Site icon Vistara News

Sexual Assualt Case: ಅಶ್ಲೀಲ ವಿಡಿಯೊ ವೀಕ್ಷಿಸಿ ಉದ್ರೇಕಗೊಂಡ ಮೂವರು ಶಾಲಾ ಬಾಲಕರಿಂದ ಬಾಲಕಿಯ ಅತ್ಯಾಚಾರ, ಕೊಲೆ

Sexual Assault case

ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು (porn video) ವೀಕ್ಷಿಸಿ ಉದ್ರೇಕಗೊಂಡ ಮೂವರು ಬಾಲಕರು ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ (Sexual Assualt Case) ನಡೆಸಿ ಕೊಲೆ (rape and murder) ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಮೂವರು ಬಾಲಕರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಆಂಧ್ರಪ್ರದೇಶದ (Andhra school boys) ನಂದ್ಯಾಲ್ ಜಿಲ್ಲೆಯಲ್ಲಿ ಜುಲೈ 7ರಂದು ದೇವಸ್ಥಾನವೊಂದರಲ್ಲಿ 12 ವರ್ಷದ ಇಬ್ಬರು ಮತ್ತು 13 ವರ್ಷದ ಒಬ್ಬ ಸೇರಿ ಮೂವರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದರು. ಬಳಿಕ ಕೊಲೆ ಮಾಡಿದ್ದರು.

3ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಜುಲೈ 10ರಂದು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಮೂವರೂ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳಲ್ಲಿ ಇಬ್ಬರು ಆರನೇ ತರಗತಿಯಲ್ಲಿ ಓದುತ್ತಿದ್ದು, ಒಬ್ಬ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಅತ್ಯಾಚಾರದ ಬಳಿಕ ಬಾಲಕಿ ಪೋಷಕರಿಗೆ ದೂರು ನೀಡಬಹುದು ಎಂಬ ಭಯದಿಂದ ಮೂವರು ಅಪ್ರಾಪ್ತರನ್ನು ಕತ್ತು ಹಿಸುಕಿ ಕೊಂದಿದ್ದಾರೆ. ಆರೋಪಿಯ ತಂದೆ ಮತ್ತು ಚಿಕ್ಕಪ್ಪ ಸೇರಿ ಬಾಲಕಿಯ ಶವವನ್ನು ಕಾಲುವೆಗೆ ಎಸೆದಿದ್ದಾರೆ ಎಂದು ನಂದ್ಯಾಲ್ ಎಸ್ಪಿ ಅಧಿರಾಜ್ ಸಿಂಗ್ ರಾಣಾ ತಿಳಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬನು ಕೂಡಲೇ ತನ್ನ ಸಂಬಂಧಿಕರಿಗೆ ಕರೆ ಮಾಡಿ ಅಪರಾಧದ ಬಗ್ಗೆ ತಿಳಿಸಿದನು. ಮಕ್ಕಳ ಮೇಲೆ ಕಾನೂನು ಕ್ರಮ ಜರುಗಿಸಬಹುದೆಂಬ ಭಯದಿಂದ ಆತನ ತಂದೆ ಮತ್ತು ಚಿಕ್ಕಪ್ಪ ಸ್ಥಳಕ್ಕೆ ಧಾವಿಸಿ ಬಾಲಕಿಯ ಶವವನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸಿ ಕಲ್ಲಿಗೆ ಕಟ್ಟಿ ಕೃಷ್ಣಾ ನದಿಗೆ ಎಸೆದಿದ್ದಾರೆ. ಅಪ್ರಾಪ್ತರು ಮತ್ತು ಸಂಬಂಧಿಕರನ್ನು ಬಂಧಿಸಲಾಗಿದೆ ಎಂದು ರಾಣಾ ತಿಳಿಸಿದ್ದಾರೆ.

ಮುಚ್ಚುಮರಿ ಉದ್ಯಾನವನದ ಬಳಿ ಆಟವಾಡುತ್ತಿದ್ದ ಬಾಲಕಿಗೆ ಈ ಬಾಲಕರ ಪರಿಚಯವಿತ್ತು. ಹೀಗಾಗಿ ಅವರು ತಮ್ಮೊಂದಿಗೆ ಆಟವಾಡಲು ಆಕೆಯ ಮನವೊಲಿಸಿ ಕರೆದುಕೊಂಡು ಹೋಗಿದ್ದರು. ಅನಂತರ ಅವರು ಆಕೆಯ ಬಾಯಿಯನ್ನು ಬಿಗಿದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದರು.

ಇದನ್ನೂ ಓದಿ: Sexual Abuse: ಶಾಲಾ ಬಾಲಕಿಯನ್ನು ಕ್ರೂರವಾಗಿ ಥಳಿಸಿ ಗುಪ್ತಾಂಗಕ್ಕೆ ಕೋಲು ತುರುಕಿದ ಮಹಿಳೆ!

ಬಾಲಕಿಯ ಶವಕ್ಕಾಗಿ ಶೋಧ

ಬಾಲಕಿಯ ಮೃತ ದೇಹ ಇನ್ನೂ ಪತ್ತೆಯಾಗಿಲ್ಲ. ಆದರೆ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಆರು ಪೊಲೀಸ್ ತಂಡಗಳು, ಪರಿಣತ ಈಜುಗಾರರು, ಶ್ವಾನದಳ, ಡ್ರೋನ್ ಕೆಮರಾ, ತಾಂತ್ರಿಕ ತಂಡಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎಂದು ರಾಣಾ ತಿಳಿಸಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಆರ್ಥಿಕ ನೆರವು ಮಂಜೂರು ಮಾಡಿದ್ದಾರೆ.

Exit mobile version