ಕ್ರೈಂ
30 ಮಕ್ಕಳ ಮೇಲೆ ರೇಪ್ ಮಾಡಿ, ಕೊಂದವನಿಗೆ ಜೀವಾವಧಿ ಶಿಕ್ಷೆ; ಇದು ರಾಕ್ಷಸಿ ಕೃತ್ಯ ಎಂದ ನ್ಯಾಯಾಧೀಶರು
2008ರಿಂದ 2015ರವರೆಗೆ ಸುಮಾರು 30 ಮಕ್ಕಳ ಮೇಲೆ ಅತ್ಯಾಚಾರ ಮಾಡಿ, ಕೊಂದಿದ್ದ. ಅವನಿಗೆ ಹೆಣ್ಣು-ಗಂಡು ಎಂಬ ಭೇದವಿರಲಿಲ್ಲ. 2015ರಿಂದಲೂ ಈತ ಜೈಲಿನಿಲ್ಲಿಯೇ ಇದ್ದ.
ಸರಣಿ ಅತ್ಯಾಚಾರಿ, ಹಂತರ ರವೀಂದರ್ ಕುಮಾರ್ನಿಗೆ, ಎಂಟು ವರ್ಷಗಳ ಹಿಂದಿನ ಕೇಸ್ವೊಂದರಲ್ಲಿ ದೆಹಲಿ ನ್ಯಾಯಾಲಯ (Delhi Court) ಈಗ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ರವೀಂದರ್ ಕುಮಾರ್ನ ಭಯಾನಕ ಸ್ಟೋರಿಯನ್ನು ಇತ್ತೀಚೆಗೆಷ್ಟೇ ಮಾಧ್ಯಮಗಳು ವರದಿ ಮಾಡಿದ್ದವು. 2008ರಿಂದ 2015ರವರೆಗೆ ಸುಮಾರು 30 ಮಕ್ಕಳ ಮೇಲೆ ಅತ್ಯಾಚಾರ ಮಾಡಿ, ಕೊಂದಿದ್ದ. ಅವನಿಗೆ ಹೆಣ್ಣು-ಗಂಡು ಎಂಬ ಭೇದವಿರಲಿಲ್ಲ. 2015ರಲ್ಲಿ, ದೆಹಲಿಯ ಬೇಗಂಪುರ ಎಂಬಲ್ಲಿ, 6 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ ಕೊಂದಿದ್ದ. ಆ ಕೇಸ್ನಡಿ ರವೀಂದರ್ ಅರೆಸ್ಟ್ ಆಗಿದ್ದ. ಇದೀಗ ಅದೇ ಕೇಸ್ನಲ್ಲಿ ದೆಹಲಿ ನ್ಯಾಯಾಲಯ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಈತನ ಕೇಸ್ನ ವಿಚಾರಣೆ ನಡೆಸಿದ ದೆಹಲಿ ಹೆಚ್ಚುವರಿ ನ್ಯಾಯಾಧೀಶ ಸುನೀಲ್ ಕುಮಾರ್ ‘ರವೀಂದರ್ ಮಾಡಿರುವುದು ರಾಕ್ಷಸೀ ಕೃತ್ಯ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಆರೋಪಿಯು ಶಿಕ್ಷೆ ವಿಚಾರದಲ್ಲಿ ಯಾವುದೇ ವಿನಾಯಿತಿಗೆ ಅರ್ಹನಲ್ಲ’ ಎಂದು ಹೇಳಿದ್ದಾರೆ. 6 ವರ್ಷದ ಬಾಲಕಿ ಹತ್ಯೆ ಕೇಸ್ನ್ನು ಮಾತ್ರ ವಿಚಾರಣೆ ನಡೆಸಿದ್ದ ಈ ನ್ಯಾಯಾಧೀಶರು ಆಕೆಯ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Urfi Javed | ʻಅತ್ಯಾಚಾರಿಗಳ ಮೇಲೆ ದೂರು ನೀಡಿ, ನನ್ನ ಮೇಲಲ್ಲʼ: ಉರ್ಫಿ ಜಾವೇದ್ ಗರಂ ಆಗಿದ್ಯಾಕೆ?
