Site icon Vistara News

ISIS Terrorist : ದೆಹಲಿಯಲ್ಲಿ ಶಿವಮೊಗ್ಗ ಮೂಲದ ಐಸಿಸ್‌ ಉಗ್ರ ಅರಾಫತ್‌ ಅಲಿ ಸೆರೆ

ISIS Terrorist

6 Aligarh Muslim University students arrested for working as ISIS operative

ನವ ದೆಹಲಿ / ಶಿವಮೊಗ್ಗ: ಶಿವಮೊಗ್ಗ ಮೂಲದ ಐಸಿಸ್ ಉಗ್ರ (ISIS Terrorist) ಆರೋಪಿ ಅರಾಫತ್ ಅಲಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ (Delhi Airport) ಎನ್‌ಐಎ ಅಧಿಕಾರಿಗಳ (NIA officers) ತಂಡ ಬಂಧಿಸಿದೆ. 2020ರಿಂದ ತಲೆಮರೆಸಿಕೊಂಡಿದ್ದ ಅರಾಫತ್ ಅಲಿಯನ್ನು (Arafat Ali) ಬಂಧಿಸುವಲ್ಲಿ ಎನ್‌ಐಎ ಸಫಲವಾಗಿದೆ.

ಅರಾಫತ್ ಅಲಿ ಕೀನ್ಯಾದ ನೈರೋಬಿಯಿಂದ (Nairobi in Kenya) ಬರುತ್ತಿದ್ದಾಗ ದೆಹಲಿಯಲ್ಲಿ ಬಂಧನ ಮಾಡಲಾಗಿದೆ. ಈ ಮೂಲಕ ವಿದೇಶಿ ಮೂಲದ ಮಾಡ್ಯೂಲ್‌ಗಳ ಪಿತೂರಿಯನ್ನು ಎನ್ಐಎ ಭೇದಿಸಿದಂತಾಗಿದೆ. ಈ ಬೆಳವಣಿಗೆಯಿಂದ ಎನ್ಐಎ ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ.

ಇದನ್ನೂ ಓದಿ: Drought Taluk : 161 ತಾಲೂಕಲ್ಲಿ 11 ಜಿಲ್ಲೆಗಳು ಸಂಪೂರ್ಣ ಬರ; ಬಾಧಿತ ತಾಲೂಕಗಳ ಪಟ್ಟಿ ಇಲ್ಲಿದೆ

ಐಸಿಸ್ ಪ್ರಚಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಅರಾಫತ್, ಹಲವು ಉಗ್ರ ಚಟುವಟಿಕೆಯಲ್ಲಿ (Terrorist activity) ಭಾಗಿಯಾಗಿದ್ದ ಎನ್ನಲಾಗಿದೆ. ಇಸ್ಲಾಮಿಕ್ ಸ್ಟೇಟ್‌ನ (Islamic State) ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾವನ್ನು (Anti India terrorist agenda) ಉತ್ತೇಜಿಸಲು ಈತ ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿದ್ದ.

ಯುವಕರನ್ನು ಐಸಿಸ್‌ಗೆ ಸೇರಿಸುತ್ತಿದ್ದ!

ಮುಸ್ಲಿಂ ಯುವಕರನ್ನು ಐಸಿಸ್‌ಗೆ ಸೇರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅರಾಫತ್‌, ಕುಕ್ಕರ್ ಸ್ಫೋಟ ಉಗ್ರ ಮೊಹಮ್ಮದ್ ಶಾರಿಕ್ ಸಹಚರರೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿತ್ತು.

ಕುಕ್ಕರ್‌ ಸ್ಫೋಟದ ಹಿಂದೆ ಕರಿನೆರಳು

ಮೊಹಮ್ಮದ್ ಶಾರಿಕ್ ಎಂಬ ಶಂಕಿತ ಉಗ್ರ ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಪ್ರೆಶರ್ ಕುಕ್ಕರ್ ಐಇಡಿ ಅಳವಡಿಸಲು ಹೋಗುತ್ತಿದ್ದಾಗ, ಆಟೋ ರಿಕ್ಷಾದಲ್ಲಿ ಆಕಸ್ಮಿಕವಾಗಿ ಸ್ಫೋಟಗೊಂಡಿತ್ತು. ಈ ಕುಕ್ಕರ್ ಸ್ಫೋಟದ ಹಿಂದಿನ ಪಿತೂರಿಯಲ್ಲಿ ಇವನು ಸಹ ಇದ್ದ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಚಟುವಟಿಕೆಯನ್ನು ನಿರಂತರವಾಗಿ ನಿಗಾ ಇಟ್ಟು ಗಮನಿಸುತ್ತಿದ್ದ ಎಂದು ತಿಳಿದುಬಂದಿದೆ.

ಮಂಗಳೂರು ಗೋಡೆ ಬರಹದಲ್ಲೂ ಅರಾಫತ್‌ ಕೈವಾಡ

2020ರ ಮಂಗಳೂರು ಗೀಚುಬರಹ ಪ್ರಕರಣದಲ್ಲೂ ಅರಾಫತ್ ಆರೋಪಿಯಾಗಿದ್ದಾನೆ.ಅರಾಫತ್ ಅಲಿ ನಿರ್ದೇಶನದ ಮೇರೆಗೆ ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್ ಗೋಡೆ ಬರಹ ಬರೆದಿದ್ದರು ಎಂದು ಎನ್‌ಐಎ ತನಿಖೆ ವೇಳೆ ತಿಳಿದುಬಂದಿತ್ತು.

ಇದನ್ನೂ ಓದಿ: Karnataka Road : ರಸ್ತೆ ಅವ್ಯವಹಾರಕ್ಕೆ ಬೀಳುತ್ತೆ ಬ್ರೇಕ್; ಗುಣಮಟ್ಟ, ನಕಲಿ ಬಿಲ್‌‌ ದೂರಿಗೆ ಸಿದ್ಧವಾಗಿದೆ ಆ್ಯಪ್‌!

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅರಾಫತ್‌ ಮೇಲೆ ಕಣ್ಣಿಟ್ಟಿದ್ದ ಎನ್‌ಐಎ, ಆತ ನವ ದೆಹಲಿಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಬಂಧಿಸಿ ಕರೆದೊಯ್ದಿದೆ. ಈಗ ಈತನನ್ನು ವಿಚಾರಣೆಗೆ ಒಳಪಡಿಸಲಿದ್ದು, ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

Exit mobile version