ಅತ್ಯಾಚಾರಕ್ಕೆ (Sexual Assault) ಒಳಗಾದ ಬಾಲಕಿ (girl) ಗಂಡು ಮಗುವಿಗೆ (boy baby) ಜನ್ಮ ನೀಡಿ ಮಗುವನ್ನು ತ್ಯಜಿಸುತ್ತಾಳೆ. ಬಳಿಕ ತಾಯಿಯನ್ನು ಹುಡುಕಿಕೊಂಡು ಬಂದ ಮಗ ತಾಯಿಯೊಂದಿಗೆ ವಾಸ ಮಾಡುತ್ತಾನೆ. ಸುಮಾರು 30 ವರ್ಷಗಳ ತಮಗಾದ ಅನ್ಯಾಯಕ್ಕೆ ಕಾರಣರಾದ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಅಟ್ಟುತ್ತಾನೆ. ಇದು ಯಾವುದೋ ಸಿನಿಮಾ ಕಥೆಯಲ್ಲ. ಉತ್ತರ ಪ್ರದೇಶದ (uttarpradesh) ಹಳ್ಳಿಯೊಂದರಲ್ಲಿ ನಡೆದ ನೈಜ್ಯ ಘಟನೆ.
ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಮಹಿಳೆಯೊಬ್ಬಳ ಕಥೆ. ತಾಯಿ ತನ್ನ ಮಗನೊಂದಿಗೆ ಮೂರು ದಶಕಗಳ ಬಳಿಕ ನ್ಯಾಯಕ್ಕಾಗಿ ಹೋರಾಡಿದ ಘಟನೆ ಇದು.
ಹರ್ದೋಯ್ ಜಿಲ್ಲೆಯ ಹಳ್ಳಿಯೊಂದರ ಬಡ ಕುಟುಂಬದ ಐವರು ಒಡಹುಟ್ಟಿದವರಲ್ಲಿ ಒಬ್ಬರಾದ ಮಹಿಳೆಯನ್ನು ಓದಲು ಶಹಜಹಾನ್‌ಪುರದಲ್ಲಿರುವ ತನ್ನ ಅಕ್ಕನ ಮನೆಗೆ ಕಳುಹಿಸಲಾಯಿತು. ಆಕೆಯ ತಂದೆ ಕೃಷಿ ಕಾರ್ಮಿಕರಾಗಿದ್ದು, ಕುಟುಂಬದ ಖರ್ಚುಗಳನ್ನು ಭರಿಸಲು ಕಷ್ಟ ಪಡುತ್ತಿದ್ದರು.
ಶಹಜಹಾನ್‌ಪುರಕ್ಕೆ ಬಂದ ಬಾಲಕಿಯನ್ನು ಹೊಸ ಶಾಲೆಗೆ ಸೇರಿಸಲಾಯಿತು. ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಕೆಲವು ಜನರ ಗುಂಪು ದಾರಿಯಲ್ಲಿ ಹಾದುಹೋಗುವ ಹುಡುಗಿಯರನ್ನು ಚುಡಾಯಿಸುತ್ತಿದ್ದರು. ಅವರ ಕೀಟಲೆ ಹೆಚ್ಚಾದಾಗ ಬಾಲಕಿ ತನ್ನ ಸಹೋದರಿಗೆ ವಿಷಯ ತಿಳಿಸಿದಳು. ಆಕೆಯ ಸೋದರ ಮಾವ ಮತ್ತು ಅವಳು ಶಾಲೆಯ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದಾಗ ಎಲ್ಲವೂ ಸರಿಯಾಗಿದೆ ಎಂದು ಭರವಸೆ ನೀಡಿದರು.
ಆದರೂ ಅವರ ಕಿರುಕುಳ ನಿಲ್ಲಲಿಲ್ಲ. ಅಶಿಸ್ತಿನ ಕೆಲವು ಹುಡುಗರು ಆಕೆಯನ್ನು ಹಿಂಬಾಲಿಸಲು ಪ್ರಾರಂಭಿಸಿದರು. ಅವಳ ವಿಳಾಸವನ್ನು ಕಂಡುಹಿಡಿದರು. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಅವಳ ಸೋದರ ಮಾವ ಕರ್ತವ್ಯ ನಿಮಿತ್ತ ದೂರದೂರದ ಪ್ರದೇಶಗಳಿಗೆ ಹೋಗುತ್ತಿದ್ದರು. ಅವಳ ಸಹೋದರಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು.