ಬೇಗಂಪುರದಲ್ಲಿ ಹತ್ಯೆಯಾಗಿದ್ದ 6 ವರ್ಷದ ಬಾಲಕಿಯ ಕೊಲೆ ಕೇಸ್ ತನಿಖೆ ಕೈಗೊಂಡ ಪೊಲೀಸರು 2015ರ ಜುಲೈನಲ್ಲಿ ರವೀಂದರ್ನನ್ನು ಅರೆಸ್ಟ್ ಮಾಡಿದ್ದರು. ಆದರೆ ಬಂಧನದ ಬಳಿಕ ಆತ ಬಿಚ್ಚಿಟ್ಟ ಮಾಹಿತಿ ಭಯಂಕರವಾಗಿತ್ತು. ಬರೀ ಈ ಬಾಲಕಿಯನ್ನಷ್ಟೇ ಅಲ್ಲದೆ, ಹಲವಾರು ಹುಡುಗರು/ಹುಡುಗಿಯರು ಸೇರಿ 30 ಮಕ್ಕಳ ಮೇಲೆ ಈತ ಕಾಮತೃಷೆ ತೀರಿಸಿಕೊಂಡು, ಕೊಂದಿದ್ದ. ಅಷ್ಟೂ ಮಕ್ಕಳ ಹೆಸರನ್ನು ಅವನು ಪೊಲೀಸರ ಎದುರು ಹೇಳಿದ್ದ. ದಿನ ರಾತ್ರಿ ಡ್ರಗ್ಸ್ ತೆಗೆದುಕೊಂಡು, ಅಶ್ಲೀಲ ವಿಡಿಯೊಗಳನ್ನು ನೋಡುತ್ತಿದ್ದ. ಬಳಿಕ ಮಕ್ಕಳನ್ನು ಹುಡುಕಿಕೊಂಡು ಊರೂರು ಅಲೆಯುತ್ತಿದ್ದ. ಎಲ್ಲೆಲ್ಲಿ ಕಟ್ಟಡ, ಮನೆ ನಿರ್ಮಾಣ ಕಾರ್ಯ ನಡೆಯುತ್ತಿರುತ್ತದೆಯೋ, ಅಲ್ಲೇ ಅವನು ಹುಡುಕುತ್ತಿದ್ದ. ಅಲ್ಲಿನ ಕಾರ್ಮಿಕರು ನಿದ್ದೆಯಲ್ಲಿದ್ದಾಗ ಅವರ ಮಕ್ಕಳನ್ನು ಮೆಲ್ಲಗೆ ಎಬ್ಬಿಸಿಕೊಂಡು, ಚಾಕಲೇಟ್, ಆಟಿಕೆ ತೋರಿಸಿ ಕರೆದುಕೊಂಡು ಹೋಗುತ್ತಿದ್ದ. ರೇಪ್ ಮಾಡಿ, ಅವರನ್ನು ಕೊಂದು ಹಾಕಿ, ಹೆಣ ಅಲ್ಲಿಯೇ ಬಿಸಾಕಿ ಹೋಗುತ್ತಿದ್ದ. ಕೆಲವೊಮ್ಮೆ ಅವನು ಮಕ್ಕಳನ್ನು ಹುಡುಕಿಕೊಂಡು ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣಿಸಿದ್ದೂ ಉಂಟು. ಆತ ಇದನ್ನೆಲ್ಲ ಹೇಳಿದಾಗ ಪೊಲೀಸರೇ ಬೆಚ್ಚಿಬಿದ್ದಿದ್ದರು. ಆದರೆ ಎಲ್ಲ ಕೇಸ್ಗಳೂ ದಾಖಲಾಗದ ಕಾರಣ ಸದ್ಯ ಇದೊಂದು ಕೇಸ್ ಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ: 30 ಮಕ್ಕಳ ಮೇಲೆ ರೇಪ್ ಮಾಡಿ, ಕೊಂದವನಿಗೆ ಜೀವಾವಧಿ ಶಿಕ್ಷೆ; ಆತ ಪರಭಕ್ಷಕ ಎಂದ ನ್ಯಾಯಾಧೀಶರು
ಕ್ರೈಂ
ಉತ್ತರ ಪ್ರದೇಶ ಕೋರ್ಟ್‌ನಲ್ಲೇ ರಕ್ತಪಾತ; ಮುಖ್ತಾರ್ ಅನ್ಸಾರಿ ಆಪ್ತನಾದ ಗ್ಯಾಂಗ್‌ಸ್ಟರ್ ಸಂಜೀವ್ ಜೀವಾ ಹತ್ಯೆ
