Site icon Vistara News

Share Market Scam: ಮುಖೇಶ್ ಅಂಬಾನಿ ಡೀಪ್ ಫೇಕ್‌! 7 ಲಕ್ಷ ರೂ. ಕಳೆದುಕೊಂಡ ವೈದ್ಯೆ

Share Market Scam

ಮುಂಬಯಿ: ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ (Mukesh Ambani) ಅವರ ಡೀಪ್‌ಫೇಕ್ (Deepfake) ರೀಲ್ ನಿಂದ ಪ್ರಭಾವಿತಳಾದ ವೈದ್ಯಯೊಬ್ಬರು “ಷೇರ್ ಮಾರ್ಕೆಟ್ ಹಗರಣ”ದಲ್ಲಿ (Share Market Scam) 7 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮುಂಬಯಿನಲ್ಲಿ (Mumbai) ನಡೆದಿದೆ. ಈ ಕುರಿತು ವೈದ್ಯೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಂಧೇರಿಯಲ್ಲಿ ನೆಲೆಸಿರುವ 54 ವರ್ಷದ ಆಯುರ್ವೇದ ವೈದ್ಯರಾದ ಡಾ.ಕೆ.ಎಚ್. ಪಾಟೀಲ್ ಅವರು ಏಪ್ರಿಲ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ನೋಡಿ ವಂಚನೆಗೆ ಒಳಗಾಗಿದ್ದಾರೆ.

ಏಪ್ರಿಲ್ 15- 17ರ ನಡುವೆ ಷೇರು ಮಾರುಕಟ್ಟೆ ಹಗರಣದಲ್ಲಿ 7 ಲಕ್ಷ ರೂ.ಗೂ ಹೆಚ್ಚು ನಷ್ಟವನ್ನು ಕಳೆದುಕೊಂಡಿರುವುದಾಗಿ ವೈದ್ಯೆ ಡಾ. ಪಾಟೀಲ್ ದೂರಿನಲ್ಲಿ ತಿಳಿಸಿದ್ದಾರೆ. ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಡೀಪ್‌ಫೇಕ್ ರೀಲ್ ಅನ್ನು ಇನ್ ಸ್ಟಾಗ್ರಾಮ್ ನಲ್ಲಿ ನೋಡಿದ ಡಾ. ಪಾಟೀಲ್ ಅದರಿಂದ ಪ್ರಭಾವಿತರಾಗಿ ಹೂಡಿಕೆ ಮಾಡಲು ನಿರ್ಧರಿಸಿದ್ದರು. ಬಳಿಕ ಅವರನ್ನು ಲಿಂಕ್ ಮೂಲಕ ವಾಟ್ಸಾಪ್ ಗ್ರೂಪ್‌ಗೆ ಸೇರಿಸಿ ಲಾಭದ ಭರವಸೆ ನೀಡಲಾಯಿತು. ಆಪ್ ಡೌನ್‌ಲೋಡ್ ಮಾಡಿ ವಿವಿಧ ಖಾತೆಗಳಲ್ಲಿ ಹಣ ಜಮಾ ಮಾಡುವಂತೆ ಮಾಡಲಾಗಿತ್ತು ಎಂದು ಡಾ. ಪಾಟೀಲ್ ದೂರಿನಲ್ಲಿ ತಿಳಿಸಿದ್ದಾರೆ.

ಡಾ. ಪಾಟೀಲ್ ಏಪ್ರಿಲ್ 15 ರಂದು ತಮ್ಮ ಇನ್ ಸ್ಟಾ ಗ್ರಾಮ್ ಫೀಡ್‌ನಲ್ಲಿ ಡೀಪ್‌ಫೇಕ್ ವಿಡಿಯೋವನ್ನು ನೋಡಿದರು. ರಾಜೀವ್ ಶರ್ಮಾ ಟ್ರೇಡ್ ಗ್ರೂಪ್ ಹೆಸರಿನ ಟ್ರೇಡಿಂಗ್ ಅಕಾಡೆಮಿಯ ಯಶಸ್ಸನ್ನು ಪ್ರಚಾರ ಮಾಡುವ ಅಂಬಾನಿಯನ್ನು ಒಳಗೊಂಡಿರುವ ವಿಡಿಯೋ ಮತ್ತು ಹೂಡಿಕೆಯ ಮೇಲಿನ ಹೆಚ್ಚಿನ ಲಾಭಕ್ಕಾಗಿ ಬಿಸಿಎಫ್ ಅಕಾಡೆಮಿಗೆ ಸೇರಲು ಜನರನ್ನು ಒತ್ತಾಯಿಸಿತು.


ಆ ಗುಂಪನ್ನು ಆನ್‌ಲೈನ್‌ನಲ್ಲಿ ಹುಡುಕಿದಾಗ ಅವರು ಲಂಡನ್‌ ಮತ್ತು ಮುಂಬಯಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಕಚೇರಿಗಳನ್ನು ಹೊಂದಿದ್ದಾರೆಂದು ಎಂದು ತಿಳಿಯಿತು. ಡಾ. ಪಾಟೀಲ್ ಅವರು ಆನ್‌ಲೈನ್‌ನಲ್ಲಿ ಅಕಾಡೆಮಿಯನ್ನು ಸಂಪರ್ಕಿಸಿದರು. ಮೇ ಮತ್ತು ಜೂನ್ ನಡುವೆ ಒಟ್ಟು 7.1 ಲಕ್ಷ ರೂ. ಅನ್ನು ಹೂಡಿಕೆಯನ್ನು ಮೇಲ್ವಿಚಾರಣೆ ಮಾಡುವ ಖಾತೆಯನ್ನು ಒದಗಿಸಲಾಯಿತು. ಅದರಲ್ಲಿ 30 ಲಕ್ಷ ರೂ. ಲಾಭವಾಗಿರುವುದು ತೋರಿಸಿತ್ತು. ಈ ತಿಂಗಳು ಮೊತ್ತವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ತಾನು ಮೋಸ ಹೋಗಿರುವುದನ್ನು ಅರಿತ ಅವರು ಪೊಲೀಸರಿಗೆ ದೂರು ನೀಡಿದ್ದಾಳೆ.

ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 419 ಮತ್ತು 420 ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಡಾ. ಪಾಟೀಲ್‌ 16 ಬ್ಯಾಂಕ್ ಖಾತೆಗಳಿಗೆ ಡಾ. ಪಾಟೀಲ್ ಹಣವನ್ನು ವರ್ಗಾಯಿಸಿದ್ದಾರೆ ಎನ್ನಲಾಗಿದೆ.

Exit mobile version