ಒಂದು ದಿನ ಅಕ್ಕ ತಂಗಿ ಇಬ್ಬರು ಮನೆಯಲ್ಲಿ ಇದ್ದಾಗ ಇಬ್ಬರು ಮನೆಗೆ ನುಗ್ಗಿದರು. ಸಹೋದರಿ ಮೇಲೆ ಹಲ್ಲೆ ನಡೆಸಿ ಆಕೆಯ ಎದುರೇ ತಂಗಿಯ ಮೇಲೆ ಅತ್ಯಾಚಾರ ನಡೆಸಿದರು. ಈ ಕುರಿತು ಬಾಯಿಬಿಟ್ಟರೆ ತಂಗಿ ಮತ್ತು ಆಕೆಯ ಪತಿಯನ್ನು ಕೊಲ್ಲುವುದಾಗಿ ಬೆದರಿಸಿದರು. ಬಾಲಕಿ ತನಗಾದ ಅನ್ಯಾಯವನ್ನು ಕೆಟ್ಟ ಕನಸು ಎಂದು ಮರೆಯಲು ಪ್ರಯತ್ನಿಸಿದರೂ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿಗಳಿಬ್ಬರು ಮತ್ತೆ ಮರಳಿ ಬರುವುದು ವಾಡಿಕೆಯಾಯಿತು.
ಈ ನಡುವೆ ಬಾಲಕಿ ತೀವ್ರವಾಗಿ ಅನಾರೋಗ್ಯಕ್ಕೆ ಈಡಾದಾಗ ಸಹೋದರಿ ವೈದ್ಯರ ಬಳಿಗೆ ಕರೆದೊಯ್ದರು. ಆಗ ಬಾಲಕಿ ಗರ್ಭಿಣಿಯಾಗಿರುವುದು ತಿಳಿಯಿತು. ಬಳಿಕ ಅವರು ತಾಯಿಗೆ ಎಲ್ಲ ವಿಷಯವನ್ನು ತಿಳಿಸಿದರು.
ಬಾಲಕಿಯ ಸೋದರ ಮಾವ ಮತ್ತು ಸಹೋದರಿ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿದರು. ಅವರಲ್ಲಿ ಒಬ್ಬ ಪೊಲೀಸರನ್ನು ಸಂಪರ್ಕಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಆ ರಾತ್ರಿಯೇ ಮನೆ ಖಾಲಿ ಮಾಡಿ ಬೇರೆ ನಗರಕ್ಕೆ ಹೊರಟರು.
ಗರ್ಭಾವಸ್ಥೆಯು ಮುಕ್ತಾಯದ ಹಂತದಲ್ಲಿ ಇದ್ದುದರಿಂದ ಹೆರಿಗೆ ಮಾಡಿಸಲಾಯಿತು. ಮಗುವಿನ ಬಗ್ಗೆ ಕೇಳಿದರೆ ಇಡೀ ಕುಟುಂಬ ಆತ್ಮಹತ್ಯೆ ಮಾಡುವುದಾಗಿ ಬಾಲಕಿಗೆ ತಾಯಿ ಹೇಳಿದರು. ಹೀಗಾಗಿ ಬಾಲಕಿ ತಾಯಿಯೊಂದಿಗೆ ಮಗುವಿಲ್ಲದೆ ಹಳ್ಳಿಗೆ ಮರಳಿ ಬಂದಳು.
ಗ್ರಾಮಸ್ಥರಿಂದ ಬಹಿಷ್ಕಾರ
ಹಳ್ಳಿಯಲ್ಲಿ ಎಲ್ಲವೂ ಚೆನ್ನಾಗಿ ಇರುತ್ತದೆ ಎಂದು ಭಾವಿಸಿದ್ದ ಅವರಿಗೆ ಅಲ್ಲೂ ಸಾಕಷ್ಟು ಸವಾಲುಗಳು ಎದುರಾಯಿತು. ಹೆರಿಗೆಯ ಅನಂತರ ದೇಹದಲ್ಲಿನ ಬದಲಾವಣೆಗಳನ್ನು ಗಮನಿಸಿದ ಗ್ರಾಮಸ್ಥರು ಬಾಲಕಿಯ ಕುಟುಂಬವನ್ನು ಬಹಿಷ್ಕರಿಸಿದರು. ಇದರಿಂದ ಅವರು ತಮ್ಮ ಪೂರ್ವಜರ ಗ್ರಾಮವನ್ನು ತೊರೆಯಬೇಕಾಯಿತು.