ಉತ್ತರ ಪ್ರದೇಶದ ರಾಜಕಾರಣಿ ಮುಖ್ತಾರ್ ಅನ್ಸಾರಿ ಹಾಗೂ ಸಂಜೀವ್ ಜೀವಾ ಗ್ಯಾಂಗ್‌ಸ್ಟರ್‌ಗಳಾಗಿದ್ದು, ಕ್ರಿಮಿನಲ್ ಕೇಸೊಂದಕ್ಕೆ ಸಂಬಂಧಿಸಿದಂತೆ ಸಂಜೀವ್ ಜೀವಾನನ್ನು ಲಖನೌ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಇದೇ ವೇಳೆ ಗುಂಡಿನ ದಾಳಿ ನಡೆದಿದೆ.
ಲಖನೌ: ಉತ್ತರ ಪ್ರದೇಶದ ಕುಖ್ಯಾತ ಗ್ಯಾಂಗ್‌ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿಗೆ ನ್ಯಾಯಾಲಯವು ಕೆಲ ದಿನಗಳ ಹಿಂದಷ್ಟೇ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ, ಉತ್ತರ ಪ್ರದೇಶದ ಕೋರ್ಟ್ ಆವರಣದಲ್ಲಿಯೇ ಮುಖ್ತಾರ್ ಅನ್ಸಾರಿ ಆಪ್ತನೂ ಆದ ಗ್ಯಾಂಗ್‌ಸ್ಟರ್ ಸಂಜೀವ್ ಜೀವಾನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿಯಲ್ಲಿ ಒಬ್ಬ ಬಾಲಕಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿವೆ.
ಬಿಜೆಪಿ ಶಾಸಕ ಬ್ರಹ್ಮದತ್ ದ್ವಿವೇದಿ ಅವರ ಹತ್ಯೆ ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿ ಹಾಗೂ ಅನ್ಸಾರಿ ಆಪ್ತ ಸಂಜೀವ್ ಮಹೇಶ್ವರಿ ಜೀವಾ ಆರೋಪಿಗಳಾಗಿದ್ದಾರೆ. ಸಂಜೀವ್ ಜೀವಾ ಕೂಡ ಶೂಟರ್ ಆಗಿದ್ದು, ಕ್ರಿಮಿನಲ್ ಕೇಸೊಂದರ ವಿಚಾರಣೆ ಹಿನ್ನೆಲೆಯಲ್ಲಿ ಆತನನ್ನು ಲಖನೌ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಲಾಯಿತು. ಇದೇ ವೇಲೆ, ಅಪರಿಚಿತ ಶೂಟರ್ ಒಬ್ಬ ಸಂಜೀವ್ ಜೀವಾ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿಯಲ್ಲಿ ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ.
