ಸರಣಿ ಅತ್ಯಾಚಾರಿ, ಹಂತರ ರವೀಂದರ್ ಕುಮಾರ್ನಿಗೆ, ಎಂಟು ವರ್ಷಗಳ ಹಿಂದಿನ ಕೇಸ್ವೊಂದರಲ್ಲಿ ದೆಹಲಿ ನ್ಯಾಯಾಲಯ (Delhi Court) ಈಗ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ರವೀಂದರ್ ಕುಮಾರ್ನ ಭಯಾನಕ ಸ್ಟೋರಿಯನ್ನು ಇತ್ತೀಚೆಗೆಷ್ಟೇ ಮಾಧ್ಯಮಗಳು ವರದಿ ಮಾಡಿದ್ದವು. 2008ರಿಂದ 2015ರವರೆಗೆ ಸುಮಾರು 30 ಮಕ್ಕಳ ಮೇಲೆ ಅತ್ಯಾಚಾರ ಮಾಡಿ, ಕೊಂದಿದ್ದ. ಅವನಿಗೆ ಹೆಣ್ಣು-ಗಂಡು ಎಂಬ ಭೇದವಿರಲಿಲ್ಲ. 2015ರಲ್ಲಿ, ದೆಹಲಿಯ ಬೇಗಂಪುರ ಎಂಬಲ್ಲಿ, 6 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ ಕೊಂದಿದ್ದ. ಆ ಕೇಸ್ನಡಿ ರವೀಂದರ್ ಅರೆಸ್ಟ್ ಆಗಿದ್ದ. ಇದೀಗ ಅದೇ ಕೇಸ್ನಲ್ಲಿ ದೆಹಲಿ ನ್ಯಾಯಾಲಯ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಈತನ ಕೇಸ್ನ ವಿಚಾರಣೆ ನಡೆಸಿದ ದೆಹಲಿ ಹೆಚ್ಚುವರಿ ನ್ಯಾಯಾಧೀಶ ಸುನೀಲ್ ಕುಮಾರ್ ‘ರವೀಂದರ್ ಮಾಡಿರುವುದು ರಾಕ್ಷಸೀ ಕೃತ್ಯ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಆರೋಪಿಯು ಶಿಕ್ಷೆ ವಿಚಾರದಲ್ಲಿ ಯಾವುದೇ ವಿನಾಯಿತಿಗೆ ಅರ್ಹನಲ್ಲ’ ಎಂದು ಹೇಳಿದ್ದಾರೆ. 6 ವರ್ಷದ ಬಾಲಕಿ ಹತ್ಯೆ ಕೇಸ್ನ್ನು ಮಾತ್ರ ವಿಚಾರಣೆ ನಡೆಸಿದ್ದ ಈ ನ್ಯಾಯಾಧೀಶರು ಆಕೆಯ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Urfi Javed | ʻಅತ್ಯಾಚಾರಿಗಳ ಮೇಲೆ ದೂರು ನೀಡಿ, ನನ್ನ ಮೇಲಲ್ಲʼ: ಉರ್ಫಿ ಜಾವೇದ್ ಗರಂ ಆಗಿದ್ಯಾಕೆ?
ಬೇಗಂಪುರದಲ್ಲಿ ಹತ್ಯೆಯಾಗಿದ್ದ 6 ವರ್ಷದ ಬಾಲಕಿಯ ಕೊಲೆ ಕೇಸ್ ತನಿಖೆ ಕೈಗೊಂಡ ಪೊಲೀಸರು 2015ರ ಜುಲೈನಲ್ಲಿ ರವೀಂದರ್ನನ್ನು ಅರೆಸ್ಟ್ ಮಾಡಿದ್ದರು. ಆದರೆ ಬಂಧನದ ಬಳಿಕ ಆತ ಬಿಚ್ಚಿಟ್ಟ ಮಾಹಿತಿ ಭಯಂಕರವಾಗಿತ್ತು. ಬರೀ ಈ ಬಾಲಕಿಯನ್ನಷ್ಟೇ ಅಲ್ಲದೆ, ಹಲವಾರು ಹುಡುಗರು/ಹುಡುಗಿಯರು ಸೇರಿ 30 ಮಕ್ಕಳ ಮೇಲೆ ಈತ ಕಾಮತೃಷೆ ತೀರಿಸಿಕೊಂಡು, ಕೊಂದಿದ್ದ. ಅಷ್ಟೂ ಮಕ್ಕಳ ಹೆಸರನ್ನು ಅವನು ಪೊಲೀಸರ ಎದುರು ಹೇಳಿದ್ದ. ದಿನ ರಾತ್ರಿ ಡ್ರಗ್ಸ್ ತೆಗೆದುಕೊಂಡು, ಅಶ್ಲೀಲ ವಿಡಿಯೊಗಳನ್ನು ನೋಡುತ್ತಿದ್ದ. ಬಳಿಕ ಮಕ್ಕಳನ್ನು ಹುಡುಕಿಕೊಂಡು ಊರೂರು ಅಲೆಯುತ್ತಿದ್ದ. ಎಲ್ಲೆಲ್ಲಿ ಕಟ್ಟಡ, ಮನೆ ನಿರ್ಮಾಣ ಕಾರ್ಯ ನಡೆಯುತ್ತಿರುತ್ತದೆಯೋ, ಅಲ್ಲೇ ಅವನು ಹುಡುಕುತ್ತಿದ್ದ. ಅಲ್ಲಿನ ಕಾರ್ಮಿಕರು ನಿದ್ದೆಯಲ್ಲಿದ್ದಾಗ ಅವರ ಮಕ್ಕಳನ್ನು ಮೆಲ್ಲಗೆ ಎಬ್ಬಿಸಿಕೊಂಡು, ಚಾಕಲೇಟ್, ಆಟಿಕೆ ತೋರಿಸಿ ಕರೆದುಕೊಂಡು ಹೋಗುತ್ತಿದ್ದ. ರೇಪ್ ಮಾಡಿ, ಅವರನ್ನು ಕೊಂದು ಹಾಕಿ, ಹೆಣ ಅಲ್ಲಿಯೇ ಬಿಸಾಕಿ ಹೋಗುತ್ತಿದ್ದ. ಕೆಲವೊಮ್ಮೆ ಅವನು ಮಕ್ಕಳನ್ನು ಹುಡುಕಿಕೊಂಡು ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣಿಸಿದ್ದೂ ಉಂಟು. ಆತ ಇದನ್ನೆಲ್ಲ ಹೇಳಿದಾಗ ಪೊಲೀಸರೇ ಬೆಚ್ಚಿಬಿದ್ದಿದ್ದರು. ಆದರೆ ಎಲ್ಲ ಕೇಸ್ಗಳೂ ದಾಖಲಾಗದ ಕಾರಣ ಸದ್ಯ ಇದೊಂದು ಕೇಸ್ ಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ: 30 ಮಕ್ಕಳ ಮೇಲೆ ರೇಪ್ ಮಾಡಿ, ಕೊಂದವನಿಗೆ ಜೀವಾವಧಿ ಶಿಕ್ಷೆ; ಆತ ಪರಭಕ್ಷಕ ಎಂದ ನ್ಯಾಯಾಧೀಶರು