆ ನೀರು ಹಿಡಿದುಕೊಳ್ಳಲು ಬಂದಾಗ ಇಬ್ಬರು ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಸೋಕೋ ಟೀಂ ಹಾಗೂ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೃದ್ಧ ದಂಪತಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version