ದಾಳಿ ಬಳಿಕ ಬಿಗುವಿನ ವಾತಾವರಣ
#WATCH | Outside visuals from Uttar Pradesh's Lucknow Civil Court where gangster Sanjeev Jeeva was shot by unknown miscreants a while ago. pic.twitter.com/LH9pSLyh4l
— ANI UP/Uttarakhand (@ANINewsUP) June 7, 2023
ಲಾಯರ್ ವೇಷದಲ್ಲಿ ಬಂದು ದಾಳಿ
ಲಖನೌ ನ್ಯಾಯಾಲಯಕ್ಕೆ ಗ್ಯಾಂಗ್‌ಸ್ಟರ್ ಸಂಜೀವ್ ಜೀವಾನನ್ನು ಹಾಜರುಪಡಿಸಲಾಗುತ್ತದೆ ಎಂದು ತಿಳಿದ ದುಷ್ಕರ್ಮಿಗಳು ವಕೀಲರ ವೇಷದಲ್ಲಿ ಕೋರ್ಟ್ ಆವರಣ ಪ್ರವೇಶಿಸಿದ್ದಾರೆ. ವಿಚಾರಣೆಗೆ ಹಾಜರುಪಡಿಸುವ ವೇಳೆಯೇ ವಕೀಲರ ವೇಷದಲ್ಲಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿ ನಡೆಯುತ್ತಲೇ ಜನ ಗಲಿಬಿಲಿಗೊಂಡು ಓಡಿದ್ದಾರೆ. ಇದರಿಂದಾಗಿ ಕೋರ್ಟ್ ಆವರಣದಲ್ಲಿ ಕೆಲ ಗಂಟೆವರೆಗೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇನ್ನು, ಸಂಜೀವ್ ಜೀವಾನ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿರೋಧಿ ಗ್ಯಾಂಗ್‌ನವರೇ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
32 ವರ್ಷಗಳ ಹಿಂದಿನ ಅವದೇಶ್ ರೈ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗಸ್ಟರ್ ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು ಕೆಲ ದಿನಗಳ ಹಿಂದಷ್ಟೇ ದೋಷಿ ಎಂದು ವಾರಾಣಸಿಯ ಕೋರ್ಟ್ ಹೇಳಿದೆ. ತೀರ್ಪು ನೀಡಿದ ವಾರಾಣಸಿ ಕೋರ್ಟ್, ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.
ಇದನ್ನೂ ಓದಿ: Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್ ರಾಜಕಾರಣಿ ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ, ಇನ್ನೂ 20 ಕೇಸ್ ಬಾಕಿ!
ಅನ್ಸಾರಿ ಅವರು 1991ರಲ್ಲಿ ರಾಜಕೀಯವಾಗಿ ಪ್ರಾಮುಖ್ಯತೆ ಪಡೆಯುತ್ತಿರುವಾಗಲೇ, ಅವರ ವಿರುದ್ಧ ಕಾಂಗ್ರೆಸ್ ಮುಖಂಡರ ಕೊಲೆ ಆರೋಪವನ್ನು ಹೊರಿಸಲಾಗಿತ್ತು. 1991 ಆಗಸ್ಟ್ 3 ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಅಜಯ್ ರೈ ಅವರ ಸಹೋದರ ಅವಧೇಶ್ ರೈ ಅವರನ್ನು ವಾರಣಾಸಿಯಲ್ಲಿ ರೈ ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಲ ಮಾಡಲಾಗಿತ್ತು. ಈ ಕೊಲೆ ನಡೆದಾಗ ಮುಕ್ತಾರ್ ಅನ್ಸಾರಿ ಅವರು ಶಾಸಕರಾಗಿರಲಿಲ್ಲ. ಈ ಕೊಲೆ ಪ್ರಕರಣದ ಎಫ್‌ಐಆರ್‌ನಲ್ಲಿ ಮುಖ್ತಾರ್ ಅನ್ಸಾರಿ, ಭೀಮ್ ಸಿಂಗ್, ಮಾಜಿ ಶಾಸಕ ಅಬ್ದುಲ್ ಕಲೀಂ ಮತ್ತು ಇತರ ಇಬ್ಬರನ್ನು ಹೆಸರಿಸಲಾಗಿತ್ತು.
ಕರ್ನಾಟಕ
Soldiers Fall ill: ಕ್ಯಾಂಪ್‌ನಲ್ಲಿ ಊಟ ಸೇವಿಸಿ 35 ಮಂದಿ ಸೈನಿಕರು ಅಸ್ವಸ್ಥ
Soldiers Fall ill: ಸಕಲೇಶಪುರ ತಾಲೂಕಿನ ಕುಡುಗರಹಳ್ಳಿಯ ಕ್ಯಾಂಪ್‌ನಲ್ಲಿ ಮಧ್ಯಾಹ್ನದ ಊಟ ಸೇವಿಸಿದ ಬಳಿಕ ಸೈನಿಕರು ಅಸ್ವಸ್ಥಗೊಂಡಿದ್ದಾರೆ. ವಿಷಾಹಾರ ಸೇವನೆಯಿಂದ ಸೈನಿಕರು ಅಸ್ವಸ್ಥರಾಗಿರುವ ಶಂಕೆ ವ್ಯಕ್ತವಾಗಿದೆ.
ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಡುಗರಹಳ್ಳಿಯ ಕ್ಯಾಂಪ್‌ನಲ್ಲಿ ಬುಧವಾರ ಮಧ್ಯಾಹ್ನದ ಊಟ ಸೇವಿಸಿದ ಬಳಿಕ 35 ಸೈನಿಕರು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಡುಗರಹಳ್ಳಿ ಬಳಿಯ ಕ್ಯಾಂಪ್‌ಗೆ ಸೈನಿಕರು ಚಾಲನಾ ತರಬೇತಿಗೆ ಬಂದಿದ್ದರು. ಮಧ್ಯಾಹ್ನ ಕ್ಯಾಂಪ್‌ನಲ್ಲೇ ತಯಾರಾದ ಆಹಾರ ಸೇವಿಸಿದ ಬಳಿಕ 35 ಸೈನಿಕರು ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಇದನ್ನೂ ಓದಿ | Crime News : ಹಾಸ್ಟೆಲ್‌ನಲ್ಲೇ ಯುವತಿಯ ಅತ್ಯಾಚಾರ, ಕೊಲೆ; ಹಳಿ ಮೇಲೆ ಪತ್ತೆಯಾಯ್ತು ಮತ್ತೊಂದು ಶವ!
ವಿಷಾಹಾರ ಸೇವನೆಯಿಂದ (Food poisoning) ಸೈನಿಕರು ಅಸ್ವಸ್ಥರಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಸೈನಿಕರ ಆರೋಗ್ಯ ವಿಚಾರಿಸಿದ್ದಾರೆ.
ಕರ್ನಾಟಕ
Road Accident: ಅಣ್ಣನೊಂದಿಗೆ ಐಸ್‌ಕ್ರೀಮ್ ತರಲು ಹೋದ ಬಾಲಕ, ಟ್ರ್ಯಾಕ್ಟರ್ ಅಡಿ ಬಿದ್ದು ಸಾವು
Road Accident: ವಾಟರ್ ಟ್ರ್ಯಾಕ್ಟರ್ ಹಿಂಬದಿ ಚಕ್ರ ಹರಿದು ಬಾಲಕನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎದೆ ಝಲ್ ಎನ್ನಿಸುವಂತಿದೆ.
ಆನೇಕಲ್/ಕೊಪ್ಪಳ: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಸಿ.ಕೆ ಪಾಳ್ಯದಲ್ಲಿ ವಾಟರ್ ಟ್ರ್ಯಾಕ್ಟರ್ ಹರಿದು ಬಾಲಕ ಮೃತಪಟ್ಟಿರುವ (Road Accident) ದುರ್ಘಟನೆ ನಡೆದಿದೆ. ಭುವನ್ (4) ಮೃತ ದುರ್ದೈವಿ.
