ಚಿಕ್ಕೋಡಿ: ತಾಯಿಯೊಬ್ಬಳು ತನ್ನ ಇಬ್ಬರು ಹೆಣ್ಮಕ್ಕಳ ಜತೆ (Mother ends life with two Childrens) ಬಾವಿಗೆ ಹಾರಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ (Belagavi News) ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ಈ ಮನಕುಲಕುವ ಘಟನೆ ನಡೆದಿದೆ.
ಸರಸ್ವತಿ ಕಿರವೆ (26) ಎಂಬವರೇ ತಮ್ಮ ಪುಟಾಣಿ ಮಕ್ಕಳಾದ ದೀಪಿಕಾ (7) ಹಾಗೂ ರಿತಿಕಾ (4) ಅವರನ್ನು ಹಿಡಿದುಕೊಂಡು ಬಾವಿಗೆ ಹಾರಿದ ದುರ್ದೈವಿ ಮಹಿಳೆ. ಕೌಟುಂಬಿಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದ ಆಕೆ ಕೊನೆಗೆ ಸಾವೇ ದಾರಿಯೆಂದು ಬಗೆದು ಈ ಅತಿರೇಕದ ಕ್ರಮಕ್ಕೆ ಮುಂದಾಗಿದ್ದಾರೆ.
ಸುಲ್ತಾನಪುರ ಗ್ರಾಮದ ಸರಸ್ವತಿ ಎಂಬವರನ್ನು 2016ರಲ್ಲಿ ಮಹಾರಾಷ್ಟ್ರ ಸಾಂಗ್ಲಿಯ ಕಿರಣ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಆಕೆಯ ಸಂತೋಷ ತುಂಬ ದಿನ ಉಳಿಯಲಿಲ್ಲ. ಮದುವೆಯಾದ ದಿನದಿಂದಲೇ ಹಿಂಸೆಯನ್ನು ಅನುಭವಿಸುತಿದ್ದರು. ಗಂಡ ಆಕೆಯ ಪಾಲಿಗೆ ಕಿರಾತಕನಾಗಿದ್ದ. ಇದರ ನಡುವೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದರು. ಮಕ್ಕಳು ಹುಟ್ಟಿದ ಮೇಲೂ ಗಂಡನ ಕಿರುಕುಳ ನಿಲ್ಲಲೇ ಇಲ್ಲ.
ಕೊನೆಗೆ ಇದಮ್ಮ ಸಹಿಸಲು ಸಾಧ್ಯವೇ ಇಲ್ಲ ಎಂಬ ಕಾರಣಕ್ಕಾಗಿ ಎಂಟು ತಿಂಗಳ ಹಿಂದೆ ತವರು ಮನೆ ಸುಲ್ತಾನಪುರಕ್ಕೆ ಬಂದಿದ್ದರು ಸರಸ್ವತಿ. ತವರು ಮನೆಯಲ್ಲಿದ್ದ ಆಕೆಗೆ ತನ್ನ ಬದುಕು ಹೀಗೆ ಹಾಳಾದ ಬಗ್ಗೆಯೇ ಆತಂಕವಿತ್ತು ಎನ್ನಲಾಗಿದೆ. ಇಬ್ಬರು ಹೆಣ್ಮಕ್ಕಳ ಬದುಕಿನ ಬಗ್ಗೆ ಸದಾ ಯೋಚಿಸಿ ಆತಂಕಪಡುತ್ತಿದ್ದ ಆಕೆ ಅಂತಿಮವಾಗಿ ಎಲ್ಲರೂ ಜತೆಯಾಗಿ ಪ್ರಾಣ ಕಳೆದುಕೊಳ್ಳುವ ನಿರ್ಧಾರದೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಹಾರೂಗೇರಿ ಪೊಲೀಸರ ಭೇಟಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮನೆಯವರನ್ನು ವಿಚಾರಣೆ ನಡೆಸಿದ್ದಾರೆ. ಗಂಡನನ್ನೂ ಕರೆಸಲಾಗಿದೆ.
ಇದನ್ನೂ ಓದಿ: Murder Case : ಪ್ರಿಯಕರನ ಜತೆ ಸರಸದಲ್ಲಿದ್ದಾಗ ಗಂಡನ ಎಂಟ್ರಿ; ಕೆಲವೇ ಸೆಕೆಂಡಲ್ಲಿ ಫಿನಿಷ್!
Self Harming: ಜೀವನದಲ್ಲಿ ಜಿಗುಪ್ಸೆಗೊಂಡು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ
ತುಮಕೂರು: ಜೀವನದಲ್ಲಿ ಜಿಗುಪ್ಸೆಗೊಂಡು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿರುವುದು ಹನುಮಂತಪುರ ಬಳಿಯಿರುವ ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ನಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ಮಂಗಳವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.
ಮಧುಗಿರಿ ತಾಲೂಕಿನ ಕಸಬಾ ಹೋಬಳಿಯ ಮುದ್ದೇನಹಳ್ಳಿ ಗ್ರಾಮದ ಅಂಜನ್ ಕುಮಾರ್ (19) ಮೃತ ವಿದ್ಯಾರ್ಥಿ. ಮಕರ ಸಂಕ್ರಾಂತಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳೆಲ್ಲರೂ ತಮ್ಮ ಊರುಗಳಿಗೆ ತೆರಳಿದ್ದರು. ಹೀಗಾಗಿ ಯಾರೂ ಇಲ್ಲದ ವೇಳೆ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಾಸ್ಟೆಲ್‌ನಲ್ಲಿ ಡೆತ್‌ನೋಟ್ ಸಿಕ್ಕಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಅಂಜನ್ ಕುಮಾರ್ ಬರೆದಿರುವುದು ಕಂಡುಬಂದಿದೆ. ನನ್ನನ್ನು ಇಷ್ಟು ದಿನ ಸಾಕಿ ಸಲುಹಿದ ದೊಡ್ಡಪ್ಪ-ದೊಡ್ಡಮ್ಮ ಅವರ ಋಣವನ್ನು 7 ಜನ್ಮವಾದರೂ ತೀರಿಸಲು ಸಾಧ್ಯವಿಲ್ಲ. ನಾನು ಯಾರಿಗಾದರೂ ನೋವು ಕೊಟ್ಟಿದ್ದರೆ ಕ್ಷಮಿಸಿಬಿಡಿ ಗೆಳೆಯರೇ ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.
ಸ್ಥಳಕ್ಕೆ ಎನ್‌ಇಪಿಎಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾಸ್ಟೆಲ್‌ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದು, ಎನ್‌ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.