ಮಂಗಳೂರು/ಬಳ್ಳಾರಿ: ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ (Second PU Student) ಮತ್ತು ಬಳ್ಳಾರಿಯಲ್ಲಿ ಡಿಎಆರ್ ಕಾನ್‌ಸ್ಟೇಬಲ್ (DAR Constable) ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ (Self Harming).
ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂತ ಫಿಲೋಮಿನಾಸ್ ಕಾಲೇಜಿನ ದ್ವಿತೀಯ ಪಿಯುಸಿ ಓದುತ್ತಿದ್ದ ವೀಕ್ಷಿತ್ (17) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುತ್ತೂರಿನ ಕುರಿಯ ಎಂಬಲ್ಲಿನ ನಿವಾಸಿಯಾಗಿರುವ ವೀಕ್ಷಿತ್ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಯೋತ್ಪಾದನೆ ನಿಗ್ರಹ ತರಬೇತಿಗೆ ಹೆದರಿದರಾ ಕಾನ್‌ಸ್ಟೇಬಲ್?
ಬಳ್ಳಾರಿಯ ಡಿಎಆರ್ ಪೊಲೀಸ್ ಹೆಡ್ ಕ್ವಾರ್ಟರ್ಸ್‌ನಲ್ಲಿ ಪೇದೆ ಪ್ರಕಾಶ್ ನಾಯ್ಕ್ ( 25) ಆತ್ಮಹತ್ಯೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಸಿಸಿಟಿ (ಭಯೋತ್ಪಾದನೆ ನಿಗ್ರಹ ತರಬೇತಿ) ಹೆದರಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅವರು ಕ್ವಾರ್ಟರ್ಸ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ.
ವಿಜಯನಗರದ ಹಗರಿಬೊಮ್ಮನಹಳ್ಳಿಯ ತಾಲೂಕು ಆನೆಕಲ್ ತಾಂಡ ನಿವಾಸಿಯಾಗಿರುವ ಪ್ರಕಾಶ್ ನಾಯ್ಕ್ ಅವರನ್ನು ಸಿಸಿಟಿ ಟ್ರೈನಿಂಗ್‌ಗಾಗಿ ಬೆಂಗಳೂರಿಗೆ ತೆರಳುವಂತೆ ಮೇಲಾಧಿಕಾರಿಗಳು ತಿಳಿಸಿದ್ದರು. ಆದರೆ, ಪ್ರಕಾಶ್ ನಾಯ್ಕ್ ಅವರು ತರಬೇತಿಗೆ ಹೆಸರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
2021ನೇ ಬ್ಯಾಚ್‍ನಲ್ಲಿ ಡಿಎಆರ್ ಪೊಲೀಸ್ ಆಗಿ ನೇಮಕ ಆಗಿದ್ದ ಪ್ರಕಾಶ್ ನಾಯ್ಕ್ ಅವರು ಅವಿವಾಹಿತರಾಗಿದ್ದು, ಇದೀಗ ಮರಣವನ್ನು ಹೊಂದಿದ್ದಾರೆ. ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Self Harming: ಕ್ಲಾಸ್‌ಮೇಟ್‌ಗಳಿಂದಲೇ ಲೈಂಗಿಕ ದೌರ್ಜನ್ಯ, ಅಕ್ಕ-ತಂಗಿ ಆತ್ಮಹತ್ಯೆ; ಇದೆಂಥ ಅನ್ಯಾಯ!
Student Death : 10ನೇ ತರಗತಿ ವಿದ್ಯಾರ್ಥಿ ಚೆಕ್ ಡ್ಯಾಂಗೆ ಹಾರಿ ಆತ್ಮಹತ್ಯೆ
ಹಾಸನ: ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ (10th Standard Student) ವಿದ್ಯಾರ್ಥಿಯೊಬ್ಬ ಚೆಕ್‌ಡ್ಯಾಂಗೆ ಬಿದ್ದು ಆತ್ಮಹತ್ಯೆ (Student death) ಮಾಡಿಕೊಂಡಿದ್ದಾನೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಚೆಕ್‌ಡ್ಯಾಂನಲ್ಲಿ ಘಟನೆ ನಡೆದಿದೆ.
ಚಾಕೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪುರುಷೋತ್ತಮ (16) ಎಂಬ ಬಾಲಕನೇ ಮೃತಪಟ್ಟವನು. ಈತ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಚೆಕ್‌ಡ್ಯಾಂಗೆ ಹೋಗಿ ಅಲ್ಲಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ. ಪುರುಷೋತ್ತಮ ಪಿಳ್ಳೇನಹಳ್ಳಿ ಗ್ರಾಮದ ಕಾಂತರಾಜು-ನಾಗರತ್ನ ಎಂಬುವವರ ಪುತ್ರನಾಗಿದ್ದು, ಓದಿನಲ್ಲಿ ಸಮಸ್ಯೆ ಎದುರಿಸುತ್ತಿದ್ದ ಎನ್ನಲಾಗಿದೆ.