ಭುವನ್ ತನ್ನ ಅಣ್ಣನೊಂದಿಗೆ ಐಸ್ ಕ್ರೀಮ್ ತರಲು ಬೇಕರಿಗೆ ಹೋಗುತ್ತಿದ್ದಾಗ ಈ ಅವಘಡ ನಡೆದಿದೆ. ಸಿ.ಕೆ ಪಾಳ್ಯದ ಕಿರಿದಾದ ರಸ್ತೆಯಲ್ಲಿ ಹೋಗುವಾಗ ಹೀಗಾಗಿದೆ. ರಸ್ತೆ ಬದಿಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಮಣ್ಣು ಹಾಕಲಾಗಿತ್ತು. ಈ ರಸ್ತೆಯಲ್ಲಿ ಭುವನ್ ತನ್ನ ಅಣ್ಣನ ಜತೆಗೆ ನಡೆದು ಹೋಗುತ್ತಿದ್ದಾಗ, ಎದುರಿಗೆ ವಾಟರ್ ಟ್ರ್ಯಾಕ್ಟರ್ ಬಂದಿದೆ. ಮಣ್ಣಿನ ಮೇಲೆ ನಡೆದು ಹೋಗಿ ಮತ್ತೆ ರಸ್ತೆಗೆ ಬಂದಾಗ ಟ್ರ್ಯಾಕ್ಟರ್‌ನ ಹಿಂಬದಿ ಚಕ್ರದಡಿ ಬಿದ್ದಿದ್ದಾನೆ. ಇದ್ಯಾವುದೂ ಅರಿಯದೆ ಚಾಲಕ ಟ್ರ್ಯಾಕ್ಟರ್ ಅನ್ನು ಬಾಲಕನ ಮೇಲೆ ಹರಿಸಿದ್ದಾನೆ.
ಜೂನ್ 6ರ ಬೆಳಗ್ಗೆ 9.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತವಾಗುತ್ತಿದ್ದಂತೆ ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆಸ್ಪತ್ರೆಗೆ ಸೇರಿಸುವ ಮುನ್ನವೇ ಬಾಲಕ ಉಸಿರು ಚೆಲ್ಲಿದ್ದಾನೆ. ಇನ್ನು ಎರಡು ದಿನದಲ್ಲಿ ಶಾಲೆಗೆ ಹೋಗಬೇಕಾಗಿತ್ತು. ಖುಷಿ ಖುಷಿಯಾಗಿ ಓಡಾಡಿಕೊಂಡಿದ್ದ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಮಗನ ಅಗಲಿಕೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಟ್ರ್ಯಾಕ್ಟರ್ ಬಿಟ್ಟು ಪರಾರಿಯಾದ ಚಾಲಕ
ಟಿ. ಚಿನ್ನಣ್ಣರವರಿಗೆ ಸೇರಿದ ನೀರಿನ ಟ್ರ್ಯಾಕ್ಟರ್ ಎಂದು ತಿಳಿದು ಬಂದಿದೆ. ಕುಡಿದ ಮತ್ತಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡಿದ್ದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಅಪಘಾತ ಬಳಿಕ ವಾಹನವನ್ನು ಅಲ್ಲೆ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅತಿ ವೇಗ ತಂದ ಆಪತ್ತು; ಬೈಕ್ ಸವಾರ ಮೃತ್ಯು
ಬೈಕ್ ಅಪಘಾತದಲ್ಲಿ ಸವಾರನೊಬ್ಬ ಉಸಿರು ಚೆಲ್ಲಿರುವ ಘಟನೆ ಕೊಪ್ಪಳ ತಾಲೂಕಿನ ಜಬ್ಬಲಗುಡ್ಡ ಗ್ರಾಮದಲ್ಲಿ ನಡೆದಿದೆ. ಅಲ್ಲಾಸಾಬ (31) ಮೃತ ದುರ್ದೈವಿ.
ಹೊಸಪೇಟೆ ತಾಲೂಕಿನ ಡಾಣಾಪುರದ ಗ್ರಾಮದ ಅಲ್ಲಾಸಾಬ, ಪತ್ನಿ ಹಾಗೂ ಚಿಕ್ಕ ಮಗುವಿನೊಂದಿಗೆ ತಾವರಗೇರಿಗೆ ಉರುಸಿಗೆ ಹೋಗಿದ್ದರು. ವಾಪಸ್ಸು ಗ್ರಾಮಕ್ಕೆ ಮರಳುವಾಗ ಬೈಕ್ ಸ್ಕಿಡ್ ಆಗಿದ್ದು, ಏಕಾಏಕಿ ರಸ್ತೆಗೆ ಎಗರಿ ಬಿದ್ದಿದ್ದಾರೆ. ರಭಸವಾಗಿ ಬಿದ್ದ ಪರಿಣಾಮ ಅಲ್ಲಾಸಾಬ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Mangalore News: ಮಂಗಳೂರು ನೈತಿಕ ಪೊಲೀಸ್‌ಗಿರಿ ಪ್ರಕರಣ; ಐವರ ವಿರುದ್ಧ ಕೇಸ್ ದಾಖಲು
ಬೈಕ್‌ನಲ್ಲಿದ್ದ ಅಲ್ಲಾಸಾಬ ಅವರ ಪತ್ನಿ, ಮಗು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಅವರಿಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅತಿ ವೇಗ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕ್ರೈಂ
Crime News : ಹಾಸ್ಟೆಲ್‌ನಲ್ಲೇ ಯುವತಿಯ ಅತ್ಯಾಚಾರ, ಕೊಲೆ; ಹಳಿ ಮೇಲೆ ಪತ್ತೆಯಾಯ್ತು ಮತ್ತೊಂದು ಶವ!
