Site icon Vistara News

Self Harming : ತುಮಕೂರಲ್ಲಿ ಗರ್ಭಿಣಿ ಅನುಮಾನಾಸ್ಪದ ಸಾವು; ಪತ್ನಿ ನಿದ್ದೆಗೆ ಜಾರಿದಾಗ ಕಟ್ಟಡದಿಂದ ಹಾರಿದ

sowmya And bikram

ತುಮಕೂರು/ಬೆಂಗಳೂರು: ಮೂರು ತಿಂಗಳ ಗರ್ಭಿಣಿ ಅನುಮಾನಾಸ್ಪದ ರೀತಿಯಲ್ಲಿ (Self Harming) ಮೃತಪಟ್ಟಿದ್ದಾಳೆ. ತುಮಕೂರಿನ ತಿಪಟೂರಿನ ಮೂಡಲ್ ಕೊಪ್ಪಲು ಗ್ರಾಮದಲ್ಲಿ ಘಟನೆ ನSಡೆದಿದೆ. ಸೌಮ್ಯ (22) ಮೃತ ದುರ್ದೈವಿ.

ಚಿಕ್ಕನಾಯಕನಹಳ್ಳಿ ತಾಲೂಕಿನ ಬೊಮ್ಮೇನಹಳ್ಳಿ ಮೂಲದ ಸೌಮ್ಯ ವಯಸ್ಸಿನಲ್ಲಿ ತನಗಿಂತಲೂ 18 ವರ್ಷ ದೊಡ್ಡವನಾದ ಪ್ರಸಾದ್ (40) ಎಂಬುವವರ ಜತೆಗೆ ಮದುವೆಯಾಗಿದ್ದಳು. ಆದರೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಂಪತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಕುಟುಂಬಸ್ಥರು ರಾಜಿ ಪಂಚಾಯಿತಿಯನ್ನು ಮಾಡಿದ್ದರು.

ಆದರೆ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಸೌಮ್ಯಳ ಮೃತದೇಹವು ಪತ್ತೆಯಾಗಿದೆ. ಇತ್ತ ಸೌಮ್ಯಳ ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಕಳೆದ ರಾತ್ರಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಸೌಮ್ಯ ಕುಟುಂಬಸ್ಥರು ಆರೋಪಿಸಿದ್ದಾರೆ. ಸೌಮ್ಯಳ ಪತಿ ಪ್ರಸಾದ್‌ ಹಾಗೂ ಮಾವನ ವಿರುದ್ಧ ದೂರು ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ತಿಪಟೂರಿನ ಶವಾಗಾರಕ್ಕೆ ಸೌಮ್ಯ ಮೃತದೇಹವನ್ನು ರವಾನೆ ಮಾಡಲಾಗಿದೆ. ನೋಣವಿನಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ದನ್ನೂ ಓದಿ: Murder Case : ಮತ್ತೊಬ್ಬನ ಮೋಹಕ್ಕೆ ಸಿಲುಕಿ ಗಂಡನ ಕೊಂದಳು ಮೂರು ಮಕ್ಕಳ ತಾಯಿ

ಕಟ್ಟಡದಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ಪಿಜಿಯೊಂದರ ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಬನ್ನೆರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿ ಬಳಿಯ ಸೆಂಟ್ರಲ್ ಎಕ್ಸೈಸ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ನೇಪಾಳ ಮೂಲದ ಬಿಕ್ರಮ್ (22) ಮೃತಪಟ್ಟವನು.

ಬಿಕ್ರಮ್‌ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ. ಮದ್ಯ ವ್ಯಸನಿ ಆಗಿದ್ದ ಬಿಕ್ರಮ್‌, ರಾತ್ರಿ ಕುಡಿದು ಬಂದು ಪತ್ನಿ ಜತೆ ಜಗಳವಾಡಿದ್ದಾನೆ. ನಂತರ ಪತ್ನಿ ನಿದ್ರೆಗೆ ಜಾರಿದಾಗ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Road Accident : ಮಲಗಿದ್ದವರ ಮೇಲೆ ಹರಿದ ಬೊಲೆರೋ; ಒಬ್ಬ ಸಾವು, ಮತ್ತೊಬ್ಬ ಗಂಭೀರ

ಪತ್ನಿ ದೂರಾದಳೆಂದು ನೊಂದು ನೇಣಿಗೆ ಶರಣಾದ ನ್ಯಾಷನಲ್ ಕಬಡ್ಡಿ ಆಟಗಾರ

ಚಿಕ್ಕಮಗಳೂರು : ನ್ಯಾಷನಲ್ ಕಬಡ್ಡಿ ಆಟಗಾರ ನೇಣಿಗೆ (National Kabaddi player) ಶರಣಾಗಿರುವ (Self harming) ಘಟನೆ ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದಿದೆ. ವಿನೋದ್ ರಾಜ್ ಅರಸ್ (Vinod Raj aras) ಮೃತ ದುರ್ದೈವಿ.

ಮದುವೆಯಾದ ಒಂದೇ ತಿಂಗಳಿಗೆ ಪತ್ನಿ ಬಿಟ್ಟಹೋದ ಹಿನ್ನೆಲೆಯಲ್ಲಿ ವಿನೋದ್‌ ರಾಜ್‌ ನೊಂದಿದ್ದ ಎನ್ನಲಾಗಿದೆ. ಕಳೆದ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ ವಿನೋದ್ ರಾಜ್ ಅರಸ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ರಾತ್ರಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಎರಡು ವರ್ಷಗಳ ಕಾಲ ಪ್ರೀತಿಸಿದ್ದ ವಿನೋದ್‌ ರಾಜ್‌ 2023ರ ಡಿ.10 ರಂದು ಮದುವೆಯಾಗಿದ್ದರು. ಆದರೆ ಡಿ.31ಕ್ಕೆ ಪತಿ ಬೇಡ ಎಂದು ಪತ್ನಿ ಬಿಟ್ಟು ಹೋಗಿದ್ದಳು. ಪ್ರೇಮ ವಿವಾಹವು ಡಿ.31 ನಂತರ ಮಹಿಳಾ ಪೊಲೀಸ್ ಠಾಣಾ ಮೆಟ್ಟೀಲೇರಿತ್ತು. ದಾಂಪತ್ಯದಲ್ಲಿ ಕಲಹ ಉಂಟಾಗಿತ್ತು ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version