2000ರಲ್ಲಿ ವಯಸ್ಕಳಾದ ಬಾಲಕಿಗೆ ಮದುವೆ ಮಾಡಿಸಲಾಯಿತು. ವಾರಣಾಸಿಯಲ್ಲಿ ಗಂಡನ ಮನೆಗೆ ಬಂದಾಗ ಅವಳ ಎಲ್ಲಾ ದುಃಖಗಳು ಕೊಂಚ ಕೊನೆಯಾದಂತೆ ಇತ್ತು. ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಒಂದು ದಿನ ಅತ್ತೆಯವರಿಗೆ ವಿಷಯ ತಿಳಿದು ಮಗನನ್ನು ಕರೆದುಕೊಂಡು ಪತಿಯನ್ನು ಬಿಟ್ಟು ಹೋಗುವಂತೆ ಹೇಳಿದರು. ತಂಗಿಯನ್ನು ಬೆಂಬಲಿಸಿದ್ದಕ್ಕಾಗಿ ಆಕೆಯ ಸಹೋದರಿಯೂ ಅವಳ ಪತಿಯನ್ನು ತೊರೆಯಬೇಕಾಯಿತು.
ಮೊದಲ ಮಗ ಮರಳಿ ಬಂದ
2007ರಲ್ಲಿ ಮಹಿಳೆ ತನ್ನ ಮಗುವಿನೊಂದಿಗೆ ಲಕ್ನೋಗೆ ತೆರಳಿ ಹೊಸ ಬದುಕು ಕಟ್ಟಿಕೊಂಡಳು. ಒಂದು ದಿನ ಒಬ್ಬ ಯುವಕ ಆಕೆಯನ್ನು ಹುಡುಕಿಕೊಂಡು ಬಂದಾಗ ಆತನೇ ಆಕೆಯ ಮೊದಲ ಮಗ ಎಂಬುದು ಗೊತ್ತಾಯಿತು. ಬಳಿಕ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸಲು ಪ್ರಾರಂಭಿಸಿದರು. ಮಕ್ಕಳಿಬ್ಬರು ಬೆಳೆದು ದೊಡ್ಡವರಾಗಿ ಕೆಲಸ ಕಂಡುಕೊಂಡರು.
2019ರಲ್ಲಿ ದೊಡ್ಡ ಮಗ ಬಂದು ತಾಯಿಯ ಹಿಂದಿನ ಕಥೆಯನ್ನು ಕೇಳಿ ನಿರಂತರ ಹುಡುಕಾಟದ ಎರಡು ವರ್ಷಗಳ ಬಳಿಕ ಪೊಲೀಸರ ಸಹಾಯದಿಂದ ಅಪರಾಧಿಗಳನ್ನು ಪತ್ತೆಹಚ್ಚಿದ. ತಾಯಿ ಮಗ ಇಬ್ಬರೂ ಸೇರಿ ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಆರಂಭದಲ್ಲಿ ಇವರ ಬಳಿ ಯಾವುದೇ ಸಾಕ್ಷ್ಯ ಇರದೇ ಇದ್ದುದರಿಂದ ಕೊನೆಗೆ ಡಿಎನ್ ಎ ಪರೀಕ್ಷೆ ನಡೆಸಲಾಯಿತು. ಆರೋಪಿಗಳ ವಿರುದ್ಧ ಇದು ಬಲವಾದ ಸಾಕ್ಷಿಯಾಯಿತು.
ಇದನ್ನೂ ಓದಿ: Viral Video: IAS ಅಧಿಕಾರಿ ತಾಯಿಯ ದರ್ಬಾರ್ ನೋಡಿ; ಪಿಸ್ತೂಲ್ ತೋರಿಸಿ ರೈತರಿಗೆ ಬೆದರಿಕೆ
ಕೊನೆಗೆ 2024ರ ಮೇ 20ರಂದು 1994 ಮತ್ತು 1996ರ ನಡುವೆ ಮಹಿಳೆಯು ಕೇವಲ 12 ವರ್ಷದವಳಿದ್ದಾಗ ಎರಡು ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಕ್ಕಾಗಿ ಮೊಹಮ್ಮದ್ ರಾಜಿ ಮತ್ತು ಹಸನ್ ನಾಕಿ ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಷಹಜಹಾನ್‌ಪುರ ಸೆಷನ್ಸ್ ನ್ಯಾಯಾಲಯವು ವಿಧಿಸಿತು. ನ್ಯಾಯಾಲಯವು ಇಬ್ಬರಿಗೂ ತಲಾ 10,000 ರೂ ದಂಡವನ್ನು ವಿಧಿಸಿತು.
ಅಪರಾಧ ಎಸಗಿದಾಗ 25 ಮತ್ತು 22 ವರ್ಷ ವಯಸ್ಸಿನ ಇಬ್ಬರು ಅಪರಾಧಿಗಳು ಈಗ 55 ಮತ್ತು 52 ರ ವಯಸ್ಸಿನವರಾಗಿದ್ದರೆ. ಮಹಿಳೆಗೆ ಈಗ 42 ವರ್ಷ. ಅತ್ಯಾಚಾರದಿಂದ ಜನಿಸಿದ ಅವರ ಮಗನಿಗೆ ಈಗ 30 ವರ್ಷ.