ಹಾಸ್ಟೆಲ್‌ನಲ್ಲಿ ವಾಸವಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ (Crime News) ನಡೆದಿದೆ.
ಮುಂಬೈ: ಹಾಸ್ಟೆಲ್‌ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಯುವತಿ ಅಲ್ಲೇ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದಾಳೆ. ಈ ಭಯಾನಕ ಘಟನೆ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಸರ್ಕಾರಿ ಮಹಿಳಾ ಹಾಸ್ಟೆಲ್‌ನಲ್ಲಿ ನಡೆದಿದೆ. ಈ ಘಟನೆ ನಡೆದ ಕೆಲ ಗಂಟೆಗಳಲ್ಲೇ ಹತ್ತಿರದ ರೈಲ್ವೆ ಹಳಿ ಬಳಿ ಮತ್ತೊಂದು ಶವ (Crime News) ಪತ್ತೆಯಾಗಿದೆ.
ಅಕೋಲಾ ಮೂಲದ 18 ವರ್ಷದ ಯುವತಿ ಈ ಸರ್ಕಾರಿ ಹಾಸ್ಟೆಲ್‌ನಲ್ಲಿ ವಾಸವಿದ್ದಳು. ಎರಡನೇ ವರ್ಷದ ಪಾಲಿಟೆಕ್ನಿಕ್ ಅಭ್ಯಾಸ ಮಾಡುತ್ತಿದ್ದ ಆಕೆ ಹಾಸ್ಟೆಲ್‌ನ ನಾಲ್ಕನೇ ಮಹಡಿಯಲ್ಲಿದ್ದು, ಆಕೆಯೊಂದಿಗೆ ಇನ್ನೊಬ್ಬ ಯುವತಿ ವಾಸವಿದ್ದಳು. ಆ ಯುವತಿ ಊರಿಗೆ ಹೋಗಿದ್ದರಿಂದಾಗಿ ಈಗ ಕೊಲೆಯಾದ ಯುವತಿ ಒಬ್ಬಳೇ ರೂಮಿನಲ್ಲಿದ್ದಳು. ಸೋಮವಾರ ರಾತ್ರಿ ಅದೇ ಹಾಸ್ಟೆಲ್‌ನ ಕೆಳ ಮಹಡಿಯಲ್ಲಿ ವಾಸವಿದ್ದ ಆಕೆಯ ಸ್ನೇಹಿತೆ ಆಕೆಯನ್ನು ರೂಮಿಗೆ ಕರೆದಿದ್ದಳು. ಪೂರ್ತಿ ಮಹಡಿಯಲ್ಲಿ ನೀನೊಬ್ಬಳೇ ಇರುವುದು ಸರಿಯಲ್ಲ, ಹಾಗಾಗಿ ನನ್ನೊಂದಿಗೆ ನನ್ನ ರೂಮಿನಲ್ಲಿರುವ ಎಂದಿದ್ದಳು. ಅದಕ್ಕೆ ಒಪ್ಪದ ಯುವತಿ ಒಬ್ಬಂಟಿಯಾಗಿ ರೂಮಿನಲ್ಲಿರುವುದಾಗಿ ಹೇಳಿದ್ದಳು.
ಇದನ್ನೂ ಓದಿ: Monsoon Flood Safety Tips: ಮುಂಗಾರು ಮಳೆಗೆ ಕ್ಷಣಗಣನೆ; ಪ್ರವಾಹದ ಬಗ್ಗೆ ಇರಲಿ ಎಚ್ಚರ
ನಂತರ ಮಂಗಳವಾರ ಸಂಜೆಯಾದರೂ ಈ ಯುವತಿ ಎಲ್ಲೂ ಪತ್ತೆಯಾಗಿರಲಿಲ್ಲ. ಅನುಮಾನ ಬಂದ ಹಾಸ್ಟೆಲ್ ಅಧಿಕಾರಿಗಳು ರೂಮಿನ ಬಳಿ ಹೋಗಿ ನೋಡಿದ್ದಾರೆ. ರೂಮು ಹೊರಗಿನಿಂದ ಲಾಕ್ ಆಗಿತ್ತು. ಕಿಟಕಿಯಿಂದ ಇಣುಕಿ ನೋಡಿದಾಗ ಯುವತಿ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದ್ದು, ಪೊಲೀಸರು ಬಂದು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಆಗ ಅಲ್ಲಿ ಯುವತಿಯ ಕೊರಳಿಗೆ ದುಪ್ಪಟ್ಟದಿಂದ ಸುತ್ತಿ ಕೊಲೆ ಮಾಡಿರುವುದು ಕಂಡುಬಂದಿದೆ.
ಈ ಕೃತ್ಯ ಮಾಡಿರುವ ಬಗ್ಗೆ ಹಲವಾರು ಅನುಮಾನಗಳು ಹರಿದಾಡುತ್ತಿವೆ. ಹಾಸ್ಟೆಲ್‌ಗೆ ಒಟ್ಟು ಮೂವರು ಕಾವಲುಗಾರರಿದ್ದಾರೆ. ಅದರಲ್ಲಿ ಉತ್ತರ ಪ್ರದೇಶ ಮೂಲದ ಪ್ರಕಾಶ್ ಕನೋಜಿಯಾ ಕೂಡ ಒಬ್ಬ. ಹಾಸ್ಟೆಲ್‌ನ ಲಾಂಡರಿ ಬಾಯ್ ಆಗಿಯೂ ಕೆಲಸ ಮಾಡುವ ಆತ ಮಂಗಳವಾರ ಮುಂಜಾನೆ 4 ಗಂಟೆ ಹೊತ್ತಿಗೆ ಹಾಸ್ಟೆಲ್‌ನಿಂದ ಹೊರ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆತನಿಗಾಗಿ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದರು. ಬಳಿಕ ಆತನ ಶವ ಚರಣಿ ರೋಡ್ ರೈಲ್ವೆ ನಿಲ್ದಾಣದ ಬಳಿಯ ರೈಲು ಹಳಿಯ ಮೇಲೆ ಪತ್ತೆಯಾಗಿದೆ. ಯುವತಿಯನ್ನು ಅತ್ಯಾಚಾರ ಮಾಡಿ, ಕೊಲೆ ನಡೆಸಿ ನಂತರ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸದ್ಯ ಪೊಲೀಸರು ಲೆಕ್ಕಾಚಾರ ಹಾಕಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಆಗಬೇಕಿದೆ.
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ10 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ12 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಕರ್ನಾಟಕ24 hours ago
Fraud Case: ಬೆಳದಿಂಗಳ ಬಾಲೆಯ ಮೋಹಕ್ಕೆ ಬಿದ್ದರೇ ಸ್ವಾಮೀಜಿ? 35 ಲಕ್ಷ ರೂಪಾಯಿ ದೋಖಾ!
-
ಅಂಕಣ23 hours ago
ವಿಧಾನಸೌಧ ರೌಂಡ್ಸ್: ರೌಂಡ್ ಟೇಬಲ್ ಸ್ನೇಹಿತರು ಮತ್ತು ವಿಧಾನಸೌಧದಲ್ಲಿ ಬದಲಾಗದ 40 % ಬ್ರಾಂಡ್!
-
ಉತ್ತರ ಕನ್ನಡ20 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ15 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